ಶ್ರೀ ಗುರು ಎಚ್ಚರಿಕೆ ಕಾಯಕದ ಮುಕ್ತಿನಾಥಯ್ಯ ಗುರುಗಳ ಜಯಂತಿಯು ಬಹು! – ವಿಜೃಂಭಣೆಯಿಂದ ಜರುಗಿತು.
ಕಟ್ಟಿಸಂಗಾವಿ ಡಿ.21

ಅಖಿಲ ಕರ್ನಾಟಕ ಹೆಳವರ ಸಮಾಜ (ರಿ) ಕಟ್ಟಿಸಂಗಾವಿ ವತಿಯಿಂದ ಹಾಗೂ ಬಸವರಾಜ್ ಹೆಳವರ ಕಟ್ಟಿ ರವರ ನೇತೃತ್ವದಲ್ಲಿ ನಡೆಯಿತು. 12 ನೇ. ಶತಮಾನದಲ್ಲಿ ಬಸವಣ್ಣನವರು ಎಲ್ಲಾ ಸಾಮಾಜಿಕ ನ್ಯಾಯದೊಂದಿಗೆ ಪ್ರತಿ ಸಮಾಜವು ಕಾಯಕದಲ್ಲಿ ಇರಲಿ ಎಂದು ಎಲ್ಲಾ ವರ್ಗದ ಶರಣ ಸಂತರಿಗೂ ಕಾಯಕದ ಇದರ ಕಲ್ಪನೆ ಎಂಬ ಬುತ್ತಿ ನೆತ್ತಿ ಮೇಲೆ ಇಟ್ಟು ಕಾಯಕವೆ ಕೈಲಾಸ ಎಂದರು. ಅದೆ ಮಾರ್ಗದಲ್ಲಿ ನಮ್ಮ ಹೆಳವರ ಸಮುದಾಯದ ಗುರುಗಳಾದ ಶ್ರೀ ಗುರು ಎಚ್ಚರಿಕೆ ಮುಕ್ತಿನಾಥಯ್ಯ ನವರಿಗೆ ದಿನಾಲು ಸೂರ್ಯ ಹುಟ್ಟುವ ಮುಂಚೆ ಬೆಳಿಗ್ಗೆ ಎಲ್ಲಾರನ್ನು ಬೇಗ ಬೇಗ ಎದ್ದೇಳಿಸುವಂತೆ, ಎಚ್ಚರಿಕೆ ಗಂಟೆಯ ಕಾಯಕವನ್ನು ಬಸವಣ್ಣನವರು ನೀಡಿದರು.

ಅದರಂತಯೇ ಮುಕ್ತಿನಾಥಯ್ಯ ಗುರುಗಳು ಕಲ್ಯಾಣದಲ್ಲಿ ಜನರನ್ನು ತಮ್ಮ ತಮ್ಮ ಕಾಯಕದಲ್ಲಿ ತೋಡಗ ಬೇಕೆಂದು ಎಚ್ಚರಿಸುತ್ತಾ ಕಲ್ಯಾಣ ನಾಡಲ್ಲಿ ತಮ್ಮ ಕಾಯಕವನ್ನು ನಿಭಾಯಿಸುತ್ತಿದ್ದರು. ಇಂತಹಾ ಶರಣರ ನಾಡಿನಲ್ಲಿ ಇಂತಹ ಒಂದು ಸಮಾಜವು ಇದ್ದು, ಬಸವಣ್ಣನವರ ಶರಣ ತತ್ವ , ಸಾಮಾಜಿಕ ನ್ಯಾಯದೊಂದಿಗೆ ಬದುಕಲು ಪ್ರೇರಣೆ ಸಿಕ್ಕಿರುವುದು ನಮ್ಮೆಲ್ಲರ ಪುಣ್ಯದ ಕೆಲಸ. ಈ ಸಂದರ್ಭದಲ್ಲಿ ಬಸವರಾಜ ಹೆಳವರ ಕಟ್ಟಿ, ಪಾಪಣ್ಣ ಹೆಳವರ, ಪರಶುರಾಮ ಹೆಳವರ, ಚಿರಂಜೀವಿ ಹೆಳವರ, ಮರೇಪ್ಪ ಹೆಳವರ, ಯಲ್ಲಪ್ಪ ಹೆಳವರ, ಲಾಲಪ್ಪ ಹೆಳವರ, ಕಟ್ಟಿ ಸಂಗಾವಿ ಗ್ರಾಮದ ಸಮಾಜದ ಬಂಧುಗಳು, ಹಿರಿಯ ಮುಖಂಡರಗಳು, ಗ್ರಾಮ ಪಂಚಾಯತ ಹಾಲಿ, ಮಾಜಿ, ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಹಾಗೂ ಗ್ರಾಮದ ನಾಗರಿಕರು ಪಕ್ಷಾತೀತವಾಗಿ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಾಶಂಕರ್.ಎನ್.ನೀಲಕೋಡ.ಜೇವರ್ಗಿ