ರೈತ ಸಂಪರ್ಕ ಕೇಂದ್ರದಿಂದ ಬೆಳೆ ಪದ್ಧತಿ ಕುರಿತು – ರೈತರಿಗೆ ತರಬೇತಿ.
ತೂಲಹಳ್ಳಿ ಡಿ.21

ಕೊಟ್ಟೂರು ತಾಲೂಕಿನ ತೂಲಹಳ್ಳಿ ಗ್ರಾಮದಲ್ಲಿ ಕೃಷಿ ಇಲಾಖೆಯಿಂದ ಎಫ್.ಎನ್.ಎಸ್ ಆಹಾರ ಮತ್ತು ಪೌಷ್ಠಿಕ ಭದ್ರತೆ ಯೋಜನೆಯಡಿ ಹಾಗೂ ಎನ್.ಎಂ.ಇ.ಓ ರಾಷ್ಟ್ರೀಯ ಖಾದ್ಯತೈಲ ಅಭಿಯಾನದಡಿ ಎಣ್ಣೆಕಾಳು ಮತ್ತು ಟಿ.ಆರ್.ಎಫ್.ಎ ಎಣ್ಣೆಕಾಳು ಕಾರ್ಯಕ್ರಮದಡಿ ಕ್ಷೇತ್ರೋತ್ಸವ ಮತ್ತು ಬೆಳೆ ಪದ್ಧತಿ ಕುರಿತು ರೈತರಿಗೆ ತರಬೇತಿ ಕಾರ್ಯಕ್ರಮವನ್ನು ರೈತ ಸಂಪರ್ಕ ಕೇಂದ್ರ ಕೊಟ್ಟೂರು ಇವರಿಂದ ನೆರವೇರಿಸಲಾಯಿತು.

ಇಲ್ಲಿ ಕೃಷಿ ಸಂಪನ್ಮೂಲ ವ್ಯಕ್ತಿಗಳಿಂದ ರೈತರಿಗೆ ಬೆಳೆ ಪದ್ಧತಿ ಹೇಗಿರಬೇಕು. ಯಾವ ಸಂದರ್ಭದಲ್ಲಿ ಯಾವ ಔಷಧಿಗಳನ್ನು ಗೊಬ್ಬರಗಳನ್ನು ಬಳಸಬೇಕು ಬೀಜ ಬಿತ್ತನೆ ಮಾಡುವ ಸಂದರ್ಭ ಯಾವಾಗ ಹೀಗೆ ಹಲವಾರು ರೈತರಿಗೆ ಅನುಕೂಲವಾಗುವ ಕಾರ್ಯಕ್ರಮವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಶ್ಯಾಮ್ ಸುಂದರ್ ಕೃಷಿ ಅಧಿಕಾರಿ ಕೊಟ್ಟೂರು, ಡಿ.ಭರಮನಗೌಡ ಗ್ರಾಮ ಪಂಚಾಯಿತಿ ಅಧ್ಯಕ್ಷರು ತೂಲಹಳ್ಳಿ, ಸಕ್ರಪ್ಪ ಮತ್ತು ತಿಪ್ಪೇಸ್ವಾಮಿ ರೈತ ಸಂಪನ್ಮೂಲ ವ್ಯಕ್ತಿಗಳು, ಜಿ.ಶರಣಪ್ಪ ಮಾಜಿ ತಾಲೂಕ ಪಂಚಾಯತಿ ಸದಸ್ಯರು, ಸಂತೋಷ್ ಗ್ರಾಂ.ಪಂ ಸದಸ್ಯರು, ಊರಿನ ಮುಖಂಡರಾದ ಹಾಲಪ್ಪ.ವೈ, ಪುಟ್ಟನ ಗೌಡ, ಟಿ.ಕೆ ಕುಬೇರಗೌಡ್ರು, ಯು.ಮಂಜುನಾಥ್ ಗೌಡ್ರು, ಕಾಳೇರ್ ಸಿದ್ದಪ್ಪ ಮತ್ತಿತರರು ತಿಮ್ಮಪ್ಪ ಲೆಕ್ಕ ಸಹಾಯಕರು ಕೃಷಿ ಇಲಾಖೆ ಸಹಾಯಕ ತಾಂತ್ರಿಕ ಅಧಿಕಾರಿ ಕೃಷಿ ಇಲಾಖೆ ಮತ್ತಿತರರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು