ಅನುದಾನ ದುರ್ಬಳಕೆ ಮಾಡಿದ ಪಿಡಿಓ ಬಸವರಾಜರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ – ಬುಡ್ಡಪ್ಪ ಕರೇಗುಡ್ಡ ಆಗ್ರಹ.
ಕರೇಗುಡ್ಡ ಡಿ.22

ಒಂದೇ ಕಾಮಗಾರಿಗೆ ಎರಡು ಸಾರಿ ಅನುದಾನ ಬಿಡುಗಡೆ ಮಾಡಿ ಸರ್ಕಾರದ ಹಣ ದುರ್ಬಳಕೆ ಮಾಡಿದ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಬಸವರಾಜ ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ದುರ್ಬಳಕೆಯಾದ 01 ಅನುದಾನವನ್ನು ಮರಳಿ ಸರ್ಕಾರದ ಬೊಕ್ಕಸಕ್ಕೆ ಪಡೆದು ಕೊಳ್ಳುವಂತೆ ದಲಿತ ಸಂಘರ್ಷ ಸಮಿತಿ (ಭೀಮ ಬಣ) ದ ಪ್ರಧಾನ ಕಾರ್ಯದರ್ಶಿ ಬುಡ್ಡಪ್ಪ ಕರೇಗುಡ್ಡ ಅವರು ದೂರು ನೀಡಿದ್ದಾರೆ. ಮಾನ್ವಿ ತಾಲೂಕಿನ ನಕ್ಕುಂದಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕರೇಗುಡ್ಡ ಗ್ರಾಮದ ಆರ್.ಓ ಪ್ಲಾಂಟ್‌ನಿಂದ ಬಸವಲಿಂಗಪ್ಪನ ಮನೆಯವರೆಗೆ ಹೊಸ ಪೈಪಲೈನ್ ಮಾಡುವುದು. ಕರೇಗುಡ್ಡ ಗ್ರಾಮದ ಓವರ್ ಟ್ಯಾಂಕಿನ ಕಬ್ಬಿಣದ ಹೊಸ ಪೈಪ್ ಲೈನ್ ಮಾಡುವುದು. ಪಾರ್ವತಮ್ಮ ಕ್ಯಾಂಪಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕುಡಿಯುವ ನೀರಿನ ಹೊಸ ಪೈಪ್ ಲೈನ್ ಮಾಡುವುದಾಗಿ ಈ ಮೂರು ಕಾಮಗಾರಿಗಳ ಒಟ್ಟು ಹಣ ರೂ.2.00 ಲಕ್ಷಗಳನ್ನು ಈಗಾಗಲೇ 2022-23 ನೇ. ಸಾಲಿನಲ್ಲಿ ಕಾಮಗಾರಿ ನಿರ್ವಹಿಸಿ ಹಣ ಬಿಡುಗಡೆ ಮಾಡಿರುತ್ತಾರೆ. ಅದೇ ಕಾಮಗಾರಿಗಳನ್ನು ತೋರಿಸಿದ ಎರಡನೇ ಬಾರಿ ಹಣ ಮಂಜೂರು ಮಾಡಿ ದುರ್ಬಳಕೆ ಮಾಡಿರುತ್ತಾರೆ. ಮತ್ತು ನಕ್ಕುಂದಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಒಟ್ಟು 14 ಕುಡಿಯುವ ನೀರಿನ ಕೊಳವೆ ಬಾವಿಗಳ ಮೋಟಾರ್ ಖರೀದಿ ಮತ್ತು ದುರಸ್ತಿ ಒಟ್ಟು ರೂ.3,91,609/- ಗಳ ಅನುದಾನವನ್ನು ದುರ್ಬಳಕೆ ಮಾಡಿರುತ್ತಾರೆ. 14 ಮೋಟರ್ ಗಳನ್ನು ಖರೀದಿ ಮಾಡಿರುವುದಾಗಿ ಬಿಲ್ ಪಾವತಿಸಿರುತ್ತಾರೆ. ಈಗ ಹುಡುಕಿದರೆ ಒಂದು ಮೋಟರ್ ಇರುವುದಿಲ್ಲ. ಹಾಗಾದರೆ 14 ಮೋಟರ್ ಗಳು ಎಲ್ಲಿಗೆ ಹೋದವು. ಯಾರ ಮನೆಗಳ ಸೇರಿದವು ಎಂಬುದು ನಮ್ಮ ಯಕ್ಷ ಪ್ರಶ್ನೆಯಾಗಿದೆ. ಸದರಿ ಅಧಿಕಾರಿಯು ಸರ್ಕಾರದ ಅನುದಾನವನ್ನು ಹೆಗ್ಗಿಲ್ಲದೇ ಹಣ ದುರ್ಬಳಕೆ ಮಾಡುತ್ತಿರುವುದನ್ನು ನೋಡಿದರೆ ಗ್ರಾಮಗಳು ಅಭಿವೃದ್ಧಿ ಯಾಗುವುದಾದರೋ ಹೇಗೆ ಆದ್ದರಿಂದ ಹಣ ದುರ್ಬಳಕೆ ಮಾಡಿದ ಅಧಿಕಾರಿಯ ಮೇಲೆ ಭ್ರಷ್ಟಾಚಾರ ಕಾಯ್ದೆ 1988 (49) ಕೇಂದ್ರ ಸರ್ಕಾರ ಕಾಯ್ದೆ 13 ರಂತೆ ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು, ದುರ್ಬಳಕೆ ಮಾಡಿದ ಅನುದಾನವನ್ನು ಸರ್ಕಾರದ ಬೊಕ್ಕಸಕ್ಕೆ ಮರು ಪಾವತಿಸಿ ಕೊಳ್ಳಬೇಕೆಂದು ಒತ್ತಾಯಿಸಿದರು. ಒಂದು ವೇಳೆ ಸದರಿ ವಿಷಯದ ಬಗ್ಗೆ ತಾವುಗಳು ನಿರ್ಲಕ್ಷ್ಯ ಧೋರಣೆ ತೋರಿದಲ್ಲಿ ಈ ಎಲ್ಲಾ ಭ್ರಷ್ಟಾಚಾರಕ್ಕೆ ತಾವುಗಳು ನೇರ ಹೊಣೆಗಾರ ರೆಂದು ಪರಿಗಣಿಸಿ ಮೇಲಾಧಿಕಾರಿಗಳಿಗೆ ಅಥವಾ ಲೋಕಾಯುಕ್ತದಲ್ಲಿ ತಮ್ಮ ಮೇಲೆ ದಾವೆ ಹೂಡಲಾಗುವ ದೆಂದು ದೂರಿನ ಮೂಲಕ ಎಚ್ಚರಿಕೆ ನೀಡಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ