ಸರ್ಕಾರಿ ? ಆಸ್ತಿ! ಎಂದು ಭಾವಿಸದೆ? . ನಮ್ಮ! ಆಸ್ತಿ? ಎಂದು ಭಾವಿಸಿ! – ಶ್ರವಣಕುಮಾರ ಡಿ ನಾಯಕ.
ಇಜೇರಿ ಡಿ.23

ಯಡ್ರಾಮಿ ತಾಲೂಕಿನ ಇಜೇರಿಯಲ್ಲಿ ನಡೆದ ಕ.ಕ.ರಾ.ರ. ಸಾ. ಸಂಸ್ಥೆ ಕಲಬುರಗಿ ವಿಭಾಗ 2 ವತಿಯಿಂದ ಹಮ್ಮಿಕೊಂಡ ಇಜೇರಿ ಬಸ್ ನಿಲ್ದಾಣದಲ್ಲಿ ದೇಣಿಗೆ ಸಮಾರ್ಪಣಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶ್ರವಣಕುಮಾರ ಡಿ ನಾಯಕ ರವರುಇಜೇರಿ ಗ್ರಾಮದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಂದ ದೇಣಿಗೆ ರೂಪದಲ್ಲಿ ನೀಡಿರುವ 30 ಆಸನಗಳನ್ನು ಸಾರ್ವಜನಿಕರಿಗೆ ಬಳಕೆ ಮಾಡಲು ಚಾಲನೆ ನೀಡಿ.

ಮಾತನಾಡಿದ ಸಾಮಾಜಿಕ ಹೋರಾಟಗಾರರಾದ ಶ್ರವಣಕುಮಾರ ಡಿ ನಾಯಕ ರವರು ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಕೂಡಲು ಆಸನದ ವ್ಯವಸ್ಥೆ ಇರದ ಕಾರಣ ಬಸ್ ನಿಲ್ದಾಣದಲ್ಲಿ ಆಸನಗಳ ವ್ಯವಸ್ಥೆ ಮಾಡಿದ್ದು ಬಹಳ ಸಂತೋಷದ ವಿಷಯ ಪ್ರತಿಯೊಬ್ಬರು ಕೂಡ ಸ್ವಯಂ ಸೇವೆ ಸಲ್ಲಿಸಿದ್ದಾರೆ.

ಮುಂಬರುವ ದಿನದಲ್ಲಿ ಗ್ರಾಮದ ಅಭಿವೃದ್ಧಿಗೆ ಕೈಜೋಡಿಸ ಬೇಕು ಹಾಗೂ ಬಸ ನಿಲ್ದಾಣವನ್ನು ಸ್ವಚ್ಚವಾಗಿ ಕಾಪಾಡಬೇಕು ಸರ್ಕಾರಿ ಆಸ್ತಿ ಎಂದು ಭಾವಿಸದೆ ನಮ್ಮ ಆಸ್ತಿ ಎಂದು ತಿಳಿದುಕೊಂಡು ಸರ್ಕಾರದ ಆಸ್ತಿ ರಕ್ಷಣೆ ಮಾಡಿದ್ರೇ ಮಾತ್ರ ಮುಂದಿನ ಪೀಳಿಗೆಗೆ ಅನುಕೂಲ ವಾಗುತ್ತದೆಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು .ಇನ್ನೂ ಈ ಕಾರ್ಯಕ್ರಮವನ್ನು ಮಕ್ಬುಲ್ ನಾಶಿ ರವರು ನಿರರೂಪಿಸಿ, ಸೈದಪ್ಪ ಹೊಸಮನಿ ರವರು ಸ್ವಾಗತಿಸಿ ಹೊನ್ನಪ್ಪ ಬಡಿಗೇರ್ ಅವರು ಒಂದಿಸಿದರು.

ಈ ಸಂದರ್ಭದಲ್ಲಿ ಯಡ್ರಾಮಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರುಕುಂ ಪೊಲೀಸ್ ಪಟೇಲ, ಲಾಲಯ್ಯ ಗುತ್ತೇದಾರ್, ಗ್ರಾಮ ಪಂಚಾಯತಿ ಅಧ್ಯಕ್ಷ ಅಣ್ಣಾರಾಯ ಪಾಟೀಲ್ ಯಂಕಂಚಿ, ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಶ್ರವಣಕುಮಾರ ಡಿ ನಾಯಕ, ರಾಜ್ಯ ರೈತ ಮತ್ತು ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷರಾದ ಅಲ್ಲಾ ಪಟೇಲ್ ಮಾಲಿ ಬಿರಾದಾರ, ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಕಲ್ಬುರ್ಗಿ ಘಟಕ 2 ಜೇವರ್ಗಿ ಡಿಪೋ ವ್ಯವಸ್ಥಾಪಕ ಸಿಬ್ಬಂದಿಗಳಾದ ಜಟ್ಟಪ್ಪ ದೊಡ್ಡಮನಿ. ಶಂಕರಲಿಂಗ ಕೊಂಡುಗೂಳ್ಳಿ. ಅಂಬರೀಶ್ ಕಾಚಾಪುರ್ , ಹಾಗೂ ಇಜೇರಿ ಬಸ್ ನಿಲ್ದಾಣದ ನಿಯಂತ್ರಕ ಅಬ್ದುಲ್ ಗನಿ. ಗ್ರಾಮದ ಹಿರಿಯರುಗಳಾದ ಅಂಬರೀಶ ಸಾವು ಲಿಂಗಸೂರು, ಶರಣು ಸಾವು ಗುಗ್ಗರಿ, ನಿಂಗಣ್ಣ ಚಿಗರಳ್ಳಿ, ವೆಂಕಟೇಶ್ ಗುತ್ತೇದಾರ, ದೌಲತ್ರಾಯ ನೀಲಕೋಡ, ಬಸವರಾಜ ಯಂಕಂಚಿ, ರಾಹುಲ ಮಾದರಿ. ಗ್ರಾಮದ ಮುಖಂಡರುಗಳು ಮತ್ತು ಹಲವು ಸಂಘಟನೆಗಳ ಕಾರ್ಯಕರ್ತರುಗಳು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಾಶಂಕರ.ಎನ್.ನೀಲಕೋಡ.ಇಜೇರಿ