ಸಂಸ್ಕೃತಿ ಮತ್ತು ಸಾಂಸ್ಕಾರದಲ್ಲಿ ಭಾರತ ವಿಶ್ವದಲ್ಲಿಯೇ ಶ್ರೀ ಮಂತ ರಾಷ್ಟ್ರವಾಗಿದೆ – ಶಾಸಕ ಕಾಶಪ್ಪನವರ.

ಹುನಗುಂದ ಡಿಸೆಂಬರ್.23

ಸಂಸ್ಕೃತಿ,ಸಂಪ್ರದಾಯ ಮತ್ತು ಸಂಸ್ಕಾರಕ್ಕೆ ಜಗತ್ತಿನಲ್ಲಿ ಅತ್ಯಂತ ವಿಶೇಷತೆ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೊಂದಿದ ದೇಶ ಭಾರತವಾಗಿದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು. ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾ ಭವನದಲ್ಲಿ ನಡೆದ ಕಾಲೇಜು ನೂತನ ಕಟ್ಟಡದ ಭೂಮಿ ಪೂಜೆ ಮತ್ತು ಸನ್.೨೦೨೩-೨೪ ನೆಯ ಸಾಲಿನ ಸಾಂಸ್ಕೃತಿಕ,ಕ್ರೀಡೆ,ಎನ್‌ಸಿಸಿ,ರೆಡ್ ಕ್ರಾಸ್,ರೇಂಜರ್ಸ,ರೋವರ್ಸ್ ಹಾಗೂ ವಿವಿಧ ಘಟಕಗಳ ಉದ್ಘಾಟನೆ ಮತ್ತು ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಅವರು ಯುವ ಶಕ್ತಿ ಈ ದೇಶದ ಸಂಪತ್ತು.ಅಂತಹ ಯುವ ಶಕ್ತಿಗೆ ಒಳ್ಳೆಯ ಸಂಸ್ಕಾರ ಮತ್ತು ಸಂಸ್ಕೃತಿಯ ಜೊತೆ ಉನ್ನತ ಶಿಕ್ಷಣ ನೀಡವುದು ಮುಖ್ಯ.ಕಾಲೇಜಿನಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಗಳಲ್ಲಿ ಭಾಗವಹಿಸುವುದು ಅಷ್ಟೇ ಮುಖ್ಯವಾಗಿರುತ್ತದೆ.ಅಂತಿಮ ವರ್ಷದ ವಿದ್ಯಾರ್ಥಿಗಳ ಓದಿಗೆ ತೊಂದರೆ ಯಾಗದಂತೆ ಶೈಕ್ಷಣಿಕ ಕಾರ್ಯಕ್ರಮಗಳನ್ನು ಅತ್ಯಂತ ಸಂಕ್ಷಿಪ್ತವಾಗಿ ಮುಗಿಸುವಂತೆ ತಿಳಿಸಿದ್ದಾಗಿದೆ.ಇಂದು ರಾಜ್ಯಾದ್ಯಂತ ಅಥಿತಿ ಉಪನ್ಯಾಸಕರು ತಮ್ಮ ಬೇಡಿಕೆ ಈಡೇರಿಕೆಗಾಗಿ ಮುಷ್ಕರ ನಡೆಸಿದ್ದಾರೆ.ಇದರಿಂದ ಕೆಲವೊಂದು ವಿಷಯಗಳ ಬೋಧನೆಯಲ್ಲಿ ಸ್ಪಲ್ವ ಹಿನ್ನೆಡೆಯಾಗಿದ್ದು.ಉಪನ್ಯಾಸಕ ಬೇಡಿಕೆಗಳನ್ನು ನಮ್ಮ ಸರ್ಕಾರ ಈಡೇರಿಸುವ ಪ್ರಯತ್ನ ನಡೆಸಿದೆ.ಆದಷ್ಟು ಬೇಗನೇ ಮುಷ್ಕರ ಮುಗಿಯುತ್ತೇ ಅಲ್ಲಿವರಿಗೂ ಉಳಿದ ಉಪನ್ಯಾಸಕರ ಸಹಕಾರವನ್ನು ಪಡೆದು ಉತ್ತಮವಾಗಿ ಅಧ್ಯಯನವನ್ನು ಮಾಡುವ ಮೂಲಕ ಉತ್ತಮ ಅಂಕಗಳನ್ನು ಗಳಿಸಬೇಕು.ಸಧ್ಯ ಈ ಕಾಲೇಜನ ಎಲ್ಲ ಕೊರ್ಸಗಳಿಗೆ ಸೇರಿ ೧೭೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು. ಸಂಖ್ಯೆ ಗನುಸಾರವಾಗಿ ಸಿಬ್ಬಂದಿ ಹೊಂದಿದೆ.ಕಾಲೇಜಿಗೆ ಬೇಕಾಗಿರುವ ಮೂಲಭೂತ ಸೌಲಭ್ಯಗಳು ಒದಗಿಸುವ ಕಾರ್ಯವನ್ನು ಮಾಡುತ್ತೇನೆ ಎಂದರು.ಕಾಲೇಜು ಅಭಿವೃದ್ದಿ ಸಮತಿ ಸದಸ್ಯ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಎಸ್.ಜಿ.ಎಮ್ಮಿ ಮಾತನಾಡಿ ವ್ಯಕ್ತಿ ವ್ಯಕ್ತಿತ್ವದ ವಿಕಾಸಕ್ಕೆ ವ್ಯಕ್ತಿಯಲ್ಲಿ ಸೂಪ್ತವಾಗಿ ಅಡಗಿರುವ ಹತ್ತಾರು ಕೌಶಲ್ಯಗಳನ್ನು ಹೊರಗೆ ಹಾಕಲು ಪಠ್ಯ ಪೂರಕ ಚಟುವಟಿಕೆಗಳು ಸಹಾಯಕವಾಗಿವೆ.ಶಿಕ್ಷಣದಿಂದ ಸಾಮಾಜಿಕ ವ್ಯವಸ್ಥೆಯನ್ನು ಕಲಿತು ಕೊಳ್ಳಲು ಸಾಧ್ಯವಾಗಲಿದೆ ಎಂದರುಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ವಿಜಯ ಮಹಾಂತೇಶ ಗದ್ದನಕೇರಿ.ಸದಸ್ಯರಾದ ಸಿ.ಜಿ. ಹವಾಲ್ದಾರ ಮತ್ತು ಎಸ್.ಜಿ. ಎಮ್ಮಿ ಮಾತನಾಡಿದರು. ವೇಮೂ ಮಹಾಂತಯ್ಯ ಗಚ್ಚಿನಮಠ ಸಾನಿಧ್ಯವನ್ನು ವಹಿಸಿದ್ದರು,ಸದಸ್ಯರಾದ ಎಸ್.ಜಿ. ಎಮ್ಮಿ, ಪ್ರೊ ಸಿ.ಜಿ. ಹವಾಲ್ದಾರ, ಬಿ.ಎಂ. ಲೈನದ,ರಾಜಶೇಖರ ಬ್ಯಾಳಿ, ದೇವು ಡಂಬಳ,ಸಾವಿತ್ರಿ ತಪೇಲಿ, ಎ.ಜಿ. ಹುಚನೂರ, ಬಸವರಾಜ ಹೊಸಮನಿ, ಭೀಮಪ್ಪ ಕೊಡಗಾನೂರ,ರಾಣಿ ತೋಪಲಕಟ್ಟಿ, ಹನಮಂತ ನಡುವಿನಮನಿ,ಪಿಕೆಪಿಎಸ್ ಅಧ್ಯಕ್ಷ ದೇವು ಡಂಬಳ ವೇದಿಕೆಯಲ್ಲಿದ್ದರು. ಆರ್‌ಎಂಎಸ್‌ಎ ವಿದ್ಯಾರ್ಥಿ ಚೈತ್ರಾ ಹೂಗಾರ ಸಂಗಡಿಗರು ಪ್ರಾರ್ಥಿಸಿದರು.ಪ್ರಾಚಾರ್ಯ ಸುರೇಶ ಎಚ್.ಎಸ್. ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ದಾನಮ್ಮ ಮಠದ ನಿರೂಪಿಸಿದರು.ನಿಜೇಶಕುಮಾರ ಡಿ. ವಂದಿಸಿದರು.

ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button