ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ – ಜರುಗಿತು.
ರೋಣ ಡಿ.23

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ರೋಣ ಹಾಗೂ ಸರಕಾರಿ ಪ್ರೌಢ ಶಾಲೆ ರೋಣ ಸಂಯುಕ್ತ ಆಶ್ರಯದಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ ಆಯೋಜಿಸಿದ್ದು ಕಾರ್ಯಕ್ರಮ ಅಧ್ಯಕ್ಷತೆಯನ್ನು ಮುಖ್ಯ ಗುರುಗಳಾದ M.N ಕೊಂಗವಾಡ ಅವರು ವಹಿಸಿದ್ದು ಸಂಪನ್ಮೂಲ ವ್ಯಕ್ತಿಗಳಾಗಿ ಜಿಲ್ಲಾ ಜನಜಾಗ್ರತಿ ಸಮಿತಿ ಸದಸ್ಯರಾದ Dr, ವೀರೇಶ್ ಸತ್ತಿಗೇರಿ ಮುಖ್ಯ ಅಥಿತಿಗಳಾಗಿ ಮೇಲ್ವಿಚಾರಕಾರದ ಶ್ರೀ ರಾಘವೇಂದ್ರ ಗುಡಿ ಶಿಕ್ಷಕರಾದ V.A ಮಠ ಶ್ರೀ ಮತಿ ಜಯಶ್ರೀ ಕುರಿ, C.G ಹಿರೇಮಠ್ ಶ್ರೀಮತಿ ರಾಜೇಶ್ವರಿ ಮಾಡಲಗೇರಿ H.P ಗೊರೆಬಾಲ್ ಆಗಮಿಸಿದ್ದರು ಸಂಪನ್ಮೂಲ ವ್ಯಕ್ತಿಗಳು ದುಶ್ಚಟಗಳ ಬಗ್ಗೆ ಮಾದಕ ವಸ್ತುಗಳು ಅದರಿಂದ ಆಗುವ ಸಾಮಾಜಿಕ ಕೌಟುಂಬಿಕ ಪರಿಣಾಮಗಳು ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು. ಮೇಲ್ವಿಚಾರಕರಾದ ರಾಘವೇಂದ್ರ ಗುಡಿ ಅವರು ಯೋಜನೆ ಕಾರ್ಯಕ್ರಮ ಸಮಾಜಕ್ಕೆ ಹೇಗೆ ಉಪಯೋಗ ಆಗಿದೆ ಎನ್ನುವುದರ್ ಮಾಹಿತಿ ನೀಡಿದರು ಹಾಗೂ ವಿದ್ಯಾರ್ಥಿಗಳಿಗೆ ಸ್ವಾಸ್ತ್ಯ ಸಂಕಲ್ಪ ಭೋದಿಸಲಾಯಿತು ಕಾರ್ಯಕ್ರಮ ನಿರೂಪಣೆ ಶಿಕ್ಷಕರಾದ C.G ಹಿರೇಮಠ ನಡೆಸಿ ಕೊಟ್ಟರು ವಂದನಾರ್ಪಣೆ ಶ್ರೀ ಮತಿ ರಾಜೇಶ್ವರಿ ಮಾಡಲಗೇರಿ ಅವರು ನಡೆಸಿ ಕೊಟ್ಟರು ಎಂದು ವರದಿಯಾಗಿದೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ ಗದಗ