ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಗೂಡಂಗಡಿಗಳನ್ನು ಭಾನುವಾರ ಪುರ ಸಭೆಯ – ಮುಖ್ಯಾಧಿಕಾರಿ ಮತ್ತು ಸಿಬ್ಬಂದಿ ತೆರವು ಮಾಡಿದರು.
ರೋಣ ಡಿ.23

ಪಟ್ಟಣದ ಚರಂಡಿಗಳನ್ನು ನಿಯಮಿತವಾಗಿ ಸ್ವಚ್ಛ ಗೊಳಿಸಲು ಈ ಗೂಡಂಗಡಿಗಳು ಅಡ್ಡಿಯಾಗಿದ್ದವು. ರಸ್ತೆ ಅತಿಕ್ರಮಿಸಿ ಗೂಡಂಗಡಿ ನಿರ್ಮಿಸಿದ್ದರಿಂದ ಸುಗಮ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಹಾಗಾಗಿ ಮುಖ್ಯ ರಸ್ತೆಯ ಪಕ್ಕದ ಚರಂಡಿಗಳ ಮೇಲೆ ನಿರ್ಮಿಸಿದ್ದ ಗೂಡಂಗಡಿಗಳು ಮತ್ತು ವಾಣಿಜ್ಯ ಮಳಿಗೆಗಳ ಮುಂದಿನ ಚಾವಣಿಯನ್ನು ತೆರವು ಮಾಡಲಾಯಿತು ಎಂದು ಪುರಸಭೆ ಮುಖ್ಯಾಧಿಕಾರಿ ರಮೇಶ ಹೊಸಮನಿ ತಿಳಿಸಿದರು.’ಪ್ರಮುಖ ಚರಂಡಿಗಳು ತ್ಯಾಜ್ಯದಿಂದ ತುಂಬಿದ್ದು, ಮಳೆ ಬಂದರೆ ಕೊಳಚೆ ನೀರು ರಸ್ತೆಗೆ ಹರಿದು ಬರುತ್ತಿತ್ತು. ಈ ಸಮಸ್ಯೆ ಕುರಿತು ಪುರಸಭೆ ಸದಸ್ಯರು ಇತ್ತೀಚೆಗೆ ನಡೆದ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪ ಮಾಡಿದ್ದರು ಇದರ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ ಎಂದರು.ಪಟ್ಟಣದ ಸೂಡಿ ವೃತ್ತ ದಿಂದ ಕಾರ್ಯಾಚರಣೆ ಆರಂಭಿಸಲಾಗಿದ್ದು, ಚರಂಡಿಗಳ ಮೇಲಿನ ಗೂಡಂಗ ಡಿಗಳನ್ನು ತೆರುವು ಗೊಳಿಸುವುದು ಅನಿವಾರ್ಯವಾಗಿದೆ. ವ್ಯವಸ್ಥಿತ ಸಿಸಿ ರಸ್ತೆ ನಿರ್ಮಾಣಕ್ಕಾಗಿ ಭೂಮಿ ಪೂಜೆ ನೆರವೇರಿಸಲಾಗಿದ್ದು, ಇದಕ್ಕಾಗಿಯೂ ಗೂಡಂಗಡಿಗಳ ತೆರವು ಮಾಡಬೇಕಿದೆ. ಪಟ್ಟಣದ ಜನತೆ ಸಹಕರಿಸ ಬೇಕು ಎಂದು ಕೋರಿದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ ಗದಗ

