“ವಿಶ್ವ ಮಾನವೀಯತೆಗೆ ಜಯಕಾರವಿರಲಿ”…..

ಶ್ವಾನದಂತೆ ನಂಬಿಕೆಯಿರಲಿ
ನರಿಬುದ್ಧಿ ನಾಯಕರ
ಹಿಂಬಾಲಕತನ ಬೇಡ
ಹೆತ್ತವರ ಕುಟುಂಬಸ್ಥರ
ಮಮತೆ ವಿಶ್ವಾಸ ಕಕುಲತೆ
ಸಹಾಯ ಸಹಕಾರವಿರಲಿ
ನಿಸ್ವಾರ್ಥಕ್ಕಾಗಿ ಸ್ವಾಭಿಮಾನವಿರಲಿ
ನಯವಂಚಕರ ಮಾತೆಗೆ
ಮರುಳತನಕೆ ತಲೆ ದೂಗಬೇಡಿ
ನ್ಯಾಯ ನೀತಿ ನಿರ್ಲಕ್ಷತನವೇ
ನಿಜ ಅಪರಾಧಿತನದ
ಅತಿಥಿಯ ಸ್ವಾಗತಿಸಬೇಡಿ
ಶ್ರೀಮಂತಿಕೆ ಜ್ಜಾನದ ಅಹಂದಿ
ಹೆತ್ತವರ ಹಿರಿಯರ ಏದಿರು
ವಿನಯ ವಿಧಯತೆ ಮರೆಯದಿರಿ
ಖುಷಿ ಕ್ಷಣಗಳಿಗಾಗಿ ಮುದ್ದು
ಮಕ್ಕಳ ಒಲವುತನದ ನಲಿವಿರಲಿ
ಮಾನವನ ನಿಜ ಸಂಪಾದನೆ
ಆರೋಗ್ಯದ ಸಿರಿ ಪರಿಸರ ಸ್ನೇಹತನವಿರಲಿ
ಪ್ರಾಣಿ ಪಕ್ಷಿ ಸಸ್ಯಸಂಕುಲ ಜಗದ
ಸಿರಿ ಬೆಳಸಿ ಉಳಸಿ ರಕ್ಷಿಸಿ
ವಿಶ್ವ ಮಾನವೀಯತೆಗೆ ಜಯಕಾರವಿರಲಿ

-ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
“ವಿಶ್ವ ಆರೋಗ್ಯ ಸಂಜೀವಿನಿ”
ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು
ಬಾಗಲಕೋಟ.

