ಅಮಿತ್ ಶಾ ರವರ ವಿರುದ್ಧ, ಕರ್ನಾಟಕ ದಲಿತ ಸಂಘರ್ಷ ಸಮಿತಿಯ – ಪ್ರತಿಭಟನೆ.
ರೋಣ ಡಿ.24

ಕೇಂದ್ರ ಗೃಹ ಸಚಿವ ಅಮಿತ್ ಶಾ ರವರು ರಾಜ್ಯ ಸಭೆಯಲ್ಲಿ ಮಾತನಾಡುವಾಗ ಅಂಬೇಡ್ಕರ್ ರವರ ಜಪ ಮಾಡುವುದನ್ನು ಬಿಟ್ಟು ದೇವರ ಪೂಜೆ ಮಾಡುವಂತೆ ತಿಳಿಸಿರುವ ಅವರ ಧೋರಣೆ ಖಂಡನೀಯ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಸಂವಿಧಾನದ ಅಡಿಯಲ್ಲಿ ಗೃಹಮಂತ್ರಿ ಹುದ್ದೆಯನ್ನು ಪಡೆದು ಕೊಂಡು ಇಂತಹ ಮಾತುಗಳನ್ನು ಹೇಳುವುದು ಬಹಳ ಎಷ್ಟರ ಮಟ್ಟಿಗೆ ಸರಿ ದೇವರ ಜಪ ಮಾಡುವುದಿದ್ದರೆ ತಮ್ಮ ಗ್ರಹಮಂತ್ರಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಯಾವುದಾದರೂ ಗುಡಿಯಲ್ಲಿ ದೇವರ ನಾಮ ಹೇಳಿಕೊಂಡು ಕುಳಿತು ಕೊಳ್ಳಬೇಕು ಆ ಪದವಿ ಯಾವುದಾದರೂ ವಿದ್ಯಾವಂತರಿಗೆ ದೊರೆಯುತ್ತದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ತಾಲೂಕು ಅಧ್ಯಕ್ಷರಾದ ಹನುಮಂತ್ ಚಲವಾದಿ ಅಮಿತ್ ಶಾ ರವರ ವಿರುದ್ಧ ವಾಗ್ದಾಳಿ ನಡೆಸಿದರು. ಬಳಿಕ ದಲಿತ ಮುಖಂಡರಾದ ವಿಜಯ.ಚಲವಾದಿ ಅಂಬೇಡ್ಕರ್ ಹಾಗೂ ಸಂವಿಧಾನಕ್ಕೆ ಅಪಮಾನ ಮಾಡಿರುವುದರಿಂದ ಕೂಡಲೇ ರಾಜೀನಾಮೆ ನೀಡಬೇಕು. ಅಮಿತ್ ಶಾ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಭಾರತೀಯ ಜನತಾ ಪಕ್ಷದ ಅಂತರಂಗದಲ್ಲಿ ಇರವ ಅಭಿಪ್ರಾಯವನ್ನು ಬಹಿರಂಗವಾಗಿ ದೇಶದ ಮುಂದೆ ತೆರೆದಿಟ್ಟಿದ್ದಾರೆ. ಅಂಬೇಡ್ಕರ್ ಬಗ್ಗೆ ಅವರಿಗಿರುವ ಆಸಹನೆಯನ್ನು ತೋರಿಸುತ್ತದೆ ಎಂದು ತಿಳಿಸಿದರು.ಹಿರಿಯ ದಲಿತ ಮುಖಂಡ ಉಮೇಶ್ ರಾಠೋಡ್ ಮಾತನಾಡಿ ಮೀಸಲಾತಿ ಬೇಡ ಬೇಡ ಎಂದು ಹೋರಾಟ ಮಾಡುತ್ತಿದ್ದವರೆಲ್ಲಾ ಇಂದು ನಮಗೆ ಮೀಸಲಾತಿ ಬೇಕು. ನಮ್ಮನ್ನು ಮೀಸಲಾತಿಯಡಿಯಲ್ಲಿ ಸೇರಿಸಿ ಎಂದು ಹೋರಾಟ ಮಾಡುತ್ತಿದ್ದಾರೆ. ಸ್ವತಹ ಅಮಿತ್ ಶಾ ಅವರು 10% ಮೀಸಲಾತಿಯಡಿಯಲ್ಲಿ ಬರುತ್ತಾರೆ. ಅಂತವರು ಇಂದು ಸಂವಿಧಾನ ನೀಡಿದ ಬಾಬಾ ಸಾಹೇಬ್ ನ ವಿರುದ್ಧ ಆಸಹನೆಯಿಂದ ಮಾತಾನಾಡುತ್ತಿರುವುದು ಅವರ ಕೀಳು ಮನಸ್ಥಿತಿಯನ್ನು ತೋರಿಸುತ್ತದೆ. ಈ ದೇಶದ ಬಹುಸಂಖ್ಯಾತ ಜನರನ್ನು ನೋಡುವ ದೃಷ್ಟಿಕೋನ ಬಯಲಾಗಿದೆ. ಇಂತ ನೀಚ ಮನಸ್ಥಿತಿ ಹೊಂದಿರವ ಕೇಂದ್ರ ಗೃಹ ಸಚಿವ ಅಮಿತ ಶಾ ಅವರನ್ನು ಸಚಿವ ಸಂಪುಟದಿಂದ ಕೈ ಬೀಡಬೇಕು ಕೂಡಲೆ ಗೃಹ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕು.ಕೂಡಲೇ ರಾಷ್ಟ್ರಪತಿಗಳು ಮಧ್ಯ ಪ್ರವೇಶ ಮಾಡಿ ಪ್ರಧಾನ ಮಂತ್ರಿಗಳಿಗೆ ಸಲಹೆ ನೀಡಿ ಇಂತಹ ನೀಚ್ ಸಚಿವರನ್ನು ಸಂಪುಟದಿಂದ ಕೈಬಿಡ ಬೇಕೆಂದು ಆಗ್ರಹಿಸಿದರು. ರೋಣ ಪಟ್ಟಣದ ಸೂಡಿ ಕ್ರಾಸ್ ಮುಲ್ಲನ ಬಾವಿ ಕ್ರಾಸ್ ಪೋತರಾಜನ ಕಟ್ಟೆವರೆಗೂ ಮೆರವಣಿಗೆ ಮುಖಾಂತರ ರೋಣ ತಾಲೂಕು ದಂಡಾಧಿಕಾರಿ ಕೆ ನಾಗರಾಜ್ ಅವರಿಗೆ ಸಂಘಟನೆ ಮುಖಂಡರು ಸೇರಿ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಬಸವರಾಜ ಹಲಗಿ ನಾಗರಾಜ್ ದೊಡ್ಡಮನಿ ರವಿ ಜೋಗಣ್ಣನವರ್ ಬಸವರಾಜ ಕಾಳೆ ವೀರಪ್ಪ ತೆಗ್ಗಿನಮನಿ ಶೇಖಪ್ಪ ಕಾಳೆ ಮಹೇಶ್ ಮಾದರ್ ರಮೇಶ್ ಮಾದರ್ ಚಂದ್ರು ಅಬ್ಬಿಗೇರಿ ಹಿರಿಯಪ್ಪ ಮಾದರ್ ಮಂಜುನಾಥ್ ಮುದೇನಗುಡಿ ಬಸವರಾಜ್ ಚಲವಾದಿ ಎಲ್ಲಪ್ಪ ಹಾದಿಮನಿ ಅಕ್ಷಯ್ ಕುಮಾರ್ ದೊಡ್ಡಮನಿ ಸಂಜಯ್ ಹಾದಿಮನಿ ಮಂಜುನಾಥ್ ಪಾದಿಮನಿ ಆದಿತ್ಯ ದೊಡ್ಡಮನಿ ಪ್ರದೀಪ್ ಕಾಳಿ ಅನೇಕರು ಭಾಗವಹಿಸಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಎಸ್.ವಿ ಸಂಕನಗೌಡ್ರ ಗದಗ