ಸನ್ನತಿ ಪಂಚಶೀಲ ಪಾದಯಾತ್ರೆಯ ಮೂಲಕ ಸರ್ಕಾರಕ್ಕೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ದಲಿತಪರ ವಿವಿಧ ಸಂಘಟನೆಗಳಿಗೆ – ಬೃಹತ್ ಮಟ್ಟದ ಕಾರ್ಯಕ್ರಮಕ್ಕೆ ಕರೆ.
ಕೂಡ್ಲಿಗಿ ಡಿ.24

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣಕ್ಕೆ ಆಗಮಿಸಿದಂತಹ ಸನ್ನತ್ತಿ ಪಂಚಶೀಲ ಪಾದಯಾತ್ರೆ ಹೊಸಪೇಟೆಗೆ ಭೇಟಿ ನೀಡಿ ನಂತರ ಕೂಡ್ಲಿಗಿಗೆ ಮಾರ್ಗವಾಗಿ ಎನ್.ಎಚ್ 50, ರ ದಿಂದ ಕೂಡ್ಲಿಗಿ ಪಟ್ಟಣಕ್ಕೆ 6:30 ಕ್ಕೆ ಬಂದ ಸಂದರ್ಭದಲ್ಲಿ ರಾಜೀವ್ ಗಾಂಧಿ ನಗರದ ದ್ವಾರ ಬಾಗಿಲಿನಿಂದ ದಲಿತ ಮುಖಂಡರಾದ ಎಸ್.ದುರ್ಗೇಶ್ ರವರು 2500 ವರ್ಷಗಳ ಹಿಂದಿನ ಭಗವಾನ್ ಬುದ್ಧರ ಅಸ್ತಿ (ಮೂಳೆ) ಯನ್ನು ಅಳವಡಿಸಿರುವ ಕಳಸವನ್ನು ತಲೆಯ ಮೇಲೆ ಹೊತ್ತು ಕೊಂಡು ತಮಟೆ ವಾದ್ಯಗಳೊಂದಿಗೆ ಕಳಸವನ್ನು ಒಬ್ಬರಾದಂತೆ ಇನ್ನೊಬ್ಬ ಮುಖಂಡರುಗಳಾದ ಹೆಚ್. ರಮೇಶ್ ಮಾಜಿ ಸೈನಿಕರು ನಂತರ ಮುಖಂಡ. ಡಿ.ಎಚ್ ದುರ್ಗೇಶ್ ವಕೀಲರು ನಂತರ ಎಸ್. ಚಾರೇಶ್, ಹೊತ್ತುಕೊಂಡು ನಡೆದರು. ಹೆಗ್ಡಾಳ್ ಮಹೇಶ್, ಪರಶುರಾಮ್ ಮುಖಂಡರು, ಬಿ.ಶಿವರಾಜ್, ಚಲುವಾದಿ, ಮಾರಪ್ಪ ಬಿ. ಮಹೇಶ್, ಚಲವಾದಿ ಮಂಜುನಾಥ್ ಹಾಗೂ ಅಂಬೇಡ್ಕರ್ ನಗರದ ಯುವಕರುಗಳು ಮುಖಂಡರುಗಳು ಅದ್ದೂರಿಯಾಗಿ ಬುದ್ಧ ಅಂಬೇಡ್ಕರ್ ಅವರ ರಥವನ್ನು ಹಾಗೂ ಪಾದಯಾತ್ರೆ ಮೂಲಕ ಸಾಗಿ ಬಂದ ಸಂಚಾಲಕರುಗಳನ್ನು ಗೌರವ ಪೂರಕವಾಗಿ ಡಾ, ಬಿ.ಆರ್ ಅಂಬೇಡ್ಕರ್ ನಗರಕ್ಕೆ ಸ್ವಾಗತಿಸಿ ಕೊಂಡರು.ಬುದ್ಧ ರವರ ವಿಶ್ವಶಾಂತಿಗಾಗಿ ಹಾಗೂ ಸನ್ನತ್ತಿಯ ಸಮಗ್ರ ಅಭಿವೃದ್ಧಿಗಾಗಿ ಆಗ್ರಹಿಸಿ ಹಾಗೂ ಬೌದ್ಧ ಸಮುದಾಯದ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ. ಬೌದ್ಧ ಐತಿಹಾಸಿಕ ಕ್ಷೇತ್ರ ಸನ್ನತಿಯಿಂದ ಬೆಂಗಳೂರು ವಿಧಾನ ಸೌಧದ ವರೆಗೆ ಕರ್ನಾಟಕ ಬಿಕ್ಕು ಹಾಗೂ ಬಿಕ್ಕುಣಿ ಸಂಘ ಸನ್ನತ್ತಿ ಪಂಚಶೀಲ ಪಾದಯಾತ್ರೆ ಸಂಘಟನಾ ಸಮಿತಿ, ರಾಜ್ಯದ ಸಮಸ್ತ ದಲಿತ ಸಂಘಟನೆಗಳು, ಎಲ್ಲಾ ಬೌದ್ಧ ಸಂಘ ಸಂಸ್ಥೆಗಳು ಮತ್ತು ಬುದ್ದ ವಿಹಾರ ಸಮಿತಿಗಳು ಸೇರಿ ಕೊಂಡು ಕರ್ನಾಟಕ ಸರ್ಕಾರಕ್ಕೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ.

ದಿನಾಂಕ 15 -11- 2024 ರಿಂದ ಸನ್ನತಿಯಿಂದ ಪ್ರಾರಂಭವಾಗಿ ಸಾಗಿದ ಪಾದಯಾತ್ರೆ ಕೂಡ್ಲಿಗಿಗೆ ಸುಮಾರು 450 ಕಿಲೋಮಿಟರ್ ಪಾದಯಾತ್ರೆ ಮೂಲಕ ಸಾಗುತ್ತಾ ಸಾಗುತ್ತಾ ಹಲವು ಜಿಲ್ಲೆಗಳ ತಾಲೂಕುಗಳನ್ನು ಪಾದಯಾತ್ರೆ ಯೊಂದಿಗೆ ಭೇಟಿ ನೀಡುವುದರ ಮೂಲಕ 24.01.2025 ರ ವರೆಗೆ ಸಾಗಿ ಸನ್ನತ್ತಿ ಪಂಚಶೀಲ ಪಾದಯಾತ್ರೆಯು ಕರ್ನಾಟಕದ ರಾಜ್ಯಧಾನಿ ಯಾದ ಬೆಂಗಳೂರುನಲ್ಲಿ ಮುಕ್ತಾಯ ಗೊಂಡು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ವಿವಿಧ ಬೇಡಿಕೆಗಳ ಒತ್ತಾಯದ ಕುರಿತು ಕರ್ನಾಟಕ ಬಿಕ್ಕು ಹಾಗೂ ಬಿಕ್ಕುಣಿ ಸಂಘ ವಿವಿಧ ದಲಿತ ಪರ ಸಂಘಟನೆಗಳು ಒಗ್ಗೂಡಿ ಸರ್ಕಾರಕ್ಕೆ ಈ ಕಾರ್ಯಕ್ರಮದ ನಡೆಯುವುದರ ಮೂಲಕ ಶಾಂತಿಯುತವಾಗಿ ಮನವಿ ಮಾಡಲಾಗುವುದು ಎಂದು ತಿಳಿಸಿದರು. ಈ ಕಾರ್ಯಕ್ರಮದ ಉದ್ದೇಶ ಅಂಬೇಡ್ಕರ್ ಕಂಡ ಕನಸನ್ನು ನನಸು ಮಾಡಲು ಹಿಂದುಳಿದ ಎಲ್ಲಾ ಜಾತಿಗಳು ಹಾಗೂ ಅಂಬೇಡ್ಕರ್ ಮಾರ್ಗದಲ್ಲಿ ನಡೆಯುವಂತಹ ಕಾರ್ಯಕ್ರಮಕ್ಕೆ ಜನರು ಆಗಮಿಸಿ ಯಶಸ್ವಿ ಕೋರಲು ಕರೆ ನೀಡಿದರು ಎಂದು ಸುದ್ದಿ ಆಗಿರುತ್ತದೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ.ಬಿ.ಸಾಲುಮನೆ.ಕೂಡ್ಲಿಗಿ.ವಿಜಯನಗರ