“ನಿತ್ಯ ಜಗದಿ ರೈತನ ಹಿರಿಮೆ ಗರಿಮೆ”…..

ರೈತ ದೇಶದ ಮಹಾನ್ ರತ್ನ
ನಿತ್ಯ ಶ್ರಮದ ದುಡಿಮೆ
ಜೀವ ಸಲುಹ ಅನ್ನದಾತ
ವಿದ್ಯೆಯಲ್ಲಿ ಶ್ರೇಷ್ಠ ಮೇಟಿ ವಿದ್ಯೆ
ಸರಿ ಸಾಟಿಯಿಲ್ಲ ಯಾರು
ಜಗದಲ್ಲಿ ಪ್ರಾಣಿ ಪಕ್ಷಿ
ಸಲುಹುವ ದಯಾಗುಣ
ಪರಿಸರ ಸ್ನೇಹಿ ಕರ್ಮಯೋಗಿ
ಭೋಗ ಭಾವ ತ್ಯಾಗಮಯಿ
ಪೌಷ್ಠಕತೆಗೆ ಆರ್ಥಕತೆಗೆ ದೇಶದ ಬಲ
ಜಿವಸಂರಕ್ಷಣೆ ಒಲುಮೆಯ ಹೊಣೆ
ದೇಶದ ಉನ್ನತಿಗೆ ಸದಾ ಸಿದ್ಧ
ಹೊಗಳಿಕೆಗೆ ಹಿಗ್ಗದ ಮನ
ತೆಗಳಿಕೆಗೆ ಕುಗ್ಗದ ತನು
ರೈತ ವಿಶ್ವ ರತ್ನ ಸಮಾಜದ ನಾಯಕ
ಜೈಜವಾನ್ ಜೈಕಿಸಾನ
ದೇಶ ಸುಭಿಕ್ಷೆಯಲಿ ಮೊಳಗಲಿ
ನಮ್ಮ ರೈತ ನಮ್ಮ ಹೆಮ್ಮೆ
“ಅನ್ನದಾತ ಸದಾ ಸುಖಿ ಭವ”
ನಿತ್ಯ ಜಗದಿ ರೈತನ ಹಿರಿಮೆ ಗರಿಮೆ
ಜನಮನದಲಿ ರೈತ ಅಜರಾಮರ.
-ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
ಬಾಗಲಕೋಟ.