“ಮರೆಯದ ಮಾತು ಜಗದಿ ಮೆರಸುವುದು”…..

ಯದ್ಭಾವಂ ತದ್ಭವತಿ




ಸರ್ವೇ ಜನ ಸುಖಿನೋ ಭವಂತು ಮನಸ್ಸಿದ್ದರೇ
ಮಾರ್ಗ
ಭಾವ ಶುದ್ಧತೆ ಇದ್ದಾಗ ಬದುಕು ಹಸನ
ನುಡಿ ನಡೆ ಒಂದಾಗಿಸಿದವನೇ ನಿಜ ಮಾನವ
ಬಾಳುವದಾದರೆ ಹುಲಿಯ ಹಾಗೆ ಬಾಳು
ಗುಳ್ಳೆ ನರಿ ಬುದ್ಧಿ ತಪ್ಪದೇ ಶಾಪಕ್ಕೆ ಗುರಿ
ಸ್ವಾಭಿಮಾನತನವೇ ಶ್ರೇಷ್ಠ
ಆಸೆ ಇರಲಿ ದುರಾಸೆ ಬೇಡ
ಜನ ಸೇವೆಯೇ ಜನಾರ್ಧನ ಸೇವೆ
ನಿಜ ದೇವರು ಹೆತ್ತವರು
ನಿಜವಾದ ಸಿರಿ ಗಾಳಿ ಬೆಳಕು ನೀರು ಆಹಾರ
ಮಾತಿನೊಳಗ ಹಿತ ಮಿತ ಚೆನ್ನ
ಪರಿಸರ ಸ್ನೇಹತನ ತನು ಮನ ಆನಂದಮಯ
ಮರೆಯದ ಮಾತು ಜಗದಿ ಮೆರಸುವುದು
-ಶ್ರೀದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
ಬಾಗಲಕೋಟ.