ಅಪಘಾತವಲ್ಲ, ಅಪಘಾತದ ಹೆಸರಿನಲ್ಲಿ ಕೊಲೆ – ತಮ್ಮ ಸಿದ್ದಪ್ಪನ ಬಲವಾದ ಆರೋಪ.
ಬಾಗಲಕೋಟೆ ಡಿ.25

ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ ತಾಲೂಕಿನ ಭಗವತಿ ಗ್ರಾಮದ ಮಹಾಂತೇಶ ನನ್ನು ಕೊಲೆ ಮಾಡಬೇಕೆಂಬ ಮಹಾಂತೇಶ ಬರುವಂತ ಸಮಯದಲ್ಲಿ ದಿನಾಂಕ 14/2/2024 ರಂದು ಕಮತಿಗಿ ಬಸರಿಕಟ್ಟಿ ರಸ್ತೆಯಲ್ಲಿ ಮಹಾಂತೇಶನ ಸಮಯ ಮಧ್ಯಾಹ್ನ 12 ಗಂಟೆಗೆ 30 ನಿಮಿಷಕ್ಕೆ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಮಹಾಂತೇಶ ಕೆಳಗೆ ಬಿದ್ದ ನಂತರ ಕಾರು ತಲೆಯ ಮೇಲೆ ಏರಿಸಿ ಕೊಲೆ ಮಾಡಿ ಈ ಕೊಲೆ ನಮ್ಮ ಮೇಲೆ ಅನುಮಾನ ಬರಬಾರದು ಎಂದು ಅಪಘಾತ ಆಗಿದೆ ಎಂದು ಆರೋಪಿಗಳು ಈ ರೀತಿಯಾಗಿ ನಾವು ಮಾಡಿದರೆ ಕೊಲೆಯ ಕೇಸಿನಿಂದ ಪಾರಾಗುತ್ತೇವೆ ಎಂದು ವ್ಯವಸ್ಥಿತವಾಗಿ ಈ ರೀತಿಯಾಗಿ ಕೊಲೆ ಮಾಡಿದ್ದರಿಂದ ಆ ದಿನ ಮಹಾಂತೇಶನ ತಮ್ಮನಾದ ಸಿದ್ದು ಇವರಿಗೆ ನಿಮ್ಮ ಅಣ್ಣನಿಗೆ ಅಪಘಾತವಾಗಿದೆ.

ಎಂದು ಸಾಯಂಕಾಲ 7.30 ನಿಮಿಷಕ್ಕೆ ಪೊಲೀಸರಿಂದ ಫೋನ್ ಮಾಡಿ ಮಹಾಂತೇಶನ ತಮ್ಮನಿಗೆ ನೀನು ಆದಷ್ಟು ಬೇಗನೆ ಬಂದುಬಿಡು ಎಂದು ಪೊಲೀಸರು ತಿಳಿಸಿದಾಗ ಗಾಬರಿಯಿಂದ ನಾನು ಓಡಿ ಬಂದು ನಮ್ಮ ಅಣ್ಣನ ನೋಡಿದಾಗ ಇದು ಅಪಘಾತವಲ್ಲ. ಅಪಘಾತದ ಹೆಸರಿನಲ್ಲಿ ಉದ್ದೇಶ ಪೂರ್ವಕವಾಗಿ ನಮ್ಮ ಅಣ್ಣನನ್ನು ಈ ರೀತಿಯಾಗಿ ಕೊಲೆ ಮಾಡಿದ್ದಾರೆ ಎಂದು ನಾನು ಅಮೀನಗಡ ಪಿ.ಎಸ್.ಐ ಸಾಹೇಬರಿಗೆ ಹೇಳಿದರೂ ಸಹ ಅವರು ನನ್ನ ಮಾತನ್ನು ಕೇಳಲಾರದೆ ಹಾಗೂ ನಾನು ಹೇಳಿದ ಪ್ರಕಾರ ಪ್ರಕರಣವನ್ನು ದಾಖಲಿಸಲಾರದೇ ಆರೋಪಿಗಳ ಸಹಾಯ ಮಾಡಬೇಕೆಂಬ ಉದ್ದೇಶ ದಿಂದ ಮಹಾಂತೇಶನ ತಮ್ಮನ ಹೇಳಿಕೆ ಪ್ರಕಾರ ಪ್ರಕರಣವು ದಾಖಲಿಸಿ ಕೊಳ್ಳಲಾರದೆ.

ಈ ಪ್ರಕರಣವು ಈ ರೀತಿ ದಾಖಲಿಸಿ ಕೊಂಡಿದ್ದರಿಂದ ನಮಗೆ ಅನುಮಾನ ವ್ಯಕ್ತವಾಗುತ್ತದೆ ಆರೋಪಿಗಳಿಗೆ ಅನುಕೂಲ ಆಗುವ ಪ್ರಕಾರ ಪ್ರಕರಣವನ್ನು ದಾಖಲಿಸಿ ಕೊಂಡು ಕೈ ಬಿಟ್ಟು ದೂರುದಾರ ತಮ್ಮ ಸಿದ್ದಪ್ಪ ನಮ್ಮ ಅಣ್ಣನ ಕೊಲೆ ಮಾಡಿದ ಆರೋಪಿಗಳ ಬಗ್ಗೆ ಏನಾಯಿತು ಸರ್ ಎಂದು ಪೊಲೀಸರನ್ನು ಕೇಳಿದರೆ ನಾವು ತನಿಖೆ ಮಾಡುತ್ತೇವೆ ತನಿಖೆ ಮಾಡಿದ ನಂತರ ಗೊತ್ತಾಗುತ್ತದೆ ಎಂದು ತನಿಖೆ ಹೆಸರಿನಲ್ಲಿ ಪೊಲೀಸ್ ಅಧಿಕಾರಿಗಳು ವಿಳಂಬ ನೀತಿ ಅನುಸರಿಸಿ ಕಾಲಹರಣ ಮಾಡಿದ್ದು ಕೊಲೆ ಮಾಡಿದ ಆರೋಪಿಗಳನ್ನು ಪತ್ತೆ ಹಚ್ಚಲಾರದೆ ಇದ್ದು ಇದನ್ನು ನೋಡಿದರೆ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ವಿಫಲ ರಾಗಿದ್ದರಿಂದ ಮಹಾಂತೇಶನ ಮೊಬೈಲ್ ಎಲ್ಲಿದೆ ಸಾರ್ ಎಂದು ಮಾಂತೇಶನ ತಮ್ಮನಾದ ಸಿದ್ದು ಪೊಲೀಸರನ್ನು ಕೇಳಿದಾಗ ಆಯ್ತು ಎರಡು ದಿನ ಬಿಟ್ಟು ನಿಮ್ಮ ಅಣ್ಣನ ಮೊಬೈಲ್ ಕೊಡುತ್ತೇವೆ ಎಂದು ಹೇಳಿದರು.

ಆದರೂ ಹೊಸ ಇದುವರೆಗೆ ಮಹಾಂತೇಶನ ಮೊಬೈಲನ್ನು ಪೊಲೀಸರು ನಮಗೆ ಕೊಟ್ಟಿರುವುದಿಲ್ಲ ನಂಬರ್ ತೆಗೆದು ಕೊಂಡು ಕಾಲ್ ಲಿಸ್ಟ್ ಸರ್ಚ್ ಮಾಡಿದರೆ ಆರೋಪಿಗಳು ಯಾರೆಂದು ಗೊತ್ತಾಗುತ್ತದೆ ಗೊತ್ತಾದ ನಂತರ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಿ ದಲಿತ ಮಹಾಂತೇಶನ ಕುಟುಂಬಕ್ಕೆ ನ್ಯಾಯ ಒದಗಿಸಿ ಕೊಡಬೇಕೆಂದು ಕರ್ನಾಟಕ ದಲಿತ ರಕ್ಷಣಾ ವೇದಿಕೆ ರಾಜ್ಯ ಸಮಿತಿ ಹಾಗೂ ಆಲೆಮಾರಿ ಬುಡಕಟ್ಟು ಮಹಾಸಭಾ ಸಮಿತಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ಲತಾ, ನೊಂದ ತಮ್ಮ ಸಿದ್ದಪ್ಪ ಭಗವತಿ, ಮಂಜುಳಾ ಹಳ್ಳೂರು ತಾಲೂಕ ಅಧ್ಯಕ್ಷರು ತಾಲೂಕ ಸಮಿತಿ ಬಾಗಲಕೋಟೆ ಕರ್ನಾಟಕ ದಲಿತ ರಕ್ಷಣಾ ವೇದಿಕೆ, ಕೆ ಶಂಕರ್ ನಂದಿಹಾಳ ರಾಜ್ಯ ಕಾರ್ಯದರ್ಶಿ ಅವರು ಪತ್ರಿಕೆ ಮೂಲಕ ಕೋರಿಕೆ ಆಗಿರುತ್ತದೆ.