ಸಚಿವ ಪ್ರಿಯಾಂಕ ಖರ್ಗೆ ನೈತಿಕತೆಯ ಹೊಣೆ ಹೊತ್ತು ಕೂಡಲೇ ರಾಜೀನಾಮೆ ನೀಡಲಿ – ದೇವಿಂದ್ರ ಮುತ್ತುಕೋಡ್ ಆಗ್ರಹ.
ಕಟ್ಟಿತೂಗಾಂವ ಡಿ. 29

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕಟ್ಟಿತೂಗಾಂವ ಗ್ರಾಮದ ಕಡು ಬಡ ಕುಟುಂಬದ ಯುವ ಗುತ್ತಿಗೆದಾರ ಸಚಿನ್ ಪಂಚಾಳ್ (26) ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ ರಾಜ್ ಸಚಿವ ಪ್ರಿಯಾಂಕ ಖರ್ಗೆ ಅವರ ಆಪ್ತ ಕಲಬುರಗಿಯ ಕಾಂಗ್ರೆಸ್ ಮುಖಂಡ ರಾಜು ಕಪನೂರ ಮತ್ತು ಅವರ ಗ್ಯಾಂಗ್ ಸೇರಿ ಲಕ್ಷ ಲಕ್ಷದ ಹಣದ ಆಮಿಷ ಒಡ್ಡಿದ್ದಲ್ಲದೆ, ಜೊತೆಗೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಮನನೊಂದು ಜೀವ ಭಯಕ್ಕೆ ಅಂಜಿ ಯುವ ಗುತ್ತಿಗೆದಾರ ಸಚಿನ್ ಪಂಚಾಳ್ ಗುರುವಾರ ರೈಲಿಗೆ ತಲೆ ಕೊಟ್ಟು ಸಾವಿಗೆ ಶರಣಾಗಿದ್ದಾನೆ. ಇನ್ನೂ ಡೆತ್ ನೋಟ್ ನಲ್ಲಿ ಶ್ರೀರಾಮ ಸೇನೆಯ ರಾಷ್ಟ್ರೀಯ ಗೌರವಾಧ್ಯಕ್ಷ ಶ್ರೀ ಆಂದೋಲದ ಸಿದ್ದಲಿಂಗ ಸ್ವಾಮೀಜಿ ಮತ್ತು ಬಿಜೆಪಿಯ ಮುಖಂಡರುಗಳಾದ ಶಾಸಕ ಬಸವರಾಜ್ ಮುತ್ತಿಮುಡು ಕಲಬುರ್ಗಿ ನಗರದ ಜಿಲ್ಲಾಧ್ಯಕ್ಷ ಚಂದು ಪಾಟೀಲ್, ಹಾಗೂ ಮಣಿಕಂಠ ರಾಠೋಡ್, ರವರುಗಳ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂದು ಡೆತ್ ನೋಟ್ ಮುಖಾಂತರ ತಿಳಿದು ಬಂದಿದೆ. ಕೃತ್ಯವನ್ನು ಖಂಡಿಸಿ ಮಾತನಾಡಿದ ಬಿಜೆಪಿಯ ಜೀವರ್ಗಿ ತಾಲೂಕು ಅಧ್ಯಕ್ಷ ದೇವಿಂದ್ರ ಮುತ್ತುಕೊಡ ರವರು ಆತ್ಮಹತ್ಯೆಗೆ ಶರಣಾದ ಯುವ ಗುತ್ತಿಗೆದಾರ ಸಚಿನ್ ಪಾಂಚಾಳ್ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ಕೊಡುತ್ತೇವೆ ಎಂದು ಭರವಸೆ ನೀಡಬೇಕು.

ಸಚಿವ ಪ್ರಿಯಾಂಕ ಖರ್ಗೆ ಅವರ ಆಪ್ತ ಕಾಂಗ್ರೆಸ್ ಮುಖಂಡ ರಾಜು ಕಪಾನೂರ ಮತ್ತು ಅವರ ಗ್ಯಾಂಗ್ ನ್ನು ಕೂಡಲೇ ಅವರನ್ನು ಬಂಧಿಸಿ ಸೂಕ್ತ ತನಿಖೆ ಮಾಡಬೇಕು, ಮತ್ತು ಆಂದೋಲ ಶ್ರೀಗಳು ಸೇರಿದಂತೆ ಬಿಜೆಪಿಯ ಮುಖಂಡರುಗಳಾದ ಶಾಸಕ ಬಸವರಾಜ್ ಮುತ್ತಿಮುಡು ಚಂದು ಪಾಟೀಲ್ ಮತ್ತು ಮಣಿಕಂಠ ರಾಠೋಡ್ ರವರುಗಳಿಗೆ ರಕ್ಷಣೆ ಒದಗಿಸಬೇಕು. ಹಿಂದೆ ನಮ್ಮ ಸರ್ಕಾರ ಅಂದ್ರೆ ಬಿಜೆಪಿ ಆಳ್ವಿಕೆಯಲ್ಲಿದ್ದಾಗ ಆ ಸಂದರ್ಭದಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆಯ ಸಚಿವರಾಗಿದ್ದ ಕೆ.ಎಸ್ ಈಶ್ವರಪ್ಪ ನವರನ್ನು ಆರೋಪಿಸಿ ಪ್ರಿಯಾಂಕ ಖರ್ಗೆ ಅವರು ನೈತಿಕತೆಯ ಹೊಣೆ ಹೊತ್ತು ಕೊಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಹೇಳಿದ್ದೀರಿ ಈಗ ಆ ಸಂದರ್ಭವೇ ನಿಮಗೆ ಎದುರಾಗಿದೆ ನೈತಿಕತೆಯ ಹೊಣೆ ಹೊತ್ತು ಸಚಿವರೇ ತಕ್ಷಣವೇ ನೀವು ರಾಜೀನಾಮೆ ನೀಡಬೇಕು ಎಂದು ಅಗ್ರಹಿಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಾಶಂಕರ್.ನೀಲಕೋಡ.ಇಜೇರಿ