ಸಚಿನ್ ಪಂಚಾಳ ಸಾವಿನ ಬಗ್ಗೆ ಸಿಬಿಐ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವಂತೆ – ವಿಶ್ವಕರ್ಮ ಮುಖಂಡರು ಒತ್ತಾಯ.

ಸಿಂಧನೂರು ಜ.04

ಬೀದರನಲ್ಲಿ ಆತ್ಮಹತ್ಯೆ ಮಾಡಿ ಕೊಂಡಿರುವ ಸಚಿನ್ ಪಂಚಾಳ ಸಾವಿನ ಬಗ್ಗೆ ಸಿಬಿಐ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವಂತೆ ಸಿಂಧನೂರು ತಾಲೂಕ ವಿಶ್ವಕರ್ಮ ಮುಖಂಡರು ಸಿಂಧನೂರು ತಹಸೀಲ್ದಾರ್ ಕಚೇರಿಯಲ್ಲಿ ಮಾನ್ಯ ತಹಸೀಲ್ದಾರ ಅರುಣ್ ದೇಸಾಯಿ ಅವರಿಗೆ ಮನವಿ ಸಲ್ಲಿಸಿದರು.ಬೀದರ ಜಿಲ್ಲೆಯ ನಿವಾಸಿಯಾದ ಸಚಿನ್ ಮಾನಪ್ಪ ಪಂಚಾಳ ಅವರು ಉನ್ನತ ಗುತ್ತಿಗೆದಾರರು ಎಂದು ತಿಳಿದು ಬಂದಿದ್ದು ಸಚಿನ್ ಪಂಚಾಳ ಅವರು ಪ್ರಭಾವಿ ಸಚಿವರ ಬೆಂಬಲಿಗರ ಕಿರುಕುಳಕ್ಕೆ ಬೇಸತ್ತು ಸ್ವಯಂ ಪ್ರೇರಿತವಾಗಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಕುಟುಂಬಕ್ಕೆ ಆಸರೆ ಯಾಗಿರುವ ಸಚಿನ್ ಪಂಚಾಳ ಅವರ ಕುಟುಂಬದವರ ಅನಾಥರಾಗಿದ್ದು, ಈ ಘಟನೆ ಇಡೀ ಮನುಕುಲವನ್ನೇ ನಾಚಿಸು ವಂತಹದಾಗಿದ್ದು ಖಂಡನೀಯವಾಗಿದೆ. ಸರ್ಕಾರ ಕೂಡಲೇ ಸಾವಿಗೆ ಕಾರಣ ರಾದದವರನ್ನು ಬಂಧಿಸಬೇಕು. ಡೆತ್ ನೋಟ್ ನಲ್ಲಿ ಬರೆದಿರುವಂತಹ ಆರೋಪಿಗಳಿಗೆ ನೀಡಿರುವ ಹಣವನ್ನು ಸಚಿನ್ ಕುಟುಂಬಸ್ಥರಿಗೆ ಹಿಂತಿರುಗಿಸಿ ಕೊಟ್ಟು,ಸಚಿನ್ ಪಂಚಾಳ ಅವರ ಸಾವಿಗೆ ನ್ಯಾಯ ದೊರಕಿಸಿ ಅವರ ಕುಟುಂಬಕ್ಕೆ ಸರ್ಕಾರದ ವತಿಯಿಂದ 50 ಲಕ್ಷ ರೂಪಾಯಿಗಳನ್ನು ಪರಿಹಾರವನ್ನು ಕೊಡಬೇಕೆಂದು ಹಾಗೂ ಆತ್ಮಹತ್ಯೆಯ ಸಾವಿನ ಬಗ್ಗೆ ತನಿಖೆ ಮಾಡಲು ಸಿಬಿಐಗೆ ಕೊಡಬೇಕೆಂದು ತಹಸೀಲ್ದಾರ್ ಅರುಣ್ ದೇಸಾಯಿ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ನೀಡಿ ಒತ್ತಾಯಿಸಿದರು. ಇದೇ ಸಂಧರ್ಭದಲ್ಲಿ ಸಿಂಧನೂರು ನಿಂದ ಮಸ್ಕಿಗೆ ಹೋಗುವ ಮುಖ್ಯ ರಸ್ತೆಯ ಪಕ್ಕದಲ್ಲಿ ಪಿ.ಡಬ್ಲ್ಯೂ.ಡಿ ಕ್ಯಾಪ್ ಕಂಪೌಂಡ್ ಗೆ ಹೊಂದಿಕೊಂಡು ಸುಮಾರು ವರ್ಷಗಳಿಂದ ಶ್ರೀ ಜಗದ್ಗುರು ಮೌನೇಶ್ವರ ದೇವಸ್ಥಾನ ಇದೆ. ಮುಖ್ಯ ರಸ್ತೆ ಅಗಲೀಕರಣದಿಂದ ದೇವಸ್ಥಾನವನ್ನು ತೆರವು ಗೊಳಿಸ ಬೇಕಾಗಿರುವುದರಿಂದ ಸರ್ಕಾರದ ವತಿಯಿಂದ ಶ್ರೀ ಜಗದ್ಗುರು ಮೌನೇಶ್ವರ ದೇವಸ್ಥಾನಕ್ಕೆ ಜಾಗವನ್ನು ಮಂಜೂರು ಮಾಡಬೇಕು ಎಂದು ತಹಸೀಲ್ದಾರ್ ಅರುಣ್ ದೇಸಾಯಿ ಅವರಿಗೆ ಮನವಿ ಸಲ್ಲಿಸಿದರು.ಈ ಸಂಧರ್ಭದಲ್ಲಿ ಶ್ರೀ ವೆಂಕಟೇಶ ಮಹಾಸ್ವಾಮಿಗಳು ಶ್ಯಾಡಲಗೇರಿ ಮಠ,ವಿಶ್ವಕರ್ಮ ತಾಲೂಕ ಅಧ್ಯಕ್ಷ ಮೌನೇಶ ತಿಡಿಗೋಳ, ಕಾಳಿಕಾದೇವಿ ಟ್ರಸ್ಟ್ ಅಧ್ಯಕ್ಷ ಮಂಜುನಾಥ ಬಡಿಗೇರ, ಸಮಾಜದ ಹಿರಿಯರಾದ ಅಯ್ಯಪ್ಪ ನಿವೃತ್ತ ಬಿ.ಇ.ಓ ವೀರಭದ್ರಪ್ಪ ಹಂಚಿನಾಳ, ರವೀಂದ್ರ ಗದ್ರಟಗಿ, ಡಾ, ವೀರೇಶ ತಿಡಿಗೋಳ, ದೇವಪ್ಪ ದೇವರಗುಡಿ, ಚನ್ನಪ್ಪ ಕೆ ಹೊಸಹಳ್ಳಿ ಇನ್ನಿತರ ಸಮಾಜದ ಮುಖಂಡರು ಇದ್ದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button