ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಹಂಚಿಕೆ ಆಗಬೇಕು ಎಂದ – ಮಂಜುನಾಥ್ ಬುರುಡಿ.
ಗದಗ ನ.11

ಎಲ್.ಜಿ ಹಾವನೂರು ವರದಿ ಪ್ರಕಾರ ಕರ್ನಾಟಕದ ಎಸ್.ಸಿ ಪಟ್ಟಿಯಲ್ಲಿನ ಮಾದಿಗರು 57.3% ಇದ್ದು. ಅವರ ಜನಸಂಖ್ಯಾ ಆಧಾರದಲ್ಲಿ 8% ಮೀಸಲಾತಿ ಸಿಗಬೇಕು. (15% ಒಟ್ಟು ಮೀಸಲಾತಿಲಿ). ಆದ್ರೆ ಈಗ ಮಾದಿಗರಿಗೆ ಸಿಗ್ತಾ ಇರೋದು ಕೇವಲ 2%. ಮಾತ್ರ ಎಂದು ಮಾದಿಗ ದಂಡೋರ ಸಮಿತಿಯ ಗದಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ಬುರಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 1976 ರಲ್ಲಿ SC ಪಟ್ಟಿಗೆ ಲಂಬಾಣಿ ಭೋವಿ, ಕೊರಚ, ಕೊರಮ ಸಮುದಾಯಗಳನ್ನ ಸೇರಿಸಿದಾಗ, ಮೂಲ ಎಸ್.ಸಿ ಪಟ್ಟಿಯ ಅಸ್ಪೃಶ್ಯ ಹೊಲೆಮಾದಿಗ್ರು ವಿರೋಧಿಸದೆ ಇದ್ದು. ಐಕ್ಯತೆ ಸೌಹಾರ್ದತೆ ಮೆರೆದರು. ಆದ್ರೆ ಕಾಲಕ್ರಮೇಣ ಅಸ್ಪೃಶ್ಯ ಹೊಲೆ ಮಾದಿಗರಿಗಿರುವಂತೆ ಸ್ಪ್ರಶ್ಯ ಜಾತಿಗಳಿಗೆ ಸಾಮಾಜಿಕ ಕಳಂಕ, ಅಸ್ಪೃಶ್ಯತೆ, ಅಸಹಿಷ್ಣುತೆಯ ಸವಾಲುಗಳು ಇರದ ಕಾರಣ ಅತಿ ಹೆಚ್ಚು ಮೀಸಲಾತಿ ಫಲ ಅನುಭವಿಸುತ್ತ ಬಂದರು. ಇದನ್ನು ಸಾಮಾಜಿಕ ಅನ್ಯಾಯ ಎಂದರಿತ ಅಸ್ಪೃಶ್ಯರು “ಇಲ್ಲ ಈ 15% ರಲ್ಲಿ ಜನಸಂಖ್ಯೆ ಆಧಾರ ಹಂಚಿಕೆಯಾಗ ಬೇಕು ಇಲ್ದೆ ಇದ್ರೆ ಮೂಲ ಅಸ್ಪೃಶ್ಯ ಜಾತಿಗಳಿಗೆ (90 ಕ್ಕೂ ಅಧಿಕ ಉಪಜಾತಿ) ಗೆ ಅನ್ಯಾಯವಾಗುತ್ತೆ ಎಂದು 30 ವರ್ಷಗಳಿಂದ ಒಳ ಮೀಸಲಾತಿಗಾಗಿ ಹೋರಾಡ್ತ ಬಂದ್ರು. ಇದನ್ನು ಟಚಬಲ್ ಸಮುದಾಯ ವಿರೋಧಿಸಿ ದಲಿತ ಐಕ್ಯತೆಗೆ ಮಾರಕ, ಯಾವುದೊ ಜಾತಿಗಳನ್ನ ಪಟ್ಟಿಯಿಂದ ತೆಗಿತಾರೆ, ಅವೈಜ್ಞಾನಿಕ ಇದು ಎಂದು ಪ್ರಚಾರ ಮಾಡುತ್ತ, ಸದಾಶಿವ ವರದಿಯನ್ನ ವಿರೋಧಿಸುತ್ತಾ ಬಂದ್ರು. ಟಚಬಲ್ ಎಸ್.ಸಿ ಸಮುದಾಯಕ್ಕೆ ಜಾತಿ ವ್ಯವಸ್ಥೆ ಪೂರಕವಾಗಿರೋದು ಪ್ಲಸ್ ಪಾಯಿಂಟ್ ಆದ್ರೆ, ಅಸ್ಪೃಶ್ಯರಿಗೆ ಜಾತಿ ವ್ಯವಸ್ಥೆಯು ಮೀಸಲಾತಿ ಇದ್ರೂನು ದೊಡ್ಡ ಸವಾಲು.ಉದಾ: ಭೋವಿ ಸಮುದಾಯದ ಟಚಬಲ್ ಎಸ್.ಸಿ ರಾಜಕಾರಣಿ ಗೂಳಿಹಟ್ಟಿ ಶೇಖರ್ ಸಾಮಾನ್ಯ ಕ್ಷೇತ್ರದಲ್ಲಿ ಗೆಲ್ಲುತ್ತಾರೆ, ಅದೇ ಅಸ್ಪೃಶ್ಯ ಹೊಲೆಯ ಸಮುದಾಯದ ಡಾ.ಜಿ ಪರಮೇಶ್ವರ್ ಕಾಂಗ್ರೆಸ್ನ ದೊಡ್ಡ ಸ್ಥಾನದಲ್ಲಿದ್ದರೂ, ಹಣಬಲ ಇದ್ದೂ, ಎಸ್.ಸಿ ಮೀಸಲು ಕ್ಷೇತ್ರದಲ್ಲಿ ಸೋಲ್ತಾರೆ.ಈ ತನಕ ಕರ್ನಾಟಕದಲ್ಲಿ ಅಸ್ಪೃಶ್ಯ ರಾಜಕಾರಣಿಗಳು ಎಷ್ಟೇ ಹೆಸರು, ಸ್ಥಾನಮಾನ ಹಣ ಇದ್ದರೂ ಸಾಮಾನ್ಯ ಕ್ಷೇತ್ರದಲ್ಲಿ ಚುನಾವಣೆ ನಿಲ್ಲೋ ದೈರ್ಯ ಮಾಡಿಲ್ಲ ಅದೇ ಆದ್ರೆ ಅದೇ ಟಚಬಲ್ ಎಸ್.ಸಿ ಗಳಿಗೆ ಆ ಧೈರ್ಯ ಇದೆ. ಏಕೆಂದರೆ ಈ ಜಾತಿ ವ್ಯೆಊವಸ್ಥೆಯು ಅವರನ್ನು ಸ್ವೀಕರಿಸುತ್ತೆ. ಇವೆಲ್ಲ ಸೂಕ್ಷ್ಮತೆಗಳನ್ನ, ಒಳ ಮೀಸಲು ಅಗತ್ಯತೆಯನ್ನು ಸಾಮಾಜಿಕ ನ್ಯಾಯ ಪ್ರತಿಪಾದಕರು ಗ್ರಹಿಸ ಬೇಕಾಗುತ್ತೆ.OBC ಗಳು ಮಂಡಲ್ ವರದಿ ವಿಚಾರದಲ್ಲಿ ಬನಾರಸ ವಿಶ್ವವಿದ್ಯಾಲಯದ ವಿಧ್ಯಾರ್ಥಿಗಳು ಸಜೀವ ದಹನಕ್ಕೆ ಮುಂದಾದಾಗ ಈ ದೇಶದ ಅಸ್ಪೃಶ್ಯರು ಅವರ (obc) ಪರ ಧ್ವನಿ ಎತ್ತಿದ್ರು ಆದ್ರೆ ಅದೇ ಅಸ್ಪೃಶ್ಯ ದಲಿತರ ಮೀಸಲಾತಿ ವರ್ಗೀಕರಣದ ಬಗ್ಗೆ OBC ವಿಚಾರವಂತರು ಬುದ್ದಿ ಜೀವಿಗಳು ತಟಸ್ಥರಿರುವುದು ವಿಪರ್ಯಾಸ.ಈ ದೇಶದ, ಈ ರಾಜ್ಯದ ದಲಿತ ದೌರ್ಜನ್ಯ, ಅಟ್ರಾಸಿಟಿ ಪ್ರಕರಣಗಳ ಅಂಕಿ ಅಂಶ ತೆಗೆದರೆ 99% ಅಸ್ಪೃಶ್ಯರೆ ಸಂತ್ರಸ್ಥರು ಇರ್ತಾರೆ. ಅದೇತರ SC ಮೀಸಲಾತಿಯ ಫಲಾನುಭವಿಗಳ ಪಟ್ಟಿ ತೆಗೆದು ನೋಡಿ ಅಲ್ಲಿ ಅಸ್ಪೃಶ್ಯರು ಎಷ್ಟನೆ ಸ್ಥಾನದಲ್ಲಿದ್ದಾರೆ? ಅಂತ. ವಾಸ್ತವ ಬೇರೆನೆ ಇರುತ್ತೆ.ಜಾತಿ ಜನಸಂಖ್ಯೆಗಳನ್ನ, ದಲಿತ ದೌರ್ಜನ್ಯಗಳ ಪ್ರಕರಣಗಳನ್ನ ಮಾನದಂಡವಾಗಿಸಿ ನೋಡಿದ್ರೆ ಮೀಸಲಾತಿ ವರ್ಗೀಕರಣ ತುಂಬಾ ಅತ್ಯಗತ್ಯ ಎಂದು ಯಾರಿಗೂ ಆನಿಸದೆ ಇರಲಾರದು. ಕೆಲವರು ಅಂತಾರೆ ” ಮೀಸಲಾತಿ ವರ್ಗೀಕರಣ ಬೇಡ ಇರೋ 15% ನ ಹೆಚ್ಚಿಗಾಗಲು ಹೋರಾಡೋಣ” ಅಂತ. ಆಗ ಏನಾಗತ್ತೇ? ಈಗ ಇರೋ 15% ನಲ್ಲಿಯೇ ಕೇವಲ 2% ಪಡಿತಿರೋ ಮಾದಿಗ ಮತ್ತು ಮಾದಿಗ ಸಂಬಂಧಿಸಿದ ಜಾತಿಗಳು ಅಕಸ್ಮಾತ್ 30% ಮೀಸಲಾತಿ ಆದ್ರೆ ಆಗ 4% ಪಡಿತಾರೆ ಅಷ್ಟೆ ವ್ಯೆತ್ಯಾಸ ಏನಾಗತ್ತೇ? ಅಲ್ವಾ. ಇಲ್ಲಿ ಸಮಸ್ಯೆ ಇರೋದು ಸಮಾಜ ಒಪ್ಪುವ, ಒಳಗೊಳ್ಳುವ ಸಾಮಾಜಿಕ ಕಳಂಕ ಇರದ ಜಾತಿಗಳನ್ನು ಮತ್ತು ಸಮಾಜ ತಿರಸ್ಕರಿಸಿದ, ಮುಟ್ಟಿಸಿ ಕೊಳ್ಳದೆ ದೂರ ಇಟ್ಟ, ಸಾಮಾಜಿಕ ಕಳಂಕ ಹೊತ್ತ ಜಾತಿಗಳನ್ನ ಪರಸ್ಪರ ಪ್ರತಿ ಸ್ಪರ್ಧಿಗಳನ್ನಾಗಿಸಿ ಇಟ್ಟಿದ್ದಾರಲ್ಲ ಅಲ್ಲಿ ನಿಜವಾದ ಸಮಸ್ಯೆ ಇರೋದು. ಅದು ನಿಜವಾಗಿ ಅವೈಜ್ಞಾನಿಕ, ದಲಿತ ಐಕ್ಯತೆಗೆ ಮಾರಕ ಹೊರತು ಜನಸಂಖ್ಯೆ ಆಧಾರ ಒಳ ಮೀಸಲು ಕಲ್ಪಿಸುವುದು ಮಾರಕವಲ್ಲ ಅವೈಜ್ಞಾನಿಕವೂ ಅಲ್ಲ. ಆಗಾಗಿ ಒಳ ಮೀಸಲಾಯಿತಿ ಜಾರಿ ಆದ್ರೆ ಮಾತ್ರ ಅತಿ ಹೆಚ್ಚು ಜನಸಂಖ್ಯೆ ಒಂದಿರುವ ಸಮುದಾಯಕ್ಕೆ ನ್ಯಾಯ ಸಿಕ್ಕಂತಾಗುತ್ತೆ ಎಂದು ಮಾದಿಗ ದಂಡೋರ ಸಮಿತಿಯ ಗದಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ಬುರಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.