ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಿಟ್ ವಿತರಿಸಿದ – ಸಚಿವ ಶಿವಾನಂದ ಪಾಟೀಲ.
ಬಸವನ ಬಾಗೇವಾಡಿ ಜ.05

ಬಸವನ ಬಾಗೇವಾಡಿ ಪಟ್ಟಣದ ಬಸವೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿರುವ ಭಾರತ ಸೇವಾ ದಳದ ಸಭಾಂಗಣದಲ್ಲಿ ಲಾಡ್ಲಿ ಫೌಂಡೇಶನ್ ಟ್ರಸ್ಟ್ ಹಮ್ಮಿಕೊಂಡಿದ್ದ ಬಸವೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಿಟ್ ವಿತರಣೆ ಸಚಿವರಾದ ಶಿವಾನಂದ್ ಪಾಟೀಲರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಾಲೆಗಳ ಕಟ್ಟಡ ನಿರ್ಮಾಣ ಸೇರಿದಂತೆ ಎಲ್ಲ ಸೌಲಭ್ಯ ಬಳಕೆ ಮಾಡಬೇಕಿದೆ ಎಂದರು.ಲಾಡ್ಲಿ ಫೌಂಡೇಶನ್ ಟ್ರಸ್ಟ್ ಬಸವನ ಬಾಗೇವಾಡಿ ತಾಲೂಕಿನಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣ ಮಾಡುವುದು ಸೇರಿದಂತೆ ಸರ್ಕಾರಿ ಶಾಲೆಗೆ ಹೆಚ್ಚು ಮಕ್ಕಳು ಬರುವಂತಾಗುವ ಉದ್ದೇಶದಿಂದ ಶೈಕ್ಷಣಿಕ ಕಿಟ್ ವಿತರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ. ನಮ್ಮ ತಾಲೂಕಿಗೆ ಈ ಟ್ರಸ್ಟ್ ಹೆಚ್ಚು ಒತ್ತು ನೀಡಿದೆ. ಈ ಟ್ರಸ್ಟ್ ನಿರ್ಮಿಸುವ ಶೌಚಾಲಯವನ್ನು ಹುಡುಗಿಯರು ವಿಶೇಷವಾಗಿ ಸದುಪಯೋಗ ಪಡೆದು ಕೊಳ್ಳಬೇಕು ಅಂತ ಹೇಳಿದರು. ಇದೇ ಸಮಯದಲ್ಲಿ ಈರಣ್ಣ ಪಟ್ಟಣಶೆಟ್ಟಿ ಜಾವಿದ್ ಜಮಾದಾರ್ ತಹಶೀಲ್ದಾರ್ ಯಮನಪ್ಪ ಸೋಮನಕಟ್ಟಿ ಬಲ್ಲಪ್ಪ ನಂದಗಾವಿ ಸಂಗಮೇಶ್ ಪೂಜಾರಿ ಶೇಖರ ಗೊಳಸಂಗಿ ಮುಂತಾದವರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ