ಸುತ್ತಮುತ್ತಲಿ ಗ್ರಾಮಗಳಲ್ಲಿ 80 ಲಕ್ಷ ಅನುದಾನದಲ್ಲಿ ಸಿ.ಸಿ ರಸ್ತೆ ಚರಂಡಿ ಭೂಮಿ ಪೂಜೆ – ಮಾಡಿದ ಶಾಸಕರು.
ರಾಂಪುರ ಜ.05

ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಎನ್ ವೈ ಗೋಪಾಲಕೃಷ್ಣ ನವರುರಾಂಪುರ ಗ್ರಾಮದ ಎಸ್ ಸಿ ಕಾಲೋನಿಯ ₹50 ಲಕ್ಷ ಸಿಸಿ ರಸ್ತೆ ಮತ್ತು ಚರಂಡಿ. ಹೊಸ ದಡಗೂರು ಗ್ರಾಮದ ಎಸ್ ಸಿ ಕಾಲೋನಿ ₹15 ಲಕ್ಷ ಸಿಸಿ ರಸ್ತೆ. ಎಸ್ ಹನುಮಾಪುರ ಗ್ರಾಮದ ಎಸ್ ಸಿ ಕಾಲೋನಿ ₹15 ಲಕ್ಷ ಸಿಸಿ ರಸ್ತೆ ಗ್ರಾಮಗಳ ಶಂಕುಸ್ಥಾಪನೆ ನೆರವೇರಿಸಲಾಯಿತು.

ಶಾಸಕರನ್ನು ಗೌರವ ತೋರಲು ನೂರಾರು ಮಹಿಳೆಯರು ಭಾಗವಹಿಸಿ ಶಾಸಕರಿಗೆ ಹೆಚ್ಚಿನ ಮಟ್ಟದಲ್ಲಿ ಮಹಿಳೆಯರು ಸ್ವಾಗತ ಕೋರಿದ್ದಾರೆ. ಈ ಸಂದರ್ಭದಲ್ಲಿ ಮೊಳಕಾಲ್ಮೂರು ಗುತ್ತಿಗೆದಾರ ಅಧ್ಯಕ್ಷರಾದ ಖಾದರ್ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮೂರು