“ಪ್ರಾಮಾಣಿಕತೆಯೇ ನಿಜ ಜೀವನದ ಬಣ್ಣ”…..

ಸೃಷ್ಟಿಯ ಬಣ್ಣ ಕಾಮನಬಿಲ್ಲಿನಲಿ
ಬದುಕಿ ಬಣ್ಣ ಮಾನವನಲ್ಲಿ
ರವಿಯ ಕಣ್ಣಲ್ಲಿ ಜಗದ ಬಣ್ಣ
ಮುಖದ ಬಣ್ಣ ಬದಲಾದರೂ
ಮನದ ಬಣ್ಣ ಬದಲಾಗದು
ನಂಬಿಕೆ ನಿಷ್ಠೆ ಬಿಳಿಯ ಬಣ್ಣ
ಸತ್ಯತೆಯ ಬಣ್ಣ ಬಳಿದಾಗ
ಮಿತ್ರ ಬದಾಲಾಗಿ ಶತ್ರುತ್ವದ ಬಣ್ಣದಲಿ
ಬಣ್ಣ ಬದಲಾಯಿಸದಿರು
ನೈಜತೆಯ ಬಣ್ಣ ಬಾಳಿಗೆ ಮೆರಗು
ನಿತ್ಯ ಸತ್ಯತೆಯ ಕಾಯಕ ಜೀವನ
ಪ್ರಾಮಾಣಿಕತೆಯೇ ನಿಜ ಜೀವನದ ಬಣ್ಣ

-ಶ್ರೀದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
ಬಾಗಲಕೋಟ.