ಪಿ ಎಲ್ ಡಿ ಬ್ಯಾಂಕ್ ಚುನಾವಣೆಯಲ್ಲಿ ಕೆಂಗಾರ ವಿರುದ್ಧ – ಗೋವಿಂದಗೌಡ್ರ ಗೆಲುವು.
ರೋಣ ಜ.09

ನಗರದಲ್ಲಿ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ರೋಣ ಇದರ ಹೊಳೆ ಆಲೂರ ಸಾಲಗಾರ ಮತ ಕ್ಷೇತ್ರಕ್ಕೆ ಇದೇ ಜನೆವರಿ 5 ರಂದು ನಡೆದ ಚುನಾವಣೆಯಲ್ಲಿ ಬಜೆಪಿ ಬೆಂಬಲಿತ ಅಭ್ಯಾರ್ಥಿ ಹುಲ್ಲಪ್ಪ ಬಸವರಾಜ ಕೆಂಗಾರ ಅವರ ವಿರುದ್ಧ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿ ಯಚ್ಚರಗೌಡ ವೆಂಕನಗೌಡ ಗೋವಿಂದಗೌಡ್ರ ಗೆಲುವು ಸಾಧಿಸಿದರು. ಒಟ್ಟು 169 ಮತಗಳ ಇದ್ದು ಇದರ ಪೈಕಿ 82 ಮತಗಳನ್ನು ಹುಲ್ಲಪ್ಪ ಕೆಂಗಾರ ಪಡೆದಿದ್ದು, ಯಚ್ಚರಗೌಡ ಗೋವಿಂದಗೌಡ್ರ 87 ಮತಗಳನ್ನು ಪಡೆದು 5 ಮತಗಳ ಅಂತರದಿಂದ ಗೆಲುವು ಸಾಧಿಸಿದರು.ಇದೆ ಸಂದರ್ಭದಲ್ಲಿ ಶಾಸಕ ಜಿ.ಎಸ್ ಪಾಟೀಲ ವ್ಯಕ್ತಿಯಲ್ಲ ಬದಲಾಗಿ ಅವರೊಂದು ಶಕ್ತಿ ಎಂದು ಪಿ.ಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಂಗಪ್ಪ ಮೆಣಸಿನಕಾಯಿ ಹೇಳಿದರು.ಬುಧವಾರ ಪಿ.ಎಲ್.ಡಿ ಬ್ಯಾಂಕ್ ಚುನಾವಣೆಯಲ್ಲಿ ವಿಜೇತರಾದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸುವ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದರು.ರೋಣ ಪಿ.ಎಲ್.ಡಿ ಬ್ಯಾಂಕ್ ರೈತರ ಪ್ರತಿಷ್ಠಿತ ಬ್ಯಾಂಕ್ ಎನ್ನುವುದರಲ್ಲಿ ಸಂದೇಹಲ್ಲ.

ಅಲ್ಲದೆ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಬ್ಯಾಂಕ್ ಜನ್ಮ ತಾಳಿದ ದಿನದಿಂದ ಮತದಾರರು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಹೆಚ್ಚಿನ ಒಲುವು ತೋರುವ ಮೂಲಕ ಆಡಳಿತದ ಚುಕ್ಕಾಣಿ ನೀಡಿದ್ದಾರೆ. ಶಾಸಕ ಜಿ.ಎಸ್ ಪಾಟೀಲ ಅನೇಕ ಯೋಜನೆ ತರುವ ಮೂಲಕ ಅವುಗಳನ್ನು ರೈತರಿಗೆ ತಲುಪಿಸುವಲ್ಲಿ ಪ್ರಾಮಾಣಿಕತೆ ತೊರಿದ್ದರ ಫಲವಾಗಿ ಇಂದು ಕಾಂಗ್ರೆಸ್ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದಾರೆ ಎಂದರು.14 ಸ್ಥಾನಗಳನ್ನು ಹೊಂದಿರುವ ಪಿ.ಎಲ್.ಡಿ ಬ್ಯಾಂಕ್‌ಗೆ ಕಾಂಗ್ರೆಸ್ ಬೆಂಬಲಿತ 7 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆ ಗೊಂಡಿದ್ದರು. ಇನ್ನು 7 ಕ್ಷೇತ್ರಗಳಿಗೆ ಜ.5 ರಂದು ಚುನಾವಣೆಗೆ ದಿನಾಂಕ ನಿಗದಿಯಾಗಿತ್ತು. ಅಲ್ಲದೆ ಚುನಾವಣೆ ನಂತರ ಮತಗಳ ಎಣಿಕೆ ಕಾರ್ಯ ನಡೆದಿತ್ತು. ಆದರೆ ನ್ಯಾಯಲಯದಲ್ಲಿ ಪ್ರಕರಣವಿದ್ದ ಕಾರಣ ವಿಜೇತ ಅಭ್ಯರ್ಥಿಗಳ ಘೋಷಣೆ ಮಾಡಿರಲಿಲ್ಲ. ಹೀಗಾಗಿ ಎಣಿಕೆಯಲ್ಲಿ ಮುಂದಿದ್ದ ಅಭ್ಯರ್ಥಿಗಳು ವಿಜಯೋತ್ಸವ ಆಚರಿಸಿದ್ದರು. ಆದರೆ 7 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಗಿದ್ದು, ಸವಡಿ ಕ್ಷೇತ್ರದ ಪ್ರಕರಣ ಮಾತ್ರ ನ್ಯಾಯಲಯದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಬಸನಗೌಡ ಪೋಲಿಸ್ ಪಾಟೀಲ್, ನಿಂಗಪ್ಪ ಬದಾಮಿ, ಬಾಳಪ್ಪ ಖ್ಯಾಡ, ರಂಗನಗೌಡ ಪಾಟೀಲ, ಹೆಂಮತಗೌಡ ಬಾಲನಗೌಡ್ರ, ಮಾದೇನಗೌಡ ಭೀಮನಗೌಡ್ರ, ಮಹಾಗುಂಡಪ್ಪ ಭಾವಿ. ವೀರನಗೌಡ ಭೀಮನಗೌಡ್ರ, ವೆಂಕನಗೌಡ ಗೋವಿಂದಗೌಡ್ರ, ವೀರನಗೌಡ ಗಿಡ್ಡಮಣ್ಣವರ, ಶೇಖರಗೌಡ ಬಾಳನಗೌಡ್ರ, ಕುಬೇರಗೌಡ ಭೀಮನಗೌಡ್ರ, ಶಿವುಕುಮಾರ ಭಾವಿ, ರವಿ ವಡ್ಡರ ಸೇರಿದಂತೆ ಅನೇಕ ಇದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ. ರೋಣ.ಗದಗ