ಮಕ್ಕಳನ್ನು ಪ್ರೋತ್ಸಾಹಿಸಿ : ಬಾಲ್ಯ ಅನುಭವಿಸಲು ಅವಕಾಶ ನೀಡಿ.
ಇಂಡಿ ಜೂನ್.19

ಇಂಡಿ ಮಕ್ಕಳು ಶಿಕ್ಷಣ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಬೇಕು. ಮತ್ತು ಬಾಲ್ಯವನ್ನು ಅನುಭವಿಸಲು ಪೋಷಕರು ಅವಕಾಶ ಮಾಡಿಕೊಡಬೇಕು ಎಂದು ದಿವಾಣಿ ನ್ಯಾಯಾಧೀಶ ಈಶ್ವರ ಎಸ್.ಎಮ್ ಹೇಳಿದರು.ಪಟ್ಟಣದ ಸರಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ,ವಕೀಲರ ಸಂಘ ಮತ್ತು ಕಾರ್ಮಿಕ ಇಲಾಖೆ ಸಹಯೋಗದಲ್ಲಿ ನಡೆದ ಬಾಲ ಕಾರ್ಮಿಕ ವಿರೋಧಿ ದಿನದ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.ಮುಖ್ಯ ಗುರುಗಳಾದ ಎ.ಓ.ಹೂಗಾರ ಮಾತನಾಡಿ ೧೮ ವರ್ಷದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಅದರಲ್ಲೂ ೧೪ವರ್ಷದೊಳಗಿನ ಮಕ್ಕಳು ಯಾವುದೇ ಅಪಾಯಕಾರಿ ಕೆಲಸ ಮಾಡುವಂತಿಲ್ಲ. ಬಾಲ ಕಾರ್ಮಿಕರಾಗಿ ದುಡಿಯುವಂತಹ ಮಕ್ಕಳು ಕಂಡಲ್ಲಿ ಸಾರ್ವಜನಿಕರು ಕಾರ್ಮಿಕ ಇಲಾಖೆಯ ಗಮನಕ್ಕೆ ತರಲು ವಿನಂತಿಸಿದರು.ಕಾರ್ಮಿಕ ನಿರೀಕ್ಷಕ ಜಗದೇವಿ ಸಜ್ಜನ ಮಾತನಾಡಿ ಮಕ್ಕಳನ್ನು ಬಾಲ್ಯದಲ್ಲಿಯೇ ದುಡಿಮೆಗೆ ತಳ್ಳುವದು ಶಿಕ್ಷಾರ್ಹ ಎಂದರು. ನ್ಯಾಯವಾದಿ ಜೆ.ಟಿ.ಬೆನೂರ ಉಪನ್ಯಾಸ ನೀಡಿ, ಯೋಗ ಶಿಕ್ಷಕ ಬಿ.ಎಸ್.ಪಾಟೀಲ,ಡಿ.ಎಸ್.ಬಿರಾದಾರ ಮಾತನಾಡಿದರು.ವೇದಿಕೆಯ ಮೇಲೆ ವಕೀಲರ ಸಂಘದ ಅಧ್ಯಕ್ಷ ಪಿ.ಬಿ.ಪಾಟೀಲ,ಕಾರ್ಯದರ್ಶಿ ಎಸ್.ಆರ್.ಬಿರಾದಾರ,ಕಾರ್ಮಿಕ ನೀರಿಕ್ಷಕ ಎಸ್.ಜಿ.ಖೈನೂರ ಮತ್ತಿತರಿದ್ದರು.ಸಮಾರಂಭದಲ್ಲಿ ಶಾಲಾ ಮಕ್ಕಳು ಹಾಗೂ ಸಿಬ್ಬಂದಿವರ್ಗ ಪಾಲ್ಗೊಂಡಿದ್ದರು.