ಜನೆವರಿ 20 ರಂದು ಸಚಿವ ಶಿವಾನಂದ ಪಾಟೀಲರ – ಮನೆಗೆ ರೈತರಿಂದ ಮುತ್ತಿಗೆ.
ಇಂಡಿ ಜ.15

20.1.2025 ರಂದು ಜವಳಿ, ಸಕ್ಕರೆ ಹಾಗೂ APMC ಸಚಿವರಾದ ಶಿವಾನಂದ ಪಾಟೀಲ್ ರವರ ಮನೆಯ ಎದುರಿಗೆ ನಡೆಯಲಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಹೋರಾಟದಲ್ಲಿ ಸಾವಿರಾರು ಸಂಖ್ಯೆಯಲ್ಲಿ ರೈತರು ಭಾಗವಹಿಸಿ ಕಬ್ಬಿನ ಬೆಂಬಲ ಬೆಲೆ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಹಲವಾರು ರೈತರ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಹೋರಾಟ ಅನಿವಾರ್ಯವಾಗಿದೆ ಆದ್ದರಿಂದ ಜಿಲ್ಲೆಯ ಎಲ್ಲಾ ರೈತರು ಪಕ್ಷಾತೀತವಾಗಿ ಹಾಗೂ ಜ್ಯಾತ್ಯಾತೀತವಾಗಿ ಭಾಗವಹಿಸಿ ಈ ಹೋರಾಟವನ್ನು ಯಶಸ್ವಿ ಗೋಳಿಸ ಬೆಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಿಜಯಪುರ ಮತ್ತು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷರಾದ ಚೂನ್ನಪ್ಪ ಪೂಜೇರಿ ಹಾಗೂ ಜಿಲ್ಲಾಧ್ಯಕ್ಷರಾದ ಸಂಗಮೇಶ ಅವರ ನೇತೃತ್ವದಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಇಂಡಿ ತಾಲೂಕಾ ಅಧ್ಯಕ್ಷರಾದ ಎಂ.ಹೆಚ್ ಪೂಜಾರಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶಿವಪ್ಪ.ಬಿ.ಹರಿಜನ.ಇಂಡಿ.ವಿಜಯಪುರ