ಪಟ್ಟಭದ್ರ ಹಿತಾಸಕ್ತಿಗಳು ಧರ್ಮ ಮತ್ತು ಜಾತಿ ಹೆಸರಿನಲ್ಲಿ ದೇಶ ಒಡೆಯುವ ಹುನ್ನಾರ – ಕಾಶಪ್ಪನವರ.
ಹುನಗುಂದ ಜನೇವರಿ.26

ಕೆಲವೊಂದು ಪಟ್ಟಭದ್ರ ಹಿತಾಸಕ್ತಿಗಳು ಧರ್ಮ ಮತ್ತು ಜಾತಿ ಹೆಸರಿನ ಮೇಲೆ ದೇಶ ಒಡೆಯಲು ಪ್ರಯತ್ನಸುತ್ತಿವೆ.ಅದು ಎಂದು ಸಾಧ್ಯವಿಲ್ಲ.ಡಾ.ಬಿ.ಆರ್.ಅಂಬೇಡ್ಕರ ಅವರು ಜಾತ್ಯಾತೀತ ತಳಹದಿಯ ಮೇಲೆ ಸಂವಿಧಾನವನ್ನು ನೀಡಿದ್ದಾರೆ. ಭಾರತ ವಿವಿಧತೆಯಲ್ಲಿ ಏಕತೆಯ ಭಾವದಿಂದ ನಾವೆಲ್ಲರೂ ಒಂದಾಗಿ ದೇಶದ ಗೌರವ ಹೆಚ್ಚಿಸೋಣ ಎಂದು ಶಾಸಕ ವಿಜಯಾನಂದ ಕಾಶಪ್ಪವರ ಹೇಳಿದರು. ಶುಕ್ರವಾರ ಪಟ್ಟಣದ ಟಿಸಿಎಚ್ ಮೈದಾನದಲ್ಲಿ ತಾಲೂಕಾ ಆಡಳಿತದಿಂದ ಹಮ್ಮಿಕೊಂಡ ೭೫ನೇ ಗಣರಾಜ್ಯೋತ್ಸವದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,೧೯೪೯ ನ.೨೬ರಂದು ಪವಿತ್ರವಾದ ಸಂವಿಧಾನವನ್ನು ಶಾಸನಬದ್ದವಾಗಿ ನಾವೆಲ್ಲ ಒಪ್ಪಿಕೊಂಡು. ೧೯೫೦ ಜ.೨೬ರಂದು ಅಧಿಕೃತ ಅಂಗೀಕಾರ ಮಾಡುವ ಮೂಲಕ ಜಾತ್ಯಾತೀತ ರಾಷ್ಟçವೆಂದು ಘೋಷಣೆ ಆಗಿದೆ.ಪ್ರಜಾಪ್ರಭತ್ವದ ತತ್ವ ಸಿದ್ದಾಂತಗಳನ್ನು ಎತ್ತಿ ಹಿಡಿಯುವ ಕಾರ್ಯವನ್ನು ನಾವೆಲ್ಲರೂ ಮಾಡೋಣ.ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪವಿತ್ರ ಸಂವಿಧಾನದ ಪೂರ್ವ ಪೀಠಿಕೆಯನ್ನು ಓದಿ ೭೫ ನೆಯ ಗಣರಾಜ್ಯೋತ್ಸವ ಸಮಾರಂಭ ಆಚರಿಸುವಂತೆ ಆದೇಶಸಿದ್ದರಿಂದ ನಾವೆಲ್ಲ ಸಂವಿಧಾನ ಪೂರ್ವ ಪೀಠಿಕೆಯನ್ನು ಓದಿದ್ದೇವೆ.೨೦೦೬ ರಲ್ಲಿ ನೇಮಕಗೊಂಡ ಸರ್ಕಾರಿ ನೌಕರರ ಪಾಲಿನ ಮರಣ ಶಾಸನವಾಗಿದ್ದ ಹೊಸ ಪಿಂಚಣಿ ವ್ಯವಸ್ಥೆಯನ್ನು ರದ್ದುಪಡಿಸುವ ಮೂಲಕ ಹಳೆ ಪಿಂಚಣೆ ಜಾರಿಗೆ ತಂದು ೧೩ ಸಾವಿರ ಸರ್ಕಾರಿ ನೌಕರರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದರು.ತಾಲೂಕ ದಂಡಾಧಿಕಾರಿ ತಹಶೀಲ್ದಾರ ನಿಂಗಪ್ಪ ಬಿರಾದಾರ ಧ್ವಜಾರೋಹಣ ನೆರವೇರಿಸಿ ಮಾತನಾಡಿ ನಮ್ಮ ಬೃಹತ್ ಪ್ರಜಾಪ್ರಭುತ್ವ ರಾಷ್ಟçದಲ್ಲಿ ನಾವೆಲ್ಲ ಏಕತೆ ಮತ್ತು ಸಮಾನತೆಯ ಬದುಕು ನಡೆಸುತ್ತಿದ್ದು.ಸಂವಿಧಾನವು ಪ್ರಜಾಪ್ರಭುತ್ವ ಸಾಕಾರಕ್ಕೆ ಮತ್ತು ಉಜ್ವಲ ಭವಿಷ್ಯದ ಜೊತೆಗೆ ಸ್ಪೂರ್ತಿದಾಯಕವಾಗಿದೆ ಎಂದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಸವರಾಜ ಮಠದ, ವಿಶ್ವನಾಥ ವಂಶಾಕೃತಮಠ ಮಾತನಾಡಿದರು.ಮೊದಲು ಪೊಲಿಸರಿಂದ ಮತ್ತು ಎನ್‌ಸಿಸಿ ತಂಡಗಳಿಂದ ಧ್ವಜವಂದನೆ ನಡೆಯಿತು. ವಿದ್ಯಾರ್ಥಿಗಳಿಂದ ವಂದೆ ಮಾತರಂ ಮತ್ತು ನಾಡಗೀತೆ ನಡೆಯಿತು. ಕ್ರೀಡೆ ಮತ್ತು ಸಾಂಸ್ಕೃತಿ ಕರ‍್ಯಕ್ರಮಗಳಲ್ಲಿ ವಿಜೇತರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ಆದರ್ಶ ಶಿಕ್ಷಕರನ್ನು ಗೌರವಿಸಿ ಸನ್ಮಾನಿಸಲಾಯಿತು. ನಗರದ ವಿವಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಮತ್ತು ದೇಶ ಭಕ್ತಿ ಗೀತೆ ಹಾಗೂ ನೃತ್ಯ ನಡೆದವು. ನಂತರ ಮಕ್ಕಳಿಗೆ ಅಬಿನಂದನಾ ಪತ್ರ ನೀಡಲಾಯಿತು. ಡಾ. ಬಿ.ಆರ್. ಅಂಬೇಡ್ಕರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಪುರಸಭೆ ಅಧ್ಯಕ್ಷ ಪರವೇಜ ಖಾಜಿ,ಉಪಾಧ್ಯಕ್ಷೆ ಶಾಂತಾ ಮೇಲಿನಮನಿ,ಶರಣು ಬೆಲ್ಲದ,ಮೈನು ದನ್ನೂರ, ಬಸವರಾಜ ಗೊಣ್ಣಾಗರ,ಹರ್ಷದ್ ನಾಯಕ,ಯಲ್ಲಪ್ಪ ನಡುವಿನಮನಿ,ಚಂದ್ರು ತಳವಾರ,ಸಂಗಣ್ಣ ಗಂಜೀಹಾಳ,ಮುತ್ತು ಲೋಕಾಪೂರ,ಸಂಗಮೇಶ ಭದ್ರಶಟ್ಟಿ,ಸಂಗಪ್ಪ ಹೂಲಗೇರಿ,ಅಮರೇಶ ನಾಗೂರ,ಮುತ್ತಣ್ಣ ಗಂಜೀಹಾಳ,ಯಮನಪ್ಪ ಬೆಣ್ಣಿ,ಶರಣಪ್ಪ ಹೂಲಗೇರಿ,ಮಹಾಂತೇಶ ಅವಾರಿ,ಶಿವಾನಂದ ಕಂಠಿ,ವಿಜಯಮಹಾಂತೇಶ ಗದ್ದನಕೇರಿ ತಾಪಂ ಇಒ ಮುರಳಿ ದೇಶಪಾಚಿಡೆ,ಸಾರಿಗೆ ಘಟಕ ವ್ಯವಸ್ಥಾಪಕ ಎಸ್.ಆರ್.ಸೊನ್ನದ,ಸಿಪಿಐ ಸುನೀಲ್ ಸವದಿ,ಮುಖ್ಯಾಧಿಕಾರಿ ಪಿ.ಕೆ. ಗುಡಧಾರಿ, ಸೇರಿದಂತೆ ಇತರರಿದ್ದರು. ಬಿಇಒ ಜಾಸ್ಮಿನ್ ಕಿಲ್ಲೇದಾರ ಸ್ವಾಗತಿಸಿದರು. ಸಂಗಮೇಶ ಹೊದ್ಲೂರ ಮತ್ತು ಡಾ. ರಂಜಣಗಿ ನಿರೂಪಿಸಿದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ