ಅದ್ದೂರಿ ಯಾಗಿ ನಡೆದ ಬೆಳಗಾವಿಯ – ನುಡಿ ಸಡಗರ.
ಬೆಳೆಗಾವಿ ಜ. 15

ಚೇತರ ಫೌಂಡೇಶನ್ ಧಾರವಾಡ ಕನ್ನಡ ಮತ್ತು ಸಂಸ್ಕೃತ ಇಲಾಖೆ ಬೆಳಗಾವಿ ಇವರ ಸಯೋಗದಲ್ಲಿ ಬೆಳಗಾವಿ ನುಡಿ ಸಡಗರ ಕಾರ್ಯಕ್ರಮ ಕುಮಾರ ಗಂಧರ್ವ ಕಲಾ ಮಂದಿರ ಬೆಳಗಾವಿಯಲ್ಲಿ ಜರಗಿತು. ಕಾರ್ಯಕ್ರಮದ ನೇತೃತ್ವ ಸುರೇಶ್ ಬೋರೆಕೊಪ್ಪ ಚೇತನ ಫೌಂಡೇಶನ್ ಪೋಷಕರು ಸಾಹಿತಿಗಳು ಬೆಳಗಾವಿ, ಚೇತನ ಫೌಂಡೇಶನ್ ನ ಮುಖ್ಯ ಸಂಚಾಲಕರು ಭಾಗ್ಯಶ್ರೀ ರಜಪೂತ, ವೀರೇಶ್ ಕೆ.ಎಸ್, ಸಂಗೀತ ಮಠಪತಿ, ಪ್ರಶಾಂತ್ ಗೌಡ ಪಾಟೀಲ್, ಮಂಜುಳ ಬೆಣ್ಣೆ, ಪ್ರೇಮ ಭಜಂತ್ರಿ, ನಿರಂಜನ್ ಕುಮಾರ್ ಎ, ಕಾರ್ಯಕ್ರಮವನ್ನು ಉದ್ಘಾಟಿಸಿದರು, ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾ, ಜಿ ಶಿವಣ್ಣ ರಾಜ್ಯಾಧ್ಯಕ್ಷರು ಸುವರ್ಣ ಕರ್ನಾಟಕ ಪತ್ರಕರ್ತರ ಸಂಘ ಬೆಂಗಳೂರು.

ಕಾರ್ಯಕ್ರಮದಲ್ಲಿ ಚೇತನ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರು ಮತ್ತು ಕಾರ್ಯಕ್ರಮದಲ್ಲಿ ಪ್ರಾಸ್ತವಿಕವಾಗಿ ಚಂದ್ರಶೇಖರ ಮಾಡಲಗೇರಿ ಮಾತನಾಡಿ ಚೇತನ ಫೌಂಡೇಶನ್ ಅತ್ಯಂತ 233 ನೇ. ಕಾರ್ಯಕ್ರಮಗಳನ್ನು ನಡೆಸಿ ಕೊಂಡು ಬಂದಿದ್ದು. ಬೆಂಗಳೂರು ನುಡಿ ಸಡಗರ, ಇಂದು ಬೆಳಗಾವಿ ನುಡಿ ಸಡಗರ ಮತ್ತು ಮುಂದಿನ ದಿನಗಳಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ನುಡಿ ಸಡಗರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಮತ್ತು ಕನ್ನಡ ಸಾಹಿತ್ಯಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದ ಮಹನೀಯರನ್ನು ಹಾಗೂ ಬೆಳಗಾವಿಯ ವಿದ್ವಾಂಸರನ್ನು ಈ ಕಾರ್ಯಕ್ರಮದಲ್ಲಿ ಸ್ಮರಿಸಿದರು. ಕನ್ನಡ ಸಾಹಿತ್ಯಕ್ಕೆ ಬೆಳಗಾವಿಯ ವಿದ್ವಾಂಸರ ಕುರಿತು ಸವಿವರವಾಗಿ ಮಾತನಾಡಿದರು. ಚೇತನ ಫೌಂಡೇಶನ್ ಅತ್ಯಂತ ಕ್ರಿಯಾಶೀಲವಾಗಿ ಕನ್ನಡ ನಾಡಿನ ಅನೇಕ ಸಾಧಕರನ್ನು ಗುರುತಿಸಿ ಗೌರವಿಸಿದೆ, ಡಾ, ಬಿ.ಎಸ್ ಪುಷ್ಪ ಸೇರಿದಂತೆ ಇತರರು ಕನ್ನಡ ಮನಸುಗಳು ಭಾಗವಹಿಸಿದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಕೆ.ಎಸ್.ವೀರೇಶ್.ಕೆ.ಹೊಸಹಳ್ಳಿ