ಕೂಡ್ಲಿಗಿ – ಕುಷ್ಟಗಿಯ ಹಿರಿಯ ಪತ್ರಕರ್ತ. ದಿll ಶರಣಪ್ಪ ಕುಂಬಾರ ರವರಿಗೆ — ಸಮಾನ ಮನಸ್ಕ ಪತ್ರಕರ್ತರಿಂದ ಶ್ರದ್ಧಾಂಜಲಿ.

ಕೂಡ್ಲಿಗಿ ಜುಲೈ.7

ವಿಜಯನಗರ ಜಿಲ್ಲೆಯ ಕೂಡ್ಲಿಗಿ: ಜು6ರಂದು ಪಟ್ಟಣದಲ್ಲಿ ಪತ್ರಕರ್ತರಿಂದ, ಕೊಪ್ಪಳ ಜಿಲ್ಲೆ ಕುಷ್ಟಗಿಯ ಹಿರಿಯ ಪತ್ರಕರ್ತ ಶರಣಪ್ಪ ಕುಂಬಾರವರು. ಜು5ರಂದು ರಾತ್ರಿ ನಿಧನದರಾದ ಹಿನ್ನಲೆಯಲ್ಲಿ, ಅವರ ಆತ್ಮಕ್ಕೆ ದೇವರು ಚಿರಶಾಂತಿ ಕರುಣಿಸಲೆಂದು. ಕೂಡ್ಲಿಗಿ ಪಟ್ಟಣದಲ್ಲಿ ಸಮಾನ ಮನಸ್ಕ ಪತ್ರಕರ್ತರು, ದೇವರಲ್ಲಿ ಪ್ರಾರ್ಥಿಸಿ ಒಂದು ನಿಮಿಷ ಮೌನಾಚರಣೆ ಮಾಡೋ ಮೂಲಕ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಪತ್ರಕರ್ತ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಮಾತನಾಡಿ, ಕೊಪ್ಪಳ ಜಿಲ್ಲೆ ಕುಷ್ಟಗಿಯ ಹಿರಿಯ ಪತ್ರಕರ್ತರಾದ ಶರಣಪ್ಪ ಕುಂಬಾರವರು. ಕೆಲ ದಶಕಗಳ ಕಾಲ ಪತ್ರಿಕಾ ರಂಗವೇ ತಮ್ಮ ಜೀವನ ಎಂದು ಕೊಂಡಿದ್ದವರು, ಮೊನಚಾದ ಬರವಣಿಗೆ ಮೂಲಕ ಸಮಾಜದಲ್ಲಿನ ಅಂಕುಡೊಂಕುಗಳನ್ನು, ನೇರ ನಿಷ್ಠುರವಾಗಿ ಜನರಿಗೆ ಶೀಘ್ರವಾಗಿ ತಲುಪಿಸುವಲ್ಲಿ ಯಶಸ್ವಿಯಾದವರು. ಅವರು 48ವಸಂತ ಗಳನ್ನು ಕಂಡಿದ್ದು, ಸುಮಾರು 20ವಸಂತಗಳ ಕಾಲ ಪತ್ರಿಕಾರಂಗದಲ್ಲಿದ್ದು ಸೇವೆ ಸಲ್ಲಿಸಿದ್ದಾರೆ. ಪ್ರಾರಂಭದಲ್ಲಿ ಅವರು ಹಲವು ಪತ್ರಿಕೆಗಳಲ್ಲಿ ವರದಿಗಾರರಾಗಿ ಸೇವೆಸಲ್ಲಿಸಿ ಶ್ರಮಿಸಿದ್ದು, ತದ ನಂತರ ತಮ್ಮದೇ ಆದ ಸ್ವಂತ “ಕೃಷಿ ಪ್ರಿಯ” ಎಂಬ ಸಾಮಾಜಿಕ ಜಾಲತಾಣದ ವೆಬ್ ಪ್ರೋರ್ಟಲ್ ಪ್ರಾರಂಭಿಸಿದರು. ಅವರು ತಮ್ಮ ಸಂಪಾದಕತ್ವದಲ್ಲಿ ವೆಬ್ ಮೀಡಿಯಾವನ್ನು ಚಾಲನೆಗೊಳಿಸಿದರು, ಈ ಮೂಲಕ ಹಲವು ವರ್ಷಗಳಿಂದ ಮಾದ್ಯಮ ಮಿತ್ರರಿಗೂ ಹಾಗೂ ಓದುವ ಬಳಗಕ್ಕೆ. ಕೈ ಬೆರಳ ತುದಿಯಲ್ಲಿ ಅತೀ ಶೀಘ್ರವಾಗಿ ಸುದ್ದಿಗಳನ್ನು, ತಲುಪಿಸುವಲ್ಲಿ ಯಶಸ್ವಿಯನ್ನು ಅವರು ಕಂಡಿದ್ದರು. ಸಮಾಜ ಸೇವೆಗೆಂದೇ ತಮ್ಮನ್ನು ಮೀಸಲಾಗಿರಿಸಿಕೊಂಡು, ಹಗಲಿರುಳು ಎನ್ನದೆ ಸಮಾಜಕ್ಕೆ ಶ್ರಮಿಸಿದವರು. ಇಂತಹ ಸಮಾಜ ಸೇವಕ ಹಿರಿಯ ಪತ್ರಕರ್ತರಾದ, ಶರಣಪ್ಪ ಕುಂಬಾರವರ ಅಗಲಿಕೆಯಿಂದ. ನಾಡಿನ ಸಮಸ್ತ ಪತ್ರಿಕಾ ಬಳಗಕ್ಕೆ ತುಂಬಲಾರದ ನಷ್ಟವಾಗಿದೆ, ಹಣ ಕೊಟ್ಟರೆ ಪ್ರಶಸ್ಥಿ ಸಿಗುತ್ತದೆ ಆದರೆ ಬದುಕಿನಲ್ಲಿ ಸಾಧಕರಾಗಿ ಯಶಸ್ವಿ ಜೀವನವನ್ನು ನಡೆಸುವುದೇ ಅತೀ ದೊಡ್ಡ ಪ್ರಶಸ್ತಿಯಾಗಿದೆ. ಆಧುನಿಕ ತಂತ್ರಜ್ಞಾನದ ಪ್ರಪಂಚದಲ್ಲಿ ಪತ್ರಿಕಾರಂಗದಲ್ಲಿದ್ದು ಕೊಂಡು, ಪತ್ರಕರ್ತರು ಬದುಕಿನುದ್ದಕ್ಕೂ ಸೌಮ್ಯತೆ ಹಾಗೂ ಮುಗ್ಧತೆ ಕಾಪಾಡಿಕೊಳ್ಳುವುದು ತುಂಬಾ ಕಷ್ಟ, ಶರಣಪ್ಪ ಕುಂಬಾರವರು ಇದಕ್ಕೆ ಹೊರತೇನಲ್ಲ. ಅವರು ಆತ್ಮ ಸಾಕ್ಷಿಯಿಂದ ಪತ್ರಿಕಾರಂಗದಲ್ಲಿ ಸೇವೆ ಸಲ್ಲಿಸಿದವರು, ಅವರ ನಿಷ್ಠೆ ಹಾಗೂ ಆದರ್ಶಯುತ ಸೇವೆ ನಾಡಿನ ಪತ್ರಕರ್ತರಿಗೆ ಮಾದರಿಯಾಗಿದೆ. ಅವರ ಅಗಲಿಕೆಯಿಂದ ಇಡೀ ಪತ್ರಿಕಾ ರಂಗಕ್ಕೆ ತುಂಬಲಾರದ ನಷ್ಟವಾಗಿದ್ದು, ದೇವರು ಶರಣಪ್ಪರವರ ಕುಟುಂಬಕ್ಕೆ ಅಗಲಿಕೆಯ ದುಖಃವನ್ನು ಸಹಿಸಿಕೊಳ್ಳುವ ಶಕ್ತಿ ತುಂಬಲಿ, ಹಾಗೂ ಶರಣಪ್ಪರವರ ಆತ್ಮಕ್ಕೆ ಚಿರಶಾಂತಿ ದೊರಕಿಸಲೆಂದು ಈ ಮೂಲಕ ದೇವರಲ್ಲಿ ಕರುಣಿಸಲೆಂದು . ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿದ ಪತ್ರಕರ್ತರು, ಸಂಡೂರು ತಾಲೂಕಿನ ವಿವಿದ ಪತ್ರಕರ್ತರು ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಇದ್ದರು.

ಜಿಲ್ಲಾ ವರದಿಗಾರರು:ರಾಘವೇಂದ್ರ.ಸಾಲುಮನಿ. ಕೂಡ್ಲಿಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button