ಆರೋಪ ಸಾಬೀತು ಪಡಿಸಿದರೆ, ಶಾಸಕ ಸ್ಥಾನಕ್ಕೆ ಇಂದೇ ರಾಜೀನಾಮೆ ಅಶೋಕ ಮನಗೂಳಿ – ರಮೇಶ ಭೂಶನೂರ ಗೆ ಟಾಂಗ್.
ಸಿಂದಗಿ ಸ.17





ಸಿಂದಗಿ ತಾಲೂಕಿನ ಹಾಲಿ ಶಾಸಕ ಅಶೋಕ ಮನಗೂಳಿ ಸಿಂದಗಿ ಪುರಸಭೆಯಲ್ಲಿ ಸುದ್ದಿ ಗೋಷ್ಠಿ ನಡೆಸಿ ಎ.ಸಿ ಅನುರಾಧ ಇಂಡಿ. ಹಾಗೂ ಹಿರಿಯ ಅಧಿಕಾರಿಗಳ. ಸಾರ್ವಜನಿಕರ. ಮುಂದೆ ಬಹಿರಂಗವಾಗಿ. ಮಾಜಿ ಬಿಜೆಪಿ ಶಾಸಕ ರಮೇಶ ಭೂಸನೂರ. ಅವರಿಗೆ ಮಾಜಿ ಶಾಸಕರು ಮಾಡಿದ ಆರೋಪಕ್ಕೆ ಒಂದು ವೇಳೆ ಭೂಶನೂರ್ ಸಾಬೀತು ಪಡಿಸಿದರೆ. ನಾನು ಇಂದೆ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಸವಾಲು ಹಾಕಿ ಮಾತನಾಡಿದ. ಅವರು ಕೋರ್ಟ್ ಆದೇಶದ ಮೇರೆಗೆ. ತೆರವು ಗೊಳಿಸಿದ. 84 ಕುಟುಂಬಗಳಿಗೆ ನಮ್ಮಿಂದ ಆದಷ್ಟು ಬೇಗನೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವದು ಎಂದು ಅಶ್ವಾಸನೆ ನೀಡಿದರು. ಇದು ಸಿಂದಗಿ ಪುರಸಭೆ ವ್ಯಾಪ್ತಿಯಲ್ಲಿ ನಡೆದಿದ್ದು.
ಮೂಲ ವಿಷಯ ಸಾಕಷ್ಟು ಚರ್ಚೆ ನಡೆಯುತ್ತಿದ್ದು. ಇದು ಹಾಲಿ ಶಾಸಕ ಅಶೋಕ ಮನಗೂಳಿ ಹಾಗೂ ಮಾಜಿ ಬಿಜೆಪಿ ಶಾಸಕ ರಮೇಶ ಭೂಶನೂರ ನಡುವೆ ನಡೆದ ಜಟಾಪಟಿಯ ರಾಜಕೀಯ ಕೆಸರೆರಚಾಟ ಸಮರದ ನಡುವೆ ನೊಂದ ನಿರಾಶ್ರೀತ 84. ಕುಟುಂಬಗಳು ಪರ್ಯಾಯ ವೇವಸ್ಥೆ ಹಾಗೂ ಪರಿಹಾರ ಸಿಗುವುದೇ ಎನ್ನುವ ಕುತೂಹಲ ಮೂಡಿದೆ. ಆದರೆ ಕೋರ್ಟ್ ನ್ಯಾಯಾಲಯದ ಆದೇಶ ಪಾಲನೆ ಮಾಡಿ ಎಂದು ಕೈ ತೊಳೆದು ಕೊಂಡ ಅಧಿಕಾರಿಗಳು ಸರ್ವೇ ನಂಬರ್ 842/2 ರಲ್ಲಿದ್ದ 84 ಕುಟುಂಬಗಳ ಮನೆ ತೆರವು ಗೊಳಿಸಿದ್ದು ಅವರಿಗೆ ಅನುಕೂಲವಾಗುವಂತ ಹೇಳಿಕೆ ನೀಡಿ ಇದು ರಾಜಕೀಯ ವೇದಿಕೆವಲ್ಲ. ಮಾಜಿ ಶಾಸಕ ಬೂಸನೂರ ಮಾಡಿದ ಆರೋಪಗಳನ್ನು ಸಾಬೀತು ಪಡಿಸಿದರೆ ನನ್ನ ಶಾಸಕತ್ವಕ್ಕೆ ರಾಜೇನಾಮೆ ಸಲ್ಲಿಸುವೆ. ಶಾಸಕ ಅಶೋಕ ಮನಗೂಳಿ ಟಾಂಗ್ ನೀಡಿದರು.
ಈ ಸಂದರ್ಭದಲ್ಲಿ ಇಂಡಿ ಎ.ಸಿ ಅನುರಾಧ ವಸ್ತ್ರದ, ತಹಸೀಲ್ದಾರ ಕರೆಪ್ಪ ಬೆಳ್ಳಿ, ಪುರಸಭೆ ಅಧ್ಯಕ್ಷ ಶಾಂತವಿರ ಮನಗೂಳಿ, ಉಪಾಧ್ಯಕ್ಷ ಸಂದೀಪ್ ಚೌರ, ಮುಖ್ಯಾಧಿಕಾರಿ ಎಸ್ ರಾಜಶೇಖರ, ಸಿಪಿಐ ನಾನಗೌಡ ಪೊಲೀಸ್ ಪಾಟೀಲ, ಸೇರಿದಂತೆ ಅನೇಕರಿದ್ದರು. 84 ಕುಟುಂಬಗಳ ಪರಿಸ್ಥಿತಿ ಏನಾಗುವುದೋ ಎಂಬುದನ್ನು ಮುಂದಿನ ನಡೆ ಏನು ಅಂತಾ ಕಾಯ್ದು ನೋಡೋಣ.
ತಾಲೂಕು ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್: ಚಿದಾನಂದ.ಬಿ ಉಪ್ಪಾರ.ಸಿಂದಗಿ