ಸಿದ್ದನಕೊಳ್ಳ ಮಠದ ಶಿವಕುಮಾರ ಸ್ವಾಮೀಜಿ ಅವರ ಕಾರು ಅಪಘಾತ, ಆಸ್ಪತ್ರೆಗೆ ದಾಖಲು..!
ಅಮೀನಗಡ ಮೇ.05

ಅಮೀನಗಡ ಪಟ್ಟಣದ ಬಾಂತಿ ಕೊಳ್ಳದ ಬಳಿ ಸುಕ್ಷೇತ್ರ ಸಿದ್ದನಕೊಳ್ಳ ಮಠದ ಶ್ರೀ ಶಿವುಕುಮಾರ ಸ್ವಾಮೀಜಿಗಳು ಬಾಗಲಕೋಟೆಗೆ ತೆರಳುತ್ತಿರುವಾಗ ಸರಿ ಸುಮಾರು 2=00 ಗಂಟೆಗೆ ಕಾರು ಹಾಗೂ ಟಿಪ್ಪರ್ ಪರಸ್ಪರ ಡಿಕ್ಕಿಯಾದ ಅಪಘಾತ ನಡೆದಿದ್ದು,

ಡಿಕ್ಕಿ ಹೊಡೆದ ರಭಸಕ್ಕೆ ಕಾರು ಪಲ್ಟಿಯಾಗಿದ್ದು, ಕಾರಿನಲ್ಲಿ ಸ್ವಾಮೀಜಿಗಳು ಒಬ್ಬರೇ ಇದ್ದಿದ್ದರಿಂದ ಅವರ ತಲೆಗೆ , ಕೈ ಗೆ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿದ್ದು ಸ್ವಾಮೀಜಿ ಅವರನ್ನು ಕೂಡಲೇ ಬಾಗಲಕೋಟೆ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಪ್ರತ್ಯಕ್ಷದರ್ಶಿಗಳ ಹೇಳಿಕೆಯಾಗಿದೆ.