ಶ್ರೀ ಸಂತ ಸೇವಾಲಾಲರ 286 ನೇ. ಜಯಂತೋತ್ಸವ ಮತ್ತು – ಬಂಜಾರರ ಸಮಾವೇಶ.
ತರೀಕೆರೆ ಮಾ.02

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ 10,500 ಮನೆಗಳಿಗೆ ಇ-ಖಾತಾಗಳಿಲ್ಲ ಅದರಂತೆ ತಾಲ್ಲೂಕಿನ ತಾಂಡಗಳಲ್ಲಿ ವಾಸಿಸುತ್ತಿರುವ ಬಂಜಾರ ಸಮಾಜದವರಿಗೂ ಇ-ಖಾತಾ ಗಳಲ್ಲಿರುವುದನ್ನು ಮನಗಂಡು ತಾಲ್ಲೂಕಿನ ಎಲ್ಲಾ ತಾಂಡಗಳನ್ನು ಕಂದಾಯ ಮತ್ತು ಉಪ ಕಂದಾಯ ಗ್ರಾಮಗಳನ್ನಾಗಿ ಮಾಡಿ ಎಲ್ಲರಿಗೂ 94 (ಸಿ) ಇ-ಖಾತಾ ಮಾಡಿ ಕೊಡಲು ತಾವು ಬದ್ದರಾಗಿದ್ದು, ಈಗಾಗಲೇ ಲಿಂಗದಹಳ್ಳಿ ಹೋಬಳಿಯ ದೊಡ್ಡ ಲಿಂಗದಹಳ್ಳಿ ತಾಂಡವನ್ನು ಕಂದಾಯ ಗ್ರಾಮವನ್ನಾಗಿ ಮಾಡಲಾಗಿದೆ ಎಂದು ಶಾಸಕ ಜಿ.ಹೆಚ್ ಶ್ರೀನಿವಾಸ್, ಹೇಳಿದರು. ತರೀಕೆರೆ ಬಂಜಾರ ಸಮಾಜದವ ವತಿಯಿಂದ ಪಟ್ಟಣದ ಡಾ, ಬಿ.ಆರ್ ಅಂಬೇಡ್ಕರ್ ಭವನದಲ್ಲಿ ನಡೆದ ಬಂಜಾರರ ಧರ್ಮಗುರು ಶ್ರೀ ಸಂತ ಸೇವಾಲಾಲ್ ಮಹಾರಾಜರ 286 ನೇ. ಜಯಂತೋತ್ಸವ ಮತ್ತು ಬಂಜಾರರ ಸಮಾವೇಶ ಪೂಜಾ ಹಾಗೂ ಧರ್ಮ ಜಾಗೃತಿ ಸಭೆ ಮತ್ತು ಬಂಜಾರ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನಾಗೇನಹಳ್ಳಿಯ ದೇವಾಲಯ ಸಮಸ್ಯೆಯನ್ನು ಮುಂದಿನ 2 ತಿಂಗಳ ಒಳಗೆ ಎರಡೂ ಜನಾಂಗದ ಮುಖಂಡರ ಸಭೆ ಕರೆದು ಸೌಹಾರ್ದ ಯುತವಾಗಿ ಬಗೆ ಹರಿಸಲಾಗುವುದು.
ಮತ್ತು ಲಕ್ಕವಳ್ಳಿ ಕ್ರಾಸ್‌ನಲ್ಲಿ ಬಂಜಾರ ಸಮಾಜಕ್ಕೆ ನಿವೇಶನ ನೀಡಿ ಸಂತ ಸೇವಾಲಾಲರ ಸಮುದಾಯ ಭವನ ನಿರ್ಮಾಣಕ್ಕೆ ಅಗತ್ಯ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಹಾಜರಿದ್ದ ಸರ್ದಾರ್ ಸೇವಾಲಾಲ್ ಮಹಾ ಸ್ವಾಮಿಗಳು ಆರ್ಶೀವಚನ ನೀಡಿ ಬಂಜಾರ ಸ್ವಾಮೀಜಿಗಳ ಅಭಿಪ್ರಾಯದಂತೆ ಸಮಾಜ ದವರೆಲ್ಲರೂ ಒಂದಾಗಿ ಸಂಘಟನಾತ್ಮಕ ಹೋರಾಟ ಮಾಡಬೇಕಾಗಿದ್ದು ಶಾಸಕರು ಈ ಸಮಾಜದ ಬಗ್ಗೆ ಮತ್ತು ಈ ಸಮಾಜಕ್ಕೆ ಇತರೆ ಯವರಿಂದ ಆಗಿರುವ ಅನ್ಯಾಯದ ಬಗ್ಗೆ ಖಂಡನೆ ಮಾಡ ಬೇಕಾಗಿದೆ. ಹೇಗೆ ಏಕಲವ್ಯ ಗುರುವಿಲ್ಲದೇ ಗುರು ವಿದ್ಯೆಯನ್ನು ಕಲಿತಿದ್ದರು ಹಾಗೆ ನಮ್ಮ ಸಮಾಜಕ್ಕೆ ಯಾವ ಗುರುಗಳು ವಿದ್ಯೆ ನೀಡಲು ಇಲ್ಲದೇ ಇದ್ದ ಸಂದರ್ಭದಲ್ಲಿ ನಮ್ಮ ಪೂಜ್ಯ ಗುರುಗಳಾದ ಸಂತ ಸೇವಾಲಾಲರು ಮಹಾನ್ ವಿದ್ವಾಂಸಕರಾಗಿ ತಮ್ಮ ನಿಪುಣತೆಯ ಮೂಲಕ ಸಕಲ ಪಾಂಡಿತ್ಯ ಪಡೆದ ವರಾಗಿದ್ದರಿಂದ ಸಮಾಜದ ಏಳಿಗೆಗಾಗಿ ಅವಿರತವಾಗಿ ಶ್ರಮ ಪಟ್ಟವರಾಗಿದ್ದು ಅವರ ಜಯಂತೋತ್ಸವದ ಕಾರಣದಿಂದ ಲಾದರೂ ಬಂಜಾರ ಸಮಾಜ ದವರೆಲ್ಲರೂ ಒಂದೆಡೆ ಸೇರಿ ಸಂತರ ಮಾರ್ಗ ದರ್ಶನದಲ್ಲಿ ಮುನ್ನಡೆಯಬೇಕು ಎಂದರು.
ಈ ಸಂದರ್ಭದಲ್ಲಿ ಬಂಜಾರ ಗುರುಗಳಾದ ಶಿವಪ್ರಕಾಶ್ ಮಹಾ ಸ್ವಾಮೀಜಿ ಸಿದ್ಲಿಪುರದ ಶ್ರೀ ಮಂಜು ಮಹಾರಾಜ್ ಮಹಾ ಸ್ವಾಮೀಜಿ, ಬಂಜಾರ ಸಂಘದ ತಾಲ್ಲೂಕು ಅಧ್ಯಕ್ಷ ಹೆಚ್.ಎಲ್ ಮಂಜುನಾಥ್, ಲೇಖಕ ರುದ್ರಪುನೀತ್, ಮಹಿಳಾ ಅದ್ಯಕ್ಷೆ ವಿಜಯಬಾಯಿ, ಸರಿಗಮಪ ವೇದಿಕೆಯ ರಮೇಶ್ ಲಮಾಣಿ ಮುಂತಾದವರು ಮಾತನಾಡಿದರು. ಇದಕ್ಕೂ ಮೊದಲು ಪಟ್ಟಣದ ಸಾಲುಮರದಮ್ಮ ದೇವಾಲಯದ ಬಳಿಯಿಂದ ಡಾ, ಬಿ.ಆರ್ ಅಂಬೇಡ್ಕರ್ ಭವನದ ವರೆಗೆ ಬಂಜಾರ ಸಮಾಜದ ಗುರುಗಳು ಮತ್ತು ಸಂಘದ ಪದಾಧಿಕಾರಿಗಳು, ಸಮಾಜದ ಎಲ್ಲಾ ಬಾಂಧವರು ಗಳೊಂದಿಗೆ ಅದ್ದೂರಿಯಾಗಿ ಮೆರವಣಿಗೆ ನಡೆಸುವ ಮೂಲಕ ಸಂತ ಸೇವಾಲಾಲರ ಭಾವ ಚಿತ್ರಕ್ಕೆ ನಮನ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ತಾಲ್ಲೂಕು ಬಂಜಾರ ಸಂಘದ ಕಾರ್ಯಾಧ್ಯಕ್ಷರಾದ ಟಿ ಚಂದ್ರನಾಯ್ಕ, ಸಹ ಪ್ರಾಧ್ಯಾಪಕರಾದ ಡಾ, ಹಾಲಸ್ವಾಮಿ ನಾಯ್ಕ್, ಗೌರವ ಅದ್ಯಕ್ಷರಾದ ಯೋಗೇಂದ್ರನಾಯ್ಕ, ರಾಮನಾಯ್ಕ, ಸತ್ಯಪ್ಪ, ಗೋವಿಂದನಾಯ್ಕ, ಗ್ರಾಮ ಪಂಚಾಯಿತಿ ಮಾಜಿ ಉಪಾದ್ಯಕ್ಷರಾದ ಮಲ್ಲೇಶ್ ನಾಯ್ಕ್, ರಮೇಶ್ ನಾಯ್ಕ್, ಚೇತನ್ ನಾಯ್ಕ್, ಮತ್ತು ಸಂಘದ ಪದಾದಿಕಾರಿಗಳು ಬಂಜಾರ ಸಮಾಜದ ಮುಖಂಡರುಗಳು ಗ್ರಾ.ಪಂ ಅಧ್ಯಕ್ಷರುಗಳು ಸದಸ್ಯರುಗಳು, ಅಧಿಕಾರಿ ವರ್ಗದವರು ಮುಂತಾದವರು ಹಾಜರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್.ತರೀಕೆರೆ.ಚಿಕ್ಕಮಗಳೂರು