“ಭೂಮಿಯ ಮೇಲಿನ ಭಗವಂತರು”….. (ಶ್ರೀ ಶಿವಕುಮಾರ ಮಹಾಸ್ವಾಮಿಜಿಗಳು)

ಧರೆಗೆ ನಕ್ಷತ್ರವಾಗಿ ಬಂದೆ ಗುರುವೇ
ಶಿವಣ್ಣನಾಗಿ
ಹೊನ್ನೇಗೌಡ-ಗಂಗಮ್ಮರ ಮುದ್ದಿನ ಕಂದನಾಗಿ
1907 ಏಪ್ರಿಲ್ 1 ರಲ್ಲಿ ಮಹಾ ಚೇತನವಾಗಿ
ಬದಲಾಯಿಸಿದಿರಿ ನಡೆದ ದಾರಿಯನ್ನೇ
ಸ್ವರ್ಗವಾಗಿ
ಕಲಿಯುಗದ ನಡೆದಾಡುವ ನಿಜ ದೇವರಾಗಿ
ಹಗಲಿರುಳೆನ್ನದೆ ಬಡ ಮಕ್ಕಳಿಗಾಗಿ ದುಡಿದ
ಕಾಯಕಯೋಗಿ
ಅನ್ನ,ಜ್ಞಾನ ಹಾಗೂ ಅಕ್ಷರದ ತ್ರಿವಿಧ
ದಾಸೋಹಿಯಾಗಿ
ಆಧ್ಯಾತ್ಮಿಕ ನಾಯಕ ಸಿದ್ದಗಂಗಾ ಮಠದ
ಮಹಾಯೋಗಿ
ರಾಮನಗರದ ಮಾಗಡಿಯ ವೀರಾಪುರದ
ಉಸಿರು
ಬೆಳಗಿಸಿದಿರಿ ನಾಡಿನೆಲ್ಲೆಡೆ ಸಿದ್ದಗಂಗೆಯ ಹೆಸರು
ಪದ್ಮಭೂಷಣ ಪಡೆದ ತುಮಕೂರಿನ ಕಲ್ಪತರು
ಜಾತಿ ಮತ ಪಂಥವ ಮೀರಿ ಬೆಳೆದ
ಕರುನಾಡಿನ ರತ್ನರು
ಲಕ್ಷಾಂತರ ಮಕ್ಕಳಿಗೆ ಅಕ್ಷರವ ಕಲಿಸಿದವರು
ಯಾರೂ ಏರಲಾರದ ಎತ್ತರಕೆ ಏರಿದವರು
ಅಜ್ಞಾನವ ತೊಲಗಿಸಿ ಜ್ಞಾನ ಪಸರಿಸಿದವರು
ಮೌನ ಮಾತಿನಿಂದ ಜಗಕೆ ಜ್ಯೋತಿಯಾದವರು
ದೇವರಂತೆ ಬೆಳಕಾಗಿ ಪೂಜ್ಯರಂತೆ ನೆರಳಾಗಿ
ತಂದೆಯಂತೆ ಆಶ್ರಯವಾಗಿ ತಾಯಿಯಂತೆ
ಕರುಣಾಮಯಿಯಾಗಿ ಬಸವಣ್ಣನಂತೆ ಆದರ್ಶವಾಗಿ
ವಿವೇಕಾನಂದರಂತೆ ಮಾದರಿಯಾಗಿ
ಸಂತನಂತೆ ಮಹಾ ಸಿದ್ದಿಗಾಗಿ ಜ್ಞಾನಿಯಂತೆ
ದಾರಿದೀಪವಾಗಿ
(ಸರ್ವರಿಗೂ ದಾಸೋಹ ದಿನದ ಭಕ್ತಿ ಪೂರ್ವಕ ಶುಭಾಶಯಗಳು)
ಶ್ರೀ ಮುತ್ತು.ಯ.ವಡ್ಡರ
ಬಾಗಲಕೋಟ
ಶ್ರೀ ಮಠದ ಹಳೆಯ ವಿದ್ಯಾರ್ಥಿ
9845568484