ಮಲೇರಿಯಾ ತಾಣವಾದ ನೀರಾವರಿ ಇಲಾಖೆ, ಸಾರ್ವಜನಿಕರ ಆರೋಗ್ಯದ – ಜೊತೆ ಇಲಾಖೆಯು ಚೆಲ್ಲಾಟ.
ರೋಣ ಮಾ.10

ನಗರದ ನೀರಾವರಿ ಇಲಾಖೆಯ ಎಂ.ಆರ್.ಬಿ.ಸಿ ಆವರಣದಲ್ಲಿ ಶ್ರೀನಗರದ ಚರಂಡಿ ನೀರು ಹರಿದು ನೀರಾವರಿ ವಸತಿ ಗೃಹದ ಸುತ್ತಲೂ ಆವರಿಸಿದ್ದು, ಸತತವಾಗಿ ನೀರು ನಿಂತು ಹಳೆಯ ವಸತಿ ಗೃಹಗಳು ಶೀತಲ ಗೊಂಡಿರುತ್ತವೆ. ಅಲ್ಲಿಯ ಕಟ್ಟಡಗಳು ಕುಸಿದು ಬೀಳುವ ಹಂತ ತಲುಪಿವೆ. ಹಾಗೂ ಸಾರ್ವಜನಿಕರಿಗೆ ಅಡ್ಡಾಡಲು ತೊಂದರೆ ಯಾದರು ನೀರಾವರಿ ಇಲಾಖೆಯ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.ಈ ಕುರಿತು ನೀರಾವರಿ ಇಲಾಖೆಯ ಜಗದೀಶ್ ಅವರಿಗೆ ಕರೆ ಮಾಡಿದರೆ ಕರೆಗೆ ಉತ್ತರ ನೀಡಿರುವುದಿಲ್ಲ. ಹಾಗೂ ಇಲಾಖೆಯ ಕಿರಿಯ ಇಂಜಿನಿಯರ್ ಮುತ್ತಣ್ಣ ಮೆಣಸಿನಕಾಯಿ ಇವರಿಗೆ ಕರೆ ಮಾಡಿ ಪತ್ರಕರ್ತರು ಕೇಳಿದರೆ ನಾನು ಈಗ ಬಿ.ಜಿ ಇದ್ದೀನಿ ಆಮೇಲೆ ಮಾತನಾಡುತ್ತೇನೆ ಎಂದು ಹಾರಿಕೆ ಉತ್ತರ ಕೊಟ್ಟು ಕರೆ ಕಟ್ ಮಾಡುತ್ತಿರುವುದು ದೊಡ್ಡ ದುರಂತವಾಗಿದೆ.ಹಳೆಯ ವಸತಿ ಗೃಹಕ್ಕೆ ನುಗ್ಗುತ್ತಿರುವ ಚರಂಡಿ ನೀರು ತಮ್ಮ ಕಚೇರಿಗೆ ಮುಂದೊಂದು ದಿನ ನುಗ್ಗುವುದು ಎಂದು ಪ್ರಜ್ಞೆ ಇಲ್ಲದೆ ನೀರಾವರಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಸಾರ್ವಜನಿಕರಿಗೆ ಮಲೇರಿಯಾ ಹರಡುವ ಸ್ಥಿತಿಯಲ್ಲಿ ನೀರು ನಿಂತರು ಕಣ್ಣು ಮುಚ್ಚಿ ಕೊಳ್ಳುತ್ತಿರುವುದು ಅಕ್ಷರ ಸಹ ಸತ್ಯ.ಶ್ರೀ ನಗರದ ಜನರು ಎಂ.ಆರ್.ಬಿ.ಸಿ ಬೈಪಾಸ್ ರಸ್ತೆಯಲ್ಲಿ ದಿನ ನಿತ್ಯ ಅಡ್ಡಾಡುತ್ತಿದ್ದು ಬೈಕುಗಳಲ್ಲಿ ಹೋಗುವಾಗ ಕೆಸರು ನೀರಿನಲ್ಲಿ ಬಿದ್ದು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗೂ ಸರ್ಕಾರಿ ನೌಕರರು ಶ್ರೀನಗರ ಉತ್ತಮ ಪ್ರದೇಶವಾಗಿದ್ದು ಅಲ್ಲಿ ಎಲ್ಲರೂ ವಾಸವಿರುತ್ತಿದ್ದು. ಚರಂಡಿ ನೀರಿನ ಕೆಸರು ಮುಖಕ್ಕೆ ಸಿಡಿಸಿ ಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.ನೀರಾವರಿ ಅಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರದೆ ಯಾಕೆ ಮೌನವಾಗಿದ್ದಾರೆ ಎಂದು ಸಾರ್ವಜನಿಕರಿಗೆ ಪ್ರಶ್ನೆಯಾಗಿ ಕಾಡುತ್ತಿದೆ? ಪುರಸಭೆ ವ್ಯಾಪ್ತಿಯಲ್ಲಿ ಬರುವ ಈ ಚರಂಡಿ ನೀರು ಅವರಾದರೂ ಇತ್ತ ಕಡೆ ಗಮನ ಹರಿಸಿ ಜನರಿಗೆ ಮಲೇರಿಯಾ ಹರಡುವ ಸ್ಥಿತಿಯನ್ನು ತಪ್ಪಿಸ ಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ.ರೋಣ.ಗದಗ