ಜಲಪುರ ಗ್ರಾಮದಲ್ಲಿ ನಮ್ಮೂರು ನಮ್ಮ ಕೆರೆಯ ಭೂಮಿ ಪೂಜೆ – ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘ ದಿಂದ ಜರುಗಿತು.
ಜಲಪುರ ಜ.21
ಗ್ರಾಮಾಭಿವೃದ್ಧಿ ಯೋಜನೆ ಸಿಂದಗಿ ಯೋಜನಾ ಕಚೇರಿ ವ್ಯಾಪ್ತಿಯ ಕಲ್ಕೇರಿ ವಲಯದ ಬೆಕಿನಾಳ ಗ್ರಾಮ ಪಂಚಾಯಿತಿಯ ಜಲಪುರ ಗ್ರಾಮದಲ್ಲಿ ನಮ್ಮೂರು ನಮ್ಮ ಕೆರೆ ಕಾಮಗಾರಿಯ ಭೂಮಿ ಪೂಜೆ ಕಾರ್ಯಕ್ರಮ ನೆರವೇರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಗ್ರಾಮದ ಶಾಂತು ಸ್ವಾಮೀಜಿ ತೊಪಯ್ಯ ಸ್ವಾಮೀಜಿಯವರಿಂದ ಭೂಮಿ ಪೂಜೆ ಕಾರ್ಯಕ್ರಮ ನೆರವೇರಿಸಿ ಕೆರೆ ಕಾಮಗಾರಿಗೆ ಚಾಲನೆ ನೀಡಲಾಯಿತು. ನಂತರ ಸಭಾ ಕಾರ್ಯಕ್ರಮದಲ್ಲಿ ತಾಲೂಕಿನ ಮಾನ್ಯ ಯೋಜನಾಧಿಕಾರಿಗಳಾದ ಬಿನೋಯ್ ಸರ್ ರವರು ಪ್ರಾಸ್ತಾವಿಕವಾಗಿ ಯೋಜನೆ ಕಾರ್ಯಕ್ರಮಗಳ ಬಗ್ಗೆ ಕೆರೆ ಕಾಮಗಾರಿಯಲ್ಲಿ ಕಮಿಟಿಯ ಗ್ರಾಮಸ್ಥರ ರೈತರ ಸಹಕಾರದಿಂದ ಪೂಜ್ಯರು ನೀಡಿದ ಅನುದಾನದಲ್ಲಿ ರಾಜ್ಯದಲ್ಲಿ ಗುರುತಿಸಿ ಕೊಳ್ಳುವ ಕೆರೆಯಾಗಲಿ ಅಂತ ಶುಭ ಕೋರಿದರು.
ಕೆರೆ ವಿಭಾಗದ ಇಂಜಿನಿಯರ್ ನಿಂಗರಾಜ ಸರ್ ರವರು ಕೆರೆ ಕಾಮಗಾರಿಯಿಂದ ರೈತರಿಗೆ ಆಗುವ ಅನುಕೂಲತೆಗಳ ಬಗ್ಗೆ ಕೆರೆಯನ್ನ ಯಾವ್ ರೀತಿಯಲ್ಲಿ ಕಮಿಟಿ ಸದಸ್ಯರು ಕಾಮಗಾರಿ ಸಂದರ್ಭದಲ್ಲಿ ಏನೆಲ್ಲ ನಿಯಮಗಳನ್ನು ಅನುಸರಿಸಬೇಕೆನ್ನುವ ಬಗ್ಗೆ ಮಾರ್ಗದರ್ಶನ ನೀಡಿದರು. ಈ ಸಭಾ ಕಾರ್ಯಕ್ರಮದಲ್ಲಿ ಕೆರೆ ಕಮಿಟಿಯ ಅಧ್ಯಕ್ಷರಾದ ಸಿದ್ದನಗೌಡ ಬಸನಗೌಡ ಬಿರಾದಾರ್ ರವಿ ಸುಧಾಕರ್ ರಾಮ ರಾವ್ ಕುಲಕರ್ಣಿ ಪರಶುರಾಮ ವಾಲಿಕರ್ ಬಸುರಾಜ್ ಕುಂಬಾರ್ ಮೇಲ್ವಿಚಾರಕರು ಸಿದ್ದಲಿಂಗಪ್ಪ ರೇಣುಕಾ ಸುರೇಶ ಸೇವಾ ಪ್ರತಿನಿಧಿ ನೀಲಮ್ಮ ಗ್ರಾಮದ ಗಣ್ಯರು ರೈತರು ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ