ತುಂಗಾ ನದಿಯಿಂದ ಭದ್ರನದಿಗೆ ಜೋಡಣೆಯ ಮೇಲ್ದಂಡೆ ಕಾಮಗಾರಿ ಪ್ರಗತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸಚಿವರು.
ಚಿತ್ರದುರ್ಗ ಜೂನ್.24

ಜಿಲ್ಲೆಗೆ ನೀರನ್ನು ಒದಗಿಸುವ ಮಹತ್ವಾಕಾಂಕ್ಷೆ ಯೋಜನೆಯ ಭದ್ರಾ ಮೇಲ್ದಂಡೆಗೆ. ಇಂದು ಸಚಿವರಾದ ಶ್ರೀ ಡಿ. ಸುಧಾಕರ್ ಅವರೊಂದಿಗೆ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಎನ್. ವೈ. ಗೋಪಾಲಕೃಷ್ಣರವರು ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಯ ಪ್ರಗತಿಯ ಕುರಿತು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರುಯೋಜನೆಯ ಪ್ರಾರಂಭಿಕ ಸ್ಥಳವಾದ ತುಂಗಾ ನದಿಯಿಂದ ಭದ್ರಾ ನದಿಗೆ ನೀರನ್ನು ಹರಿಸುವ ಪ್ರಾರಂಭ ಹಂತದಲ್ಲಿ ಇರುವ ಕೆಲ ಸಮಸ್ಯೆಗಳನ್ನು ಪರಿಶೀಲಿಸಿ, ಸೂಕ್ತ ಪರಿಹಾರ ಕಲ್ಪಿಸುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು.ಈ ವೇಳೆ ಭದ್ರಾ ವನ್ಯಜೀವಿ ಅಭಯಾರಣ್ಯದಲ್ಲಿ ವನ್ಯಜೀವಿ ರಕ್ಷಣೆಗಾಗಿ ಮಾಡಿರುವ ಕ್ಯಾನೆಲ್ ಕಾಮಗಾರಿಯನ್ನು ವೀಕ್ಷಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಶ್ರೀ ಹೆಚ್.ಆಂಜನೇಯ, ಶಾಸಕರಾದ ಶ್ರೀ ಗೋವಿಂದಪ್ಪ .ಶ್ರೀ ವೀರೇಂದ್ರ ,ಶ್ರೀ ರಾಜೂಗೌಡ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಶ್ರೀ ಚಂದ್ರಪ್ಪ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು. ಎಂದು ವರದಿಯಾಗಿದೆ.
ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮೂರು