ಪ್ಲಾಸ್ಟಿಕ್ ಧ್ವಜ ತಡೆಗೆ ಹಿಂದೂ ಜನ ಜಾಗೃತಿ – ಸಮಿತಿಯಿಂದ ಮನವಿ.
ಮಾನ್ವಿ ಜ.23

ಜನವರಿ 26 ರಂದು ಗಣರಾಜ್ಯೋತ್ಸವ ದಿನ ದಂದು ಪ್ಲಾಸ್ಟಿಕ್ ಧ್ವಜಗಳನ್ನು ಮಾರಾಟ ಮಾಡುತ್ತಿದ್ದ ರಿಂದ ದೇಶಕ್ಕೆ ಅಪಮಾನ ಮಾಡಿದಂತಾಗುತ್ತದೆ. ಹೀಗಾಗಿ ಮಾನ್ವಿ ತಹಸೀಲ್ದಾರ್ ರಾಜು ಫಿರಂಗಿ ಅವರು ಮಾರಾಟ ಮಾಡುವವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ರಾಯಚೂರು ಜಿಲ್ಲೆಯ ಮಾನ್ವಿ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಹಿಂದೂ ಜನಜಾಗೃತಿ ಸಮಿತಿ ಪದಾಧಿಕಾರಿಗಳು 2011 ರಲ್ಲಿ ಪ್ಲಾಸ್ಟಿಕ್ ಧ್ವಜದಿಂದ ಆಗುತ್ತಿರುವ ಅವಮಾನವನ್ನು ತಡೆಯಬೇಕು ಎಂದು ಮುಂಬೈ ಹೈಕೋರ್ಟ್ ಆದೇಶ ನೀಡಿದೆ. ಆದರೂ ಹೈಕೋರ್ಟ್ ಆದೇಶವನ್ನು ಉಲ್ಲಂಘಿಸ ಬಾರದು ಎಂದು ಮಾನ್ವಿ ತಹಸೀಲ್ದಾರ್ ಹತ್ತಿರ ಒತ್ತಾಯಿಸಲಾಗುತ್ತದೆ ಎಂದರು.
ಮಾನ್ವಿಯಲ್ಲಿ ಅನಧಿಕೃತವಾಗಿ ಪ್ಲಾಸ್ಟಿಕ್ ಧ್ವಜ ಮಾರಾಟ ಮಾಡುವವರ ವಿರುದ್ಧ ಕ್ರಮ ಜರುಗಿಸುವ ಜೊತೆಗೆ, ದೇಶದ ಪ್ರತಿಯೊಬ್ಬ ನಾಗರೀಕನು ಖಾದಿಯಲ್ಲಿ ಮುದ್ರಿತವಾದ ರಾಷ್ಟ್ರ ಧ್ವಜವನ್ನೆ ಹಾರಿಸಬೇಕು, ಹಾಗೆಯೇ ಮಾರಾಟ ಮಾಡಬೇಕು ಎಂದು ಸುರೇಶ ನಾಡಗೌಡ ಕೇಳಿಕೊಂಡರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ. ನಕ್ಕುಂದಿ.ಮಾನ್ವಿ