ಅಕ್ಸಿಜನ್ ಕ್ರಾಂತಿಗೆ ವನಸಿರಿ ತಂಡದೊಂದಿಗೆ ಕೈ ಜೋಡಿಸಿದ – ಸುರೇಶ ಬಾಬು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು.

ಸಿಂಧನೂರು ಜ.23

ತಾಲೂಕಿನ ಉನ್ನತಿಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆ R.H ಕಾಲೋನಿ ನಂ 3. ರ ಶಾಲೆಯಲ್ಲಿ ಸಮಾಜಿಕ ಅರಣ್ಯ ಇಲಾಖೆ ಸಿಂಧನೂರು ಮತ್ತು ವನಸಿರಿ ಫೌಂಡೇಶನ್ (ರಿ) ರಾಯಚೂರು ಹಾಗೂ ನಿಸರ್ಗ ಯುಕೋ ಕ್ಲಬ್ ವತಿಯಿಂದ ಸಸಿ ನೆಡುವ ಕಾರ್ಯಕ್ರಮ ಹಾಗೂ ಪರಿಸರ ಜಾಥಾ ಕಾರ್ಯಕ್ರಮ ಹಾಗೂ ಅಕ್ಸಿಜನ್ ಕ್ರಾಂತಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮವನ್ನು ಸುರೇಶ ಬಾಬು ಉಪ ಅರಣ್ಯ ಸಂರಕ್ಷಣಾ ಸಮಾಜಿಕ ಅರಣ್ಯ ವಿಭಾಗ ರಾಯಚೂರು ಅವರು ಸಸಿನೆಟ್ಟು ನೀರುಣಿಸುವ ಮೂಲಕ ಉದ್ಘಾಟಿಸಿ ಅಕ್ಸಿಜನ್ ಕ್ರಾಂತಿ ಯೋಜನೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ವೃಕ್ಷೋ ರಕ್ಷತಿ ರಕ್ಷಿತಃ ಯಾರು ಗಿಡಗಳನ್ನ ರಕ್ಷಣೆ ಮಾಡುತ್ತಾರೋ ಅವರನ್ನ ಗಿಡಗಳು ರಕ್ಷಣೆ ಮಾಡುತ್ತವೆ. ಪರಿಸರವನ್ನು ಉಳಿಸಿ ಬೆಳೆಸುವ ಮೂಲಕ ಪರಿಸರಕ್ಕೆ ನಮ್ಮದೇ ಆದ ಕೊಡುಗೆ ನೀಡೋಣ. ಗಿಡ ಮರಗಳು ಉಸಿರಾಟದ ಮೂಲಕ ಆಮ್ಲಜನಕ ಬಿಡುಗಡೆ ಮಾಡುತ್ತವೆ. ನಾವು ವಾಸಿಸುವ ಭೂಮಿಯ ಮೇಲೆ 33 ರಷ್ಟು ಅರಣ್ಯ ಭೂ ಭಾಗವನ್ನ ಹೊಂದಿರಬೇಕು. ಸದ್ಯ ನಮ್ಮ ರಾಯಚೂರಲ್ಲಿ 5 ರಷ್ಟು ಅರಣ್ಯ ಪ್ರದೇಶವನ್ನು ಹೊಂದಿದ್ದು ಇದನ್ನು ಶೇಕಡ 33 ರಷ್ಟು ಅರಣ್ಯ ಪ್ರದೇಶ ಏರಿಕೆ ಮಾಡವಲ್ಲಿ ಫಣ ತೊಟ್ಟ ವನಸಿರಿ ತಂಡಕ್ಕೆ ನಾವು ನೀವುಗಳೆಲ್ಲರೂ ಸೇರಿ ಕೈಜೋಡಿಸೋಣ. ಮನೆಗೊಂದು ಮರ ಊರಿಗೊಂದು ವನ ಎನ್ನುವಂತೆ ಪ್ರತಿಯೊಬ್ಬರೂ ಹೆಚ್ಚು ಹೆಚ್ಚು ಗಿಡ ಮರಗಳನ್ನ ಬೆಳಸುವ ಮೂಲಕ ರಾಯಚೂರಲ್ಲಿ ಶೇಕಡಾ 33 ರಷ್ಟು ಅರಣ್ಯ ಭೂಮಿಯನ್ನು ನಿರ್ಮಿಸೋಣ, ವನಸಿರಿ ಪೌಂಡೇಷನ್ ಕೂಡಾ ರಾಯಚೂರು ಜಿಲ್ಲೆಯಲ್ಲಿ ಗಿಡ ಮರಗಳನ್ನು ಹೆಚ್ಚು ಹೆಚ್ಚು ಬೆಳಸಿದ್ದಾರೆ.

ಅಕ್ಸಿಜನ್ ಕ್ರಾಂತಿ ಎಂಬ ಯೋಜನೆಯನ್ನು ಹಾಕಿಕೊಂಡು ಗಿಡ ಮರಗಳನ್ನು ಬೆಳಸಲು ಮುಂದಾಗಿದ್ದಾರೆ. ಈ ಅಭಿಯಾನಕ್ಕೆ ನಮ್ಮ ಇಲಾಖೆ ವತಿಯಿಂದ ಸದಾಕಾಲ ಬೆಂಬಲವಾಗಿ ಇರುತ್ತೇವೆ. ಪರಿಸರ ಸಂರಕ್ಷಣೆ ಕಾರ್ಯ ಇನ್ನೂ ಹೆಚ್ಚಿನ ರೀತಿಯಲ್ಲಿ ಸಾಗಲಿ ಎಂದು ಸುರೇಶ ಬಾಬು ಉಪ ಅರಣ್ಯ ಸಂರಕ್ಷಣೆ ಸಮಾಜಿಕ ಅರಣ್ಯ ವಿಭಾಗ ಅಧಿಕಾರಿಗಳು ರಾಯಚೂರು ಅವರು ಹಾರೈಸಿದರು. ಇದೇ ವೇಳೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ನೂರಾರು ವಿದ್ಯಾರ್ಥಿಗಳೊಂದಿಗೆ ಪರಿಸರ ಜಾಥಾ ಹಮ್ಮಿ ಕೊಳ್ಳಲಾಯಿತು. ನಂತರ ವನಸಿರಿ ಪೌಂಡೇಷನ್ ವತಿಯಿಂದ ಶಾಲೆಯಲ್ಲಿ ಹೆಚ್ಚು ಪರಿಸರ ಸೇವೆ ಮಾಡುವ ವಿದ್ಯಾರ್ಥಿಗಳಿಗೆ ಪರಿಸರ ರಕ್ಷಕ ಪ್ರಶಸ್ತಿ ನೀಡಿ ಇನ್ನಷ್ಟು ಪರಿಸರ ಸೇವೆ ಮಾಡಲು ಪ್ರೋತ್ಸಾಹಿಸಲಾಯಿತು.

ಈ ಸಂಧರ್ಭದಲ್ಲಿ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಪೌಂಡೇಷನ್ ರಾಜ್ಯಾಧ್ಯಕ್ಷರಾದ ಅಮರೇಗೌಡ ಮಲ್ಲಾಪುರ, SDMC ಅಧ್ಯಕ್ಷರಾದ ಪ್ರಿಂತೋಷ, HM ಹನುಮಂತರಾಯ ಹಾಗೂ ಶ್ರೀಮತಿ ರೇಖಾ, ವನಸಿರಿ ಸದಸ್ಯರಾದ ಶಂಕರಗೌಡ ಎಲೆಕೊಡ್ಲಿಗಿ, ಅಮರಯ್ಯ ಪತ್ರಿಮಠ, ರಾಜು ಬಳಗಾನೂರು,ಚನ್ನಪ್ಪ ಕೆ ಹೊಸಹಳ್ಳಿ, ಚಂದ್ರು ಪವಾಡಶಟ್ಟಿ, ಮುದುಕಪ್ಪ ಹೊಸಳ್ಳಿ ಕ್ಯಾಂಪ್, ವೆಂಕಟರಡ್ಡಿ ಹೆಡಗಿನಾಳ, ದುರಗೇಶ DSP, ಬದ್ರಿ ತಿಮ್ಮಾಪುರ, ಶಿಕ್ಷಕರಾದ ಭೀಮರಾಯಣ್ಣ, ಶರಣಬಸವ ದಂಡಿನ್, ದೇವರಾಜ, ಶರಣಬಸವ ಅರಳಹಳ್ಳಿ, ಹಂಪನಗೌಡ ಹರಳಹಳ್ಳಿ, ವೀರೇಶ ಸೋಮಲಾಪೂರ ಹಾಗೂ SDMC ಸದಸ್ಯರು, ವಿದ್ಯಾರ್ಥಿಗಳು ಅರಣ್ಯ ಇಲಾಖೆಯ ಸಿಬ್ಬಂದಿಗಳು ಇದ್ದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button