ನಾಗರಿಕ ಸಮಾಜ ತನ್ನ ಮತವನ್ನು ಮತ್ತು ಜವಾಬ್ದಾರಿಯನ್ನು ಮರೆತು ಬಿಟ್ಟಿದೆ – ನ್ಯಾ. ಮೂಲಿಮನಿ.

ಹುನಗುಂದ ಜ.26

ದೇಶದ ಕಾನೂನುಗಳ ಬಗ್ಗೆ ಜನರಲ್ಲಿ ಸಾಮಾನ್ಯ ತಿಳುವಳಿಕೆ ಇದ್ದರೇ, ಇಂತಹ ಕಾರ್ಯಕ್ರಮವನ್ನು ಮಾಡಿ ಜನಜಾಗೃತಿ ಮಾಡುವ ಅವಶ್ಯಕತೆ ಬರುತ್ತಿರಲಿಲ್ಲ, ನಾವು ನಮ್ಮ ಮತವನ್ನು ಮತ್ತು ಜವಾಬ್ದಾರಿಯನ್ನು ಮರೆತು ಬಿಟ್ಟಿದ್ದೇವೆ ಎಂದು ಹೆಚ್ಚುವರಿ ಜಿಲ್ಲಾ ಸತ್ರ ಮತ್ತು ಸಂಚಾರಿ ಪೀಠದ ನ್ಯಾಯಾಧೀಶ ಜಿ.ಎ ಮೂಲಿಮನಿ ಬೇಸರವನ್ನು ವ್ಯಕ್ತಪಡಿಸಿದ್ದರು.ಶನಿವಾರ ಪಟ್ಟಣದ ತಹಶೀಲ್ದಾರ ಕಚೇರಿಯ ಸಭಾ ಭವನದಲ್ಲಿ ತಾಲೂಕ ಆಡಳಿತ, ತಾಲೂಕ ಕಾನೂನು ಸೇವಾ ಸಮಿತಿ, ವಕೀಲರ ಸಂಘದ ಸಹಯೋಗದಲ್ಲಿ ಹಮ್ಮಿ ಕೊಳ್ಳಲಾಗಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಾವ ದೇಶದಲ್ಲಿ ಪ್ರಜ್ಞಾವಂತ ಜನರು ಇರುತ್ತಾರೋ ಅಂತ ದೇಶದ ಕಾನೂನುಗಳ ತಿಳುವಳಿಕೆ ಇರುತ್ತೆ. ಮಾರುಕಟ್ಟೆಯಲ್ಲಿ ವಿವಿಧ ವಸ್ತುಗಳನ್ನು ಖರೀದಿಸುವಾಗ ಚೌಕಾಸಿ ಮಾಡುವಂತಹ ಜನರು ಶಾಸಕ ಮತ್ತು ಚುನಾಯಿತ ಪ್ರತಿನಿಧಿಗಳನ್ನು ಆಯ್ಕೆ ಮಾಡುವಲ್ಲಿ ಯಾಕೆ ಆ ಮಹತ್ವದ ನಿರ್ಧಾರವನ್ನು ತೆಗೆದು ಕೊಳ್ಳುತ್ತಿಲ್ಲ ಎನ್ನುವುದು ಒಂದು ಸಮಸ್ಯೆಯಾಗಿದೆ. ಎಲ್ಲಿವರೆಗೆ ನಮ್ಮ ದೇಶದ ಕಾನೂನಿನ ಜ್ಞಾನ, ನಮ್ಮ ಹಕ್ಕು ಕರ್ತವ್ಯಗಳ ಬಗ್ಗೆ ತಿಳುವಳಿಕೆ ಮೂಡುವುದಿಲ್ಲವೋ ಅಲ್ಲಿವರೆಗೆ ದೇಶದ ಸಮಗ್ರ ಅಭಿವೃದ್ಧಿಗೆ ಕುಂಠಿತವಾಗಲಿದೆ ಎಂದರು.ಉಪನ್ಯಾಸಕಿ ಛಾಯಾ ಪುರಂದರೆ ಉಪನ್ಯಾಸವನ್ನು ನೀಡಿ ಮಾತನಾಡಿ ಭಾರತ ದೇಶ ಬೃಹತ್ ಪ್ರಜಾಸತ್ತಾತ್ಮಕ ರಾಷ್ಟ್ರವಾಗಿದ್ದು, ಚುನಾವಣೆಯೇ ಇದಕ್ಕೆ ಆಧಾರ ಸ್ತಂಭವಾಗಿದ್ದು, ಮತದಾನವೇ ಅತ್ಯಂತ ಪ್ರಮುಖವಾಗಿದೆ. 18 ವರ್ಷ ಪೂರೈಸಿದ ಯುವಕ ಯುವತಿಯರು ಮೊದಲು ಮತದಾನ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿ ಕೊಳ್ಳಬೇಕು, ಅದರ ಜೊತೆಗೆ ಮತಗಟ್ಟೆಗೆ ಬಂದು ಮತದಾನದ ಹಕ್ಕನ್ನು ಚಲಾಯಿಸಬೇಕು. ಮತದಾನದ ಪ್ರಮಾಣ ಹೆಚ್ಚಿದಂತೆ ಉತ್ತಮ ನಾಯಕನನ್ನು ಆಯ್ಕೆ ಮಾಡಲು ಸಾಧ್ಯ. ದೇಶದ ಅಭಿವೃದ್ಧಿಯಾಗಲೂ ಮತದಾನ ಬಹಳಷ್ಟು ಪೂರಕವಾಗಿದೆ ಎಂದರು.ಗ್ರೇಡ್. 2 ತಹಶೀಲ್ದಾರ ಮಹೇಶ್ ಸಂದಿಗವಾಡ ಮಾತನಾಡಿ ಪ್ರತಿ ವರ್ಷ ರಾಜ್ಯ ಚುನಾವಣೆ ಆಯೋಗ ನಾಲ್ಕು ಬಾರಿ ಮತದಾರರ ಪಟ್ಟಿ ಪರಷ್ಕರಣಿ ಮಾಡಲಾಗುತ್ತದೆ. ಈ ಬಾರಿ ರಾಜ್ಯದಲ್ಲೇ ಬಾಗಲಕೋಟೆ ಜಿಲ್ಲೆ ಅಚ್ಚುಕಟ್ಟಾದ ಮತದಾರರ ಪಟ್ಟಿ ಪರಿಷ್ಕರಣೆ ಮಾಡಿದ್ದರಿಂದ ಬಾಗಲಕೋಟೆ ಜಿಲ್ಲಾಧಿಕಾರಿ ಕೆ.ಎಂ ಜಾನಕಿ ಅವರನ್ನು ಚುನಾವಣೆ ಆಯೋಗ ಅತ್ಯುತ್ತಮ ಮತದಾರ ಪರಷ್ಕರಣಿ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ ಎಂದರು.ವೇದಿಕೆಯಲ್ಲಿ ಹಿರಿಯ ದಿವಾಣಿ ನ್ಯಾಯಾಧೀಶ ಹನುಮಂತರಾವ್ ಕುಲಕರ್ಣಿ, ಅಪರ ದಿವಾಣಿ ನ್ಯಾಯಾಧೀಶ ಬಸವರಾಜ ನೇಸರ್ಗಿ, ವಕೀಲರ ಸಂಘದ ಅಧ್ಯಕ್ಷ ಪ್ರಕಾಶ್ ಕಠಾಣಿ, ಸರ್ಕಾರಿ ಅಭಿಯೋಜಕ ಸುನಿಲಕುಮಾರ ಹುಣಸಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಪ್ರಾಚಾರ್ಯ ಸಿಕಂದರ್ ಬದಾಮಿ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಶರಣಪ್ಪ ಹೂಲಗೇರಿ, ಸಿಡಿಪಿಓ ವೆಂಕಟೇಶ ಗಿರಿತಮ್ಮನವರ, ಸೇರಿದಂತೆ ಅನೇಕರು ಇದ್ದರು. ಎನ್.ವಾಯ್ ನದಾಫ್ ಸ್ವಾಗತಿಸಿ ನಿರೂಪಿಸಿದರು, ಎ.ಎಚ್ ನಾಯಕ ವಂದಿಸಿದರು.

ಬಾಕ್ಸ್ ಸುದ್ದಿ:-ಮತದಾರರು ರಾಷ್ಟ್ರಪತಿ ಮತ್ತು ಪ್ರಧಾನಿಗಿಂತಲೂ ಶ್ರೇಷ್ಠ,

ದೇಶದ ಸಮಗ್ರ ಅಭಿವೃದ್ಧಿ ಮತ್ತು ವ್ಯಕ್ತಿ ತನ್ನ ಹಕ್ಕು ಸೌಲಭ್ಯವನ್ನು ಪಡೆದು ಕೊಳ್ಳಬೇಕಾದರೆ ಮೊದಲು ತನ್ನ ನೈತಿಕ ಹೊಣೆಗಾರಿಕೆ ಮತ್ತು ಜವಾಬ್ದಾರಿಯನ್ನು ಪೂರೈಸ ಬೇಕಾಗುತ್ತದೆ. ಒಂದು ದೇಶದ ಪ್ರಗತಿ ಆ ದೇಶದ ಮತದಾನದ ಮೇಲೆ ನಿಂತಿದೆ. ಮತದಾರರು ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗಿಂತಲೂ ಸರ್ವ ಶ್ರೇಷ್ಠರು. ನೀವು ಒಳ್ಳೆಯ ಚುನಾಯಿತ ಪ್ರತಿನಿಧಿಯನ್ನು ಆಯ್ಕೆ ಮಾಡಿದಾಗ ಮಾತ್ರ ನಿಮ್ಮ ಹಕ್ಕು ಸೌಲಭ್ಯ ಸಿಗಲು ಸಾಧ್ಯ ಮತ್ತು ದೇಶದ ಅಭಿವೃದ್ಧಿಗೆ ಪೂರಕವಾಗಲಿದೆ. ಜಿ.ಎ ಮೂಲಿಮನಿ.

ನ್ಯಾಯಾಧೀಶರು. ಹೆಚ್ಚುವರಿ ಜಿಲ್ಲಾ ಸತ್ರ ಮತ್ತು ಸಂಚಾರಿ ಪೀಠ ಹುನಗುಂದ.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಲ್ಲಿಕಾರ್ಜುನ.ಬಿ. ಬಂಡರಗಲ್ಲ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button