ಮಾರ್ಕಬ್ಬಿನಹಳ್ಳಿಯಲ್ಲಿ ಮಾದಿಗ ಯುವಕ ಸಂಘದಿಂದ – ಗಣರಾಜ್ಯೋತ್ಸವ ಆಚರಣೆ.
ಮಾರ್ಕಬ್ಬಿನಹಳ್ಳಿ ಜ.26

ದೇವರ ಹಿಪ್ಪರಗಿ ತಾಲೂಕಿನ ಮಾರ್ಕಬ್ಬಿನಹಳ್ಳಿ ಗ್ರಾಮದ ಮಾದಿಗ ಸಮುದಾಯ ಕೇಂದ್ರದ ಆವರಣದಲ್ಲಿ ಮಾದಿಗ ಯುವಕ ಸಂಘದಿಂದ 76 ನೇ. ಗಣರಾಜ್ಯೋತ್ಸವ ಆಚರಣೆ ಕಾರ್ಯಕ್ರಮ ನಡೆಯಿತು.ಪ್ರೌಢ ಶಾಲೆ ಮುಖ್ಯ ಶಿಕ್ಷಕಿಯಾದ ಶ್ರೀ ಉಮಾದೇವಿ ರವರು ಧ್ವಜಾರೋಹಣ ನೆರವೇರಿಸಿದರು. ಬಳಿಕ ರಾಷ್ಟಗೀತೆ ಹಾಡಲಾಯಿತು. ಶೋಷಿತರು, ಬಡವರು ದೇಶದ ಧ್ವನಿ ರಹಿತರೆಲ್ಲ ಇಷ್ಟೊಂದು ಧೈರ್ಯದಿಂದ ಈ ದೇಶದಲ್ಲಿ ಜೀವಿಸಲು ಕಾರಣವೇ ಡಾ, ಭೀಮರಾವ ಅಂಬೇಡ್ಕರ್. ಪ್ರಣೀತ ಸಂವಿಧಾನ 1947 ರಲ್ಲಿ ಸ್ವಾತಂತ್ರ ಲಭಿಸಿದ ನಂತರ ಅಂಬೇಡ್ಕರ್ ರವರ ಅಧ್ಯಕ್ಷತೆಯಲ್ಲಿ ರಚಿಸಿದ ಸಂವಿಧಾನ ಎಲ್ಲಾ ಜನಾಂಗದ ಜನರಿಗೆ ನ್ಯಾಯ ದೊರಕಿಸಿದ್ದಾರೆ. ಭಾರತ ಸಂವಿಧಾನ ಅಸ್ತಿತ್ವಕ್ಕೆ ಬಂದ ದಿನವನ್ನು ಗಣರಾಜ್ಯೋತ್ಸವ ಎಂದು ಆಚರಿಸಲಾಗುತ್ತಿದೆ. ಪ್ರತಿವರ್ಷ ಜನವರಿ 26 ರಂದು ಗಣರಾಜ್ಯೋತ್ಸವ ಆಚರಿಸುತ್ತೇವೆ. ಈ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಊರಿನ ಗ್ರಾಮಸ್ಥರು, ಮಹಿಳೆಯರು, ಉಪಸ್ಥಿತರಿದ್ದರು.