ಮುದ್ದು ಕಣ್ಮಣಿ

ಶಾಲೆಯಲಿರಬೇಕಾದವಳು ರಸ್ತೆಯಲಿ ನಿಂತಿಹಳು
ಚೋಟುತ್ತವಿದ್ದರೂ ಎತ್ತರದ ಮಲ್ಲಿಗೆ ಹಿಡಿದವಳು
ವ್ಯಾಪಾರಕ್ಕಲ್ಲದೆ ನೆಮ್ಮದಿಗೆ ಹೂವು ಮಾರುವವಳು
ಎಲ್ಲರಂತಲ್ಲ ಇವಳು ಮನೆಯ ಜವಾಬ್ದಾರಿ ಹೊತ್ತವಳು…
ಉಜ್ವಲ ಕನಸಿಗೆ ಕತ್ತರಿ ಹಾಕಿ
ಮನದ ಆಸೆಗಳೆಲ್ಲವನ್ನ ದೂರ ನೂಕಿ
ಬೆವರಹರಿಸಿ ಬಿಸಿಲಿಗೆ ಹೆದರದೆ ನಿಂತಾಕಿ
ಕಡು ಬಡತನದಲ್ಲಿ ಹುಟ್ಟಿ ಊರಿಗೆ ಮನೆ ಮಾತಾದಾಕಿ…
ದೇವರ ಸ್ವರೂಪಿ ನಡು ರಸ್ತೆಯಲಿ
ಉಜ್ವಲ ಕನಸು ಮಂದಹಾಸದಲಿ
ಲಂಗ ದವಣಿಯಲಿ ಹಸಿರು ಬಳೆಯಲಿ
ದೇವತೆ ನೀನು ಮೌನ ಮುಖದಲಿ….
ಸಿಂಧೂರ ತಿಲಕ ಚಂದದ ಮುಖಕ
ಅರಳಿದ ಹೂವು ದೇವರ ಪಾದಕ
ದೇವತೆಗಳು ನಾಚುತಿರೆ ನಿನ್ನ ನೋಟಕ
ಒಮ್ಮೆ ನಕ್ಕು ಬಿಡು ಕುಮಾರಿ ಈ ಕ್ಷಣಕ…..
ಜೋಗದ ಜಲಪಾತ ಆ ನಿನ್ನ ಹೂ ಜಡೆ
ಬೇಕಾಗಿದೆ ನಿನಗೆ ನೆರಳಲು ಕೊಡೆ
ಮುಖದ ಮೇಲಿನ ಗಂಟು ಸ್ವಲ್ಪ ಬಿಡೆ
ಭಾರತೀಯ ಸಂಸ್ಕೃತಿಯಂತೆ ಸದಾ ಹೀಗೇ ನಡೆ….
ರಚನೆ:ಮುತ್ತು.ಯ.ವಡ್ಡರ ಬಾಗಲಕೋಟ