“ಪರಿಪೂರ್ಣ ವ್ಯಕ್ತಿತ್ವ ಶಬ್ಧಮಾಡುವ ಘಟ”…..
ಜನಸಿದಾಕ್ಷಣ ಆರಂಭ ಆಟ
ಇನ್ನೊಬ್ಬರಿಗೆ ಆಗದಿರಲಿ ಕಾಟ
ಒಳಿತು ಕೆಡಕುಗಳ ಅನುಭವದ ಪಾಠ
ಪ್ರಸ್ತುತ ಮುಂದಿನ ಜನಾಂಗದ ಪರಿಪಾಠ
ಹೃದಯದ ಮೈದಾನದಲಿ
ಕಲ್ಮಷ ರಹಿತವಾಗಿರಲಿ ನೋಟ
ಅಂತರಂಗ ಬಹಿರಂಗದಲ್ಲೂ ಇರಲಿ ಮಾಟ
ಸೃಷ್ಠಿಕರ್ತನೇ ಬೆರಗು ಮಾನವನೇ ಉತ್ತಮ
ನಟ
ವಿದ್ಯ ಜ್ಞಾನ ಅನುಭವ ನಮ್ಮತನದ ಹಠ
ವಿಶ್ವವೇ ಸುತ್ತಿಬಂದರೂ ಮತ್ತೇ
ನಿಲ್ಲುವುದು ಬವಸಾಗರದಿ ತಟ
ಶ್ರಮದ ಫಲ ಅನುಭವ ನೋಡುಗರಿಗೆ
ಆಕಾಶದ ಗಾಳಿ ಪಟ
ಪರಿಪೂರ್ಣ ವ್ಯಕ್ತಿತ್ವ ಶಬ್ಧಮಾಡುವ ಘಟ
ಸಾಮಾನ್ಯ ಮಾನ್ಯರರಾದರೇನು
ನರಕ ಕೂಪದಿ ತಳ್ಳುವುದು ಚಟ
ದುಶ್ಚಟಗಳಿಂದ ಬಚಾವ್ ಆದವನೇ
ಮಹಾಶೂರ.
-ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
ಬಾಗಲಕೋಟ.