“ಅಖಿಲ ಕರ್ನಾಟಕ ಶಿಕ್ಷಕರ 7 ನೇ. ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಪರಿಚಯ ಶಿಕ್ಷಕ, ಮಕ್ಕಳ ಸಾಹಿತಿ, ಜಾನಪದ ಪೋಷಕ ಪಂಡಿತ.ಭಿ ಅವಜಿ”…..
ಬರುವ ಫೆಬ್ರುವರಿ ತಿಂಗಳ 9 ನೇ. ತಾರಿಖೀನಂದು ಬೆಂಗಳೂರಿನ ಕನ್ನಡ ಸಾಹಿತ್ಯ ಭವನದಲ್ಲಿ ನಡೆಯಲಿರುವ ಅಖಿಲ ಕರ್ನಾಟಕ ಶಿಕ್ಷಕರ 7 ನೇ. ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ನಾದ ಬಿ.ಕೆ ಗ್ರಾಮದ ಶಿಕ್ಷಕ, ಮಕ್ಕಳ ಸಾಹಿತಿ, ಜಾನಪದ ಪೋಷಕ ಪಂಡಿತ.ಭಿ ಅವಜಿ ಕುರಿತ ಲೇಖನ ಇಲ್ಲಿದೆ.ಬಾಲ್ಯ ಮತ್ತು ಶಿಕ್ಷಣ ಇವರು 1973 ರ ಜೂನ 1 ರಂದು ರಂಗಭೂಮಿ ಕಲಾವಿದ, ನಾಟಕಕಾರರಾದ ಭೀಮರಾವ ಗಡ್ಡೆಪ್ಪ ಅವಜಿ ಹಾಗೂ ಪುತಳಿಬಾಯಿ ಇವರ ಉದರದಲ್ಲಿ ಎರಡನೇ ಮಗನಾಗಿ ಜನಿಸಿದರು. ತಮ್ಮ ಶಿಕ್ಷಣವನ್ನು ಇಂಡಿ ತಾಲೂಕಿನಲ್ಲಿಯೇ ಪೂರೈಸಿ ಸನ್ 1989 ರಲ್ಲಿ 10 ನೇ ತರಗತಿ, 1991 ರಲ್ಲಿ ಪಿಯುಸಿ ಮುಗಿಸಿ, 1996 ರಲ್ಲಿ ಪದವಿ, 2000 ರಲ್ಲಿ ಸ್ನಾತಕ ಪದವಿ ಪಡೆದು ಈಗ ಇಂಡಿ ತಾಲೂಕಿನ ಅರ್ಜುಣಗಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. 1993 ರಲ್ಲಿ ಟಿ.ಸಿ.ಎಚ್ ನ್ನು ಪೂರೈಸಿ 1997 ರಲ್ಲಿ ಮಳಖೇಡದಲ್ಲಿ ತಮ್ಮ ಶಿಕ್ಷಕ ವೃತ್ತಿ ಜೀವನ ಪ್ರಾರಂಬಿಸಿದರು. 29 ವರ್ಷಗಳ ಶಿಕ್ಷಕ ಸೇವೆಯ ಜೊತೆಗೆ ಅನೇಕ ಪ್ರಶಸ್ತಿ-ಪುರಷ್ಕಾರಗಳಿಗೂ ಭಾಜನರಾಗಿದ್ದಾರೆ. 2012 ರಲ್ಲಿ ಜಿಲ್ಲಾ ಮಟ್ಟದ ಅತ್ತುತ್ತಮ ಶಿಕ್ಷಕ ಪ್ರಶಸ್ತಿ, ರಾಜ್ಯ ಮಟ್ಟದ ಪರಿಸರ ಮಿತ್ರ ಶಾಲೆ ಪ್ರಶಸ್ತಿಗೂ ಭಾಜನ ರಾಗಿರುತ್ತಾರೆ. ಆರೂಡ ಪುರಷ್ಕಾರ, ಶಿಕ್ಷಕ ರತ್ನ, ಕನ್ನಡ ರತ್ನ, ಗುರುಶ್ರೀ, ಸಾಹಿತ್ಯ ಬ್ರಹ್ಮ, ಆದರ್ಶ ಶಿಕ್ಷಕ, ಪುನಿತ ಅವಾರ್ಡ, ಬಸವರಾಜ ಕಟ್ಟಿಮನಿ ಸಾಹಿತ್ಯ ಪ್ರಶಸ್ತಿ, ಮಾತೃಭೂಮಿ ರಾಜ್ಯ ಮಟ್ಟದ ಹಲವಾರು ಪ್ರಶಸ್ತಿಗಳು ಲಭಿಸಿವೆ. ಶಿಕ್ಷಕ ಪಂಡಿತ.ಭೀ ಅವಜಿ ಅವರ ಕೊಡುಗೆಗಳು:- ಸಾಮಾಜಿಕ ಧಾರ್ಮಿಕವಾಗಿ ತೇರು ನಿರ್ಮಾಣ, ದೇವಾಸ್ಥಾನ ಜೀರ್ಣೋದ್ದಾರ, ಪುರಾಣ- ಪ್ರವಚನ ಸೇವೆ ಸಲ್ಲಿಸಿ ಎಲ್ಲಾ ಮಠ ಮಾನ್ಯಗಳೊಂದಿಗೆ ನಿಕಟ ಸಂಬಂಧ ಹೊಂದಿದ್ದು, ಬಿದರನ ಆರೂಡ ಚಿದಂಬರಾ ಶ್ರಮದ ಪ.ಪೂ ಶ್ರೀ ಶಿವಕುಮಾರ ಸ್ವಾಮಿಗಳಿಂದ ದೀಕ್ಷೆ ಪಡೆದು ಧಾರ್ಮಿಕವಾಗಿ ಪುರಾಣ ಪ್ರವಚನಕಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜಾನಪದ ಕ್ಷೇತ್ರದಲ್ಲಿ 2013 ರಲ್ಲಿಯೇ ರಾಂಪುರಿನ ಆರೂಡ ಮಠದಲ್ಲಿ ಸಿಂದಗಿ ತಾಲೂಕಾ ಪ್ರಥಮ ಜಾನಪದ ಸಮ್ಮೇಳನ ಆಯೋಜಿಸಿ ಅನೇಕ ಕಲಾವಿದರಿಗೆ ಆಶ್ರಯವಾಗಿ “ಸಿಂದಗಿ ಜಾನಪದ ಸಿರಿ” ಅನ್ನುವ ಜಾನಪದ ಸ್ಮರಣ ಸಂಚಿಕೆಯನ್ನು ಹೊರ ತಂದಿರುತ್ತಾರೆ. ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಿದ ಶಿಕ್ಷಕ ಪಂಡಿತ.ಭೀ ಅವಜಿ ಅವರು ಮಕ್ಕಳಿಗಾಗಿ 18 ಮಕ್ಕಳ ಸಾಹಿತ್ಯಿಕ ಕೃತಿಗಳನ್ನು ಬರೆದಿದದ್ದಾರೆ. ಅವುಗಳನ್ನು ಐದು ಈಗಾಗಲೇ ಮುದ್ರಣ ಕಂಡಿವೆ. ಅವರು ಬರೆದು 18 ಮಕ್ಕಳ ನಾಟಕಗಳ ಪೈಕಿ 4 ನಾಟಕಗಳನ್ನು ಮುದ್ರಿಸಿ ಹೊರ ತಂದಿದ್ದಾರೆ. ಅವರ 2 ನಾಟಕಗಳು ರಾಜ್ಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪ್ರದರ್ಶನ ಗೊಂಡಿವೆ. ಅವಗಳಲ್ಲಿ ವೈರಾಗ್ಯನಿಧಿ ಅಕ್ಕಮಹಾದೇವಿ, ಮಹಾತ್ಮ ಮೋಳಗೆಯ ಮಾರಯ್ಯಾ, ಆತ್ಮವಾನ ಅಮುಗೆಯ ಅಯ್ಯ, ಬಸವಣ್ಣನ ಭಕ್ತಿ, ಅಕ್ಷರ ನಿಧಿ, ರಾಷ್ಟ್ರ ಧ್ವಜದಲ್ಲಿ ರಕ್ತಪಾತ, ಸಿದ್ಧಾರೂಡರ ಮಹಾತ್ಮೆ, ನಮ್ಮೂರ ಲಕ್ಷ್ಮಿ ಮಹಾತ್ಮೆಗಳು ಪ್ರಮುಖವಾಗಿವೆ. ಮಕ್ಕಳ ನಾಟಕಗಳಲ್ಲದೇ ಮಕ್ಕಳಿಗಾಗಿಯೇ ಕವನ ಸಂಕಲನಗಳನ್ನು ಹೊರ ತಂದಿದ್ದಾರೆ. ಪುಟ್ಟ ಪುಟ್ಟ ಹೆಜ್ಜೆ, ಅಮ್ಮ, ಬೆಳಗು ಚಿಂತನೆಗಳು ಎಂಬ ಮಕ್ಕಳಿಗಾಗಿ ನೀತಿ ಪಾಠ ಆಧರಿತ ಕೃತಿಗಳನ್ನು ಮುದ್ರಿಸಿದ್ದಾರೆ. ಇಷ್ಟಲ್ಲದೇ ಕವಿಗಳಾಗಿ ರಾಜ್ಯ, ಜಿಲ್ಲಾ, ತಾಲೂಕ ಮಟ್ಟದ ಕವಿ ಗೋಷ್ಠಿಯಲ್ಲಿ ತಮ್ಮ ಕವಿತೆಗಳನ್ನು ವಾಚಿಸಿದ್ದಾರೆ. ಜೊತೆಗೆ ದತ್ತಿ ಉಪನ್ಯಾಸಕರಾಗಿ, ಅಧ್ಯಾತ್ಮೀಕ ಪ್ರವಚನಕಾರರಾಗಿ, ಮುಖ್ಯ ಭಾಷಣಕಾರರಾಗಿ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಶಿಕ್ಷಕ ವೃತ್ತಿಯ ಜೊತೆಗೆ ವಿಜಯಪುರ ಜಿಲ್ಲೆಯ ಒಬ್ಬ ನಾಟಕಕಾರರಾಗಿ, ರಂಗಭೂಮಿ ಕಲಾವಿದರಾಗಿ, ದೊಡ್ಡಾಟಗಳಲ್ಲಿ ಧರ್ಮರಾಜ, ಕೃಷ್ಣ, ವಿಧುರ, ನಾರದ, ಗಣಪತಿ ವಿವಿಧ ಪಾತ್ರಗಳಲ್ಲಿ ಅಭಿನಯಿಸಿ, ರತ್ನ ಮಾಂಗಲ್ಯ, ಗರುಡ ರಾಜ್ಯದಲ್ಲಿ ಘಟಸರ್ಪ ಸಾಮಾಜಿಕ ನಾಟಕಗಳಲ್ಲಿ ನಾಯಕ ನಟರಾಗಿ ಸೇವೆ ಸಲ್ಲಿಸಿದ ಶ್ರೇಯಸ್ಸು ಶಿಕ್ಷಕ ಪಂಡಿತ.ಭೀ ಅವಜಿ ಅವರಿಗೆ ಸಲ್ಲುತ್ತದೆ. ಇವರ ಬಗ್ಗೆ ಎಷ್ಟು ಬರೆದರೂ ಕಡಿಮೆಯೇ ಅಂತಹ ಬಹು ವ್ಯಕ್ತಿತ್ವವನ್ನು ಹೊಂದಿರುತ್ತಾರೆ.
ಲೇಖನ:- ಶ್ರೀ ಪ್ರಕಾಶ ಜಗದೀಶ ಮಾಡ್ಯಾಳ ಸಾ, ಆಲಮೇಲ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶಿವಾನಂದ.ಬಿ.ಹರಿಜನ.ಇಂಡಿ.ವಿಜಯಪುರ