“ಕನ್ನಡ ಕೌಸ್ತುಭದಲ್ಲಿ ಕನ್ನಡ ಕಲರವ” ಕನ್ನಡಿಗರಾಗಿ ಕನ್ನಡ ಮರೆತರೆ : ರಾಜನ ಪಾತ್ರದವ ಮೀಸೆ ಮರೆತು, ಭಿಕ್ಷಕ ಪಾತ್ರದವ ಮೀಸೆ ತಿರುಚಿದಷ್ಟೇ ಅಭಾಸ! – ಕವಯಿತ್ರಿ ಡಿ.ಶಬ್ರಿನಾ ಮಹಮದ್ ಅಲಿ ಅಭಿಮತ.
ಚಳ್ಳಕೆರೆ ನ.03

ನಗರದ ಹೆಚ್.ಎಂ.ಎಸ್ ಲೇಔಟನಲ್ಲಿರುವ ‘ಕನ್ನಡ ಕೌಸ್ತುಭ’ನಿಲಯದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ವತಿಯಿಂದ ‘ಕನ್ನಡ ಕಲರವ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳಾಡಿದ ಲೇಖಕಿ ಡಿ.ಶಬ್ರಿನಾ ಮಹಮದ್ ಅಲಿಯವರು ಕನ್ನಡ ನಮ್ಮೆಲ್ಲರ ಹೃದಯದ ಭಾಷೆ, ಡಿವಿಜಿಯವರ ಮಂಕುತಿಮ್ಮನ ಕಗ್ಗದಲ್ಲಿ ದೊರೆಯ ವೇಷವ ಧರಿಸಿ ಮರೆಯುವಾ ಮೀಸೆಯ, ತಿರುಕ ಹಾರುವನಾಗಿ ತಿರುಚುವೆಯಾ ಮೀಸೆಯ, ಇರುವುದು ಅವನಿಗೆ ಅವನವನ ತಾಣದ ಧರ್ಮ ಅರಿವೆ ಋತುಮತಿ ಗತಿಯಂತೆ ಮಂಕುತಿಮ್ಮ’ ಎಂದು ಹೇಳುತ್ತಾರೆ.

ಕನ್ನಡಿಗರಾಗಿ ನಾವು ಕನ್ನಡವನ್ನು ಮರೆಯ ಬಾರದು ಒಂದು ವೇಳೆ ಮರೆತರೆ ಅದು ಹೇಗಿರುತ್ತದೆಂದರೆ ರಾಜನ ಪಾತ್ರ ಮಾಡುವವ ಮೀಸೆಯನ್ನು ಮರೆತರೆ, ಭಿಕ್ಷಕ ಪಾತ್ರದವ ಮೀಸೆಯನ್ನ ತಿರುವಿದರೆ ಎಷ್ಟು ಅಭಾಸವಾಗುತ್ತದೋ ಕನ್ನಡಿಗರಾಗಿ ಕನ್ನಡ ಮರೆತರೆ ಅಷ್ಟೇ ಅಭಾಸವಾಗಿರುತ್ತದೆ. ಕನ್ನಡ ನೆಲದಲ್ಲಿ ಹುಟ್ಟಿದ ನಾವೆಲ್ಲರೂ ಕನ್ನಡವನ್ನು ಬಳಸುವ ಮೂಲಕ ಉಳಿಸಿ ಕೊಂಡು ಹೋಗಬೇಕು ಎಂದು ಹೇಳಿದರು. ಕನ್ನಡ ನಾಡು ನುಡಿಯ ಸೊಬಗನ್ನ ಸಾರುವ ಕನ್ನಡ ಗೀತೆಗಳ ಗಾಯನವನ್ನು ಮಹಮದ್ ಅಲಿ ಎಂ.ಐ ಹಾಲೇಶ್. ಕೆ.ಜಿ ವಿಜಯಲಕ್ಷ್ಮೀ, ಜಿ.ಪ್ರಕಾಶ್, ಕೆ,ಪಗಡಲಬಂಡೆ ನಾಗೇಂದ್ರಪ್ಪ, ಯತೀಶ ಎಂ.ಸಿದ್ದಾಪುರ, ವಿಜಯಕಲಾ, ಪುಟಾಣಿಗಳಾದ ಇನ್ಷಾ ಎಂ.ಎಸ್, ಶಿಫಾ ಎಂ.ಎಸ್, ವಿಹಾನ್ ಅಲಿ, ಎಂ.ಎಸ್, ತೇಜ್ಮಿನ್.ಡಿ ಸಮಂತ್, ಪ್ರಭಾಸ್ & ಜೀವನ್ ನಡೆಸಿ ಕೊಟ್ಟರು.

ಕವಿತಾ ವಾಚನವನ್ನು ಚಿತ್ರದುರ್ಗದ ಕೆ.ಹೆಚ್ ಜಯಪ್ರಕಾಶ್, ಮನುಶ್ರೀ ಸಿದ್ದಾಪುರ, ಎನ್.ಆರ್ ತಿಪ್ಪೇಸ್ವಾಮಿ, ಜಯಮಾರುತಿ ಟಿ.ಹೆಚ್, ಯುವ ಕವಿಗಳಾದ ಕೆಂಚರಾಜ್.ಡಿ, ನಿಸರ್ಗ ಗೋವಿಂದರಾಜು, ಚನ್ನಕೇಶವ.ಎ, ಶಿವಲೀಲಾ, ಆಶಾಬಿ.ದಾದಾಪೀರ್, ಕವಿತಾ.ಬಿ, ದ್ಯಾಮಕ್ಕ, ತಿಪ್ಪೇರುದ್ರಪ್ಪ, ಅರುಣ್ ಕುಮಾರ್ ಮತ್ತಿತರರು ನಡೆಸಿ ಕೊಟ್ಟರು. ಕನ್ನಡದ ಕಂಪು ಪಸರಿಸುವ ಕಾರ್ಯಕ್ರಮ ಇದಾಗಿತ್ತು ಎಂದು ಭಾಗವಹಿಸಿದವರೆಲ್ಲಾ ಅತ್ಯಂತ ಸಂತಸ ಪಟ್ಟರು, ಎಲ್ಲರ ಸಹಕಾರ ದೊಂದಿಗೆ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.
ವರದಿ : ಶಿವಮೂರ್ತಿ. ಟಿ ಕೋಡಿಹಳ್ಳಿ
ವಿಶೇಷ ಪತ್ರಿಕಾ ಪ್ರತಿನಿಧಿ, ಚಿತ್ರದುರ್ಗ