ಯೋಗ ಸತ್ಸಂಗಗಳಿಂದ ದುರ್ಗಾ ಮಾತೆಯ ಪೂಜೆ ಮತ್ತು ಆರಾಧನೆ.
ಹುನಗುಂದ ಅಕ್ಟೋಬರ್.22





ಪಟ್ಟಣದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ಸಹಜ ಸ್ಥಿತಿ ಯೋಗ ಕೇಂದ್ರದ ಸತ್ಸಂಗಗಳಿಂದ ದುರ್ಗಾ ಮಾತೆಯನ್ನು ಪೂಜೆಯನ್ನು ನಡೆಸಿದರು.ರವಿವಾರ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಏಕಾಗ್ರತೆಯಿಂದ ಧ್ಯಾನ,ಪ್ರಾಣಾಯಾಮ ಮತ್ತು ದೇವಿಯನ್ನು ಕುರಿತು ಶುದ್ಧ ಭಕ್ತಿ ಭಾವದಿಂದ ಮಾಡಿದರು.ನಿರಂತರ ೯ ದಿನಗಳ ಕಾಲ ದೇವಿಯ ಆರಾಧನೆ ನಡೆಸುವುದು ಇದು ಪ್ರತಿ ವರ್ಷ ಇಲ್ಲಿ ನಡಿಯುತ್ತಾ ಇರುತ್ತದೆ.ನವರಾತ್ರಿ ಕೊನೆಯ ದಿವಸ ದುರ್ಗಾ ಪರಮೇಶ್ವರಿಯ ರೂಪದಲ್ಲಿದ್ದ ಮುತ್ತೈದೆಯರಿಗೆ ಉಡಿ ತಂಬಿ ದೇವಿಯ ಆಶೀರ್ವಾದ ಪಡೆಯುತ್ತಾರೆ.ಈ ಸಂದರ್ಭದಲ್ಲಿ ಅರ್ಚನಾ ಹಿರೇಮಠ,ಮಂಜುಳಾ ಹಿರೋಳ್ಳಿಮಠ,ಭಾರತಿ ಪತ್ತಾರ,ಚನ್ನಮ್ಮ ಭಜಂತ್ರಿ, ಸುನೀತಾ ತಾರಿವಾಳ,ಚನಬಸಯ್ಯ ಹಿರೋಳ್ಳಿಮಠ,ಶಿವಪುತ್ರಪ್ಪ ತಾರಿವಾಳ,ಬಾಬುಗೌಡ ಪಾಟೀಲ,ಶರಣಪ್ಪ ಅಮರಾವತಿ ಸಂಗಮೇಶ ಬಾದವಾಡಗಿ,ವಸಂತ ಮೇಲಿನಮನಿ,ನಿಂಗಪ್ಪ ಬಡಿಗೇರ,ಶೇಖರ ಬಡಿಗೇರ,ಮಲ್ಲಿಕಾರ್ಜುನ ತಳವಾರ,ಉಮೇಶ ಪತ್ತಾರ,ಬಸವರಾಜ ಭಜಂತ್ರಿ ಸೇರಿದಂತೆ ಅನೇಕರು ಇದ್ದರು.ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ. ಹುನಗುಂದ