ವಿದ್ಯುತ್ ಸಂಪರ್ಕ, ನಳದ ಸಂಪರ್ಕ, ಕಡತಕ್ಕೆ- ಪುರಸಭೆ ಯಿಂದ ಆದೇಶ.
ಮಾನ್ವಿ ಪೆ.01

ಆಲ್ದಾಳ್ ವೀರಭದ್ರಪ್ಪ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಿದ ಹಿನ್ನೆಲೆಯಲ್ಲಿ ಮಾನ್ವಿ ಪುರಸಭೆಯ ಮುಖ್ಯಾಧಿಕಾರಿ ಪರಶುರಾಮ ದೇವಮಾನೆ ಅವರು ವಿದ್ಯುತ್ ಸಂಪರ್ಕ ಹಾಗು ನಳದ ನೀರು ಸಂಪರ್ಕ ಕಡಿತ ಗೊಳಿಸಲು ಆದೇಶ ನೀಡಿದ್ದು. ಕೂಡಲೇ ಕಡಿತ ಮಾಡಬೇಕು ಎಂದು ಜನ ಸೇವಾ ಫೌಂಡೇಶನ್ ರಾಜ್ಯಾಧ್ಯಕ್ಷ ಜಾವಿದ್ ಖಾನ್ ಒತ್ತಾಯಿಸಿದರು.
ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ಸರಕಾರದ ನಿಯಮದ ಪ್ರಕಾರ ಆಲ್ದಾಳ್ ವೀರಭದ್ರಪ್ಪ ಅನುಮತಿ ಪಡೆಯದೆ ರಾಜಕಾರಣಿಗಳ ಪ್ರಭಾವದಿಂದ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಿ, ಮೊರಾರ್ಜಿ ದೇಸಾಯಿ ಇಂದಿರಾಗಾಂಧಿ ವಸತಿ ಶಾಲೆ ಕುರ್ಡಿ ವಿದ್ಯಾರ್ಥಿಗಳನ್ನು ಕೂಡಲೇ ಸ್ಥಳಾಂತರಿಸ ಬೇಕು ಎಂದು ಆಗ್ರಹಿಸಿದರು.
ಆಲ್ದಾಳ್ ವೀರಭದ್ರಪ್ಪ ಅಕ್ರಮವಾಗಿ ಕಟ್ಟಡ ಕಟ್ಟಿದ್ದಾರೆಂದು ಲೋಕಾಯುಕ್ತದಲ್ಲಿ ದೂರು ಸಲ್ಲಿಸಲಾಗಿತ್ತು. ದೂರಿನ ಆಧಾರದ ಮೇಲೆ ಪುರಸಭೆ ಅಧಿಕಾರಿಗಳು ಆದೇಶ ಹೊರಡಿಸಿ ವಿದ್ಯುತ್ ಸಂಪರ್ಕ ಹಾಗು ನಳದ ಸಂಪರ್ಕ ಕಡತಕ್ಕೆ ಆದೇಶ ಹೊರಡಿಸಿದ್ದು. ಪರಶುರಾಮ ದೇವಮಾನೆ ಅವರಿಗೆ ನಮ್ಮ ಸಂಘಟನೆ ವತಿಯಿಂದ ಧನ್ಯವಾದಗಳು ಸಲ್ಲಿಸುತ್ತೇನೆ ಎಂದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ