ಪೋತ್ನಾಳ್ ಗ್ರಾಮದ ವಿದ್ಯಾಭಾರತಿ ಶಾಲೆಯಲ್ಲಿ 2 ನೇ. ತರಗತಿಯ ವಿದ್ಯಾರ್ಥಿನಿ – ಮೇಲೆ ಶಿವನಗೌಡನಿಂದ ಅತ್ಯಾಚಾರ.
ಮುದ್ದುಂಗುಡ್ಡಿ ಫೆ.06

ಕಾಮುಕರ ಮನಸ್ಥಿತಿ ಯಾವ ರೀತಿ ಇರುತ್ತದೆ ಹುಷಾರಾಗಿರಿ ಎಂದು ಸರಕಾರ ಆಗಾಗ್ಗೆ ತಿಳಿ ಹೇಳುತ್ತಿರುತ್ತದೆ. ಆದರೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಮುದ್ದಂಗುಡ್ಡಿ ಪುಟ್ಟ ಕಂದಮ್ಮಳ ಮೇಲೆ ಶಿವನಗೌಡ ಎಂಬ ವ್ಯಕ್ತಿ ಅತ್ಯಾಚಾರ ಎಸಗಿದ್ದು, ಫೋಕ್ಸೋ ಪ್ರಕರಣ ದಾಖಲಾಗಿದೆ.

ಮಾನ್ವಿ ತಾಲೂಕಿನ ಮುದ್ದುಂಗುಡ್ಡಿ ಗ್ರಾಮದ ಪುಟ್ಟ ಕಂದಮ್ಮ ಪೋತ್ನಾಳ ಗ್ರಾಮದ ರಾಜು ತಾಳಿಕೋಟಿ ಅವರ ವಿದ್ಯಾ ಭಾರತಿ ಶಾಲೆಯಲ್ಲಿ ಎರಡನೆ ತರಗತಿಯಲ್ಲಿ ಓದುತ್ತಿದ್ದಳು. ಪೋಷಕರು ಬಂದ ನಂತರ ಮಕ್ಕಳನ್ನು ಹೊರಗಡೆ ಕಳಿಸಬೇಕು. ಆದರೆ ಪೋತ್ನಾಳ ಗ್ರಾಮದಲ್ಲಿರುವ ವಿದ್ಯಾ ಭಾರತಿ ಶಾಲೆಯ ಸಿಬ್ಬಂದಿ ಯಿಂದ ಅತ್ಯಾಚಾರ ಕ್ಕೊಳಗಾದ ಪುಟ್ಟ ಕಂದಮ್ಮಳಿಗೆ ಸಂಬಂಧಿಕರಲ್ಲದಿದ್ದರೂ ಶಿವನಗೌಡ ರೊಂದಿಗೆ ಬೈಕ್ ನಲ್ಲಿ ಕಳಿಸಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಪೋಷಕರ ಆರೋಪವಾಗಿದೆ.
ಅತ್ಯಾಚಾರಕ್ಕೊಳಗಾದ ಪುಟ್ಟ ಕಂದಮ್ಮಳನ್ನು ಪೋಷಕರು ಮಾನ್ವಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ರಾಯಚೂರು ರಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪೊಲೀಸ್ ಇಲಾಖೆ ಸಿಬ್ಬಂದಿ ತನಿಖೆ ನಡೆಸಿ ಆರೋಪಿ ಶಿವನಗೌಡನನ್ನು ಬಂಧಿಸಿ ಮಾನ್ವಿ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ