ನಾಲ್ಕು ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ, ನಂತರ ಕೊಲೆಗೈದು ಪೆಟ್ಟಿಗೆಯಲ್ಲಿ ಮುಚ್ಚಿಟ್ಟ ಘಟನೆ ಖಂಡಿಸಿ – ಇಂಡಿ ಯುಥ್ ಕರೇಜ್ ಅಸೋಸಿಯೇಷನ್ ಸಮಿತಿಯಿಂದ ಬೃಹತ್ ಪ್ರತಿಭಟನೆ.
ಇಂಡಿ ಫೆ.11

ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆಯ ಕರ್ಜಗಿಯಲ್ಲಿ ನಾಲ್ಕು ವರ್ಷದ ಬಾಲಕಿಯನ್ನು ಪಾಂಡುರಂಗ ಎಂಬ ವ್ಯಕ್ತಿ ಆ ಬಾಲಕಿಯನ್ನು ಪತ್ರಾಸ ಶೆಡ್ ನಲ್ಲಿ ಕರೆದೊಯ್ದು ಅತ್ಯಾಚಾರ ಮಾಡಿ, ನಂತರ ಕೊಲೆಗೈದು ಪೆಟ್ಟಿಗೆಯಲ್ಲಿ ಮುಚ್ಚಿಟ್ಟ ಘಟನೆಯೊಂದು ನಡೆದಿದೆ. ಇಂತಹ ಅತ್ಯಾಚಾರ ಮಾಡಿದ ಆರೋಪಿಗೆ ಗಲ್ಲು ಶಿಕ್ಷೆಗೆ ಗುರಿ ಪಡಿಸ ಬೇಕೆಂದು ಇಂದು ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ “ಇಂಡಿ ಯುಥ್ ಕರೇಜ್ ಅಸೋಸಿಯೇಶನ್ “ಸಮೀತಿ ಯಿಂದ ಬೃಹತ್ ಪ್ರಮಾಣದಲ್ಲಿ ಪ್ರತಿಭಟನೆ ಮಾಡಲಾಯಿತು.

ಈ ಪ್ರತಿಭಟನೆಯು ಪಟ್ಟಣದ ಪ್ರವಾಸಿ ಮಂದಿರ ದಿಂದ ಬಸವೇಶ್ವರ ವೃತ್ತದ ಮಾರ್ಗವಾಗಿ ಶಾಂತಿಯುತವಾಗಿ ಮಿನಿ ವಿಧಾನ ಸೌಧದ ಎದುರು ಕೆಲ ಸಮಯದ ವರೆಗೆ ಧರಣಿ ಕೂಡಲಾಯಿತು. ಈ ಪ್ರತಿಭಟನೆಯನ್ನುದ್ದೇಶಿಸಿ ಸಾಮಾಜೀಕ ಹೋರಾಟಗಾರರಾದ ಅಯೂಬ್ ನಾಟಿಕಾರ ಅವರು ಮಾತನಾಡಿ ಜಗತ್ತಿನಲ್ಲಿಯೆ ವಿವಿಧತೆ ಯಿಂದ ಕೂಡಿದ ಸರ್ವ ಶ್ರೇಷ್ಠ ದೇಶ ಅಂದರೆ ಅದು ನಮ್ಮ ದೇಶ.

ಇಂತಹ ದೇಶದಲ್ಲಿ ಮಾನವೀಯತೆ ಮೌಲ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇರಬೇಕು. ಮಾನವೀಯತೆಯ ಮೌಲ್ಯಕ್ಕೆ ಧಕ್ಕೆ ತರುವ ಯಾವುದೇ ಧರ್ಮದ, ಯಾವುದೇ ಜನಾಂಗದ ಕುಕೃತ್ಯಕ್ಕೆ ಇಂಚಿಂಚು ಕಡಿಯಬೇಕು. ನಾವೇಲ್ಲರೂ ಮನುಷ್ಯರು ಮನುಷ್ಯರಾಗಿ ಬಾಳಬೇಕು. ಕಾಡು ಮೃಗಗಳಾಗ ಬಾರದು, ಅದೇ ರೀತಿ ನಾಲ್ಕು ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿದ ಆರೋಪಿಗೆ ಆದಷ್ಟು ಬೇಗನೆ ಗಲ್ಲು ಶಿಕ್ಷೆಯಾಗಬೇಕು. ಆ ಗಲ್ಲು ಶಿಕ್ಷೆ ಇಡೀ ಜಗತ್ತು ನೋಡುವಂತಾಗ ಬೇಕು. ಆವಾಗ ಮಾತ್ರ ಅತ್ಯಾಚಾರಿಗಳಿಗೆ ಕಡಿವಾಣ ಬೀಳಲು ಸಾಧ್ಯ ಎಂದು ಹೇಳಿದರು.

ನಂತರ ಆರ್.ಬಿ.ಐ (ಅ) ದ ಅಧ್ಯಕ್ಷರಾದ ನಾಗೇಶ ತಳಕೇರಿಯವರು ಮಾತನಾಡಿ ತಪ್ಪು ಮಾಡುವ ಅತ್ಯಾಚಾರಿಗಳು ಯಾರೆ ಆಗಿರಲಿ ಅಂತಹ ಅತ್ಯಾಚಾರಿಗಳನ್ನು ಸಾರ್ವಜನಿಕರ ಕೈಯಲ್ಲಿ ಶಿಕ್ಷಿಸುವಂತೆ ಸರ್ಕಾರ ಕೊಡಬೇಕು ಆವಾಗ ಗೊತ್ತಾಗುತ್ತದೆ ತಪ್ಪು ಮಾಡಿದ ವ್ಯಕ್ತಿಗೆ ನರಕ ಯಾತನೆ ಎಂತಹದ್ದು ಅಂತಾ. ನಮ್ಮ ಹೋರಾಟ ಆತನಿಗೆ ಗಲ್ಲು ಶಿಕ್ಷೆಗೆ ಗುರಿ ಪಡಿಸುವವರೆಗೂ ಮುಂದುವರೆಯುತ್ತದೆ ಎಂದು ಹೇಳಿದರು. ಮನವಿಯನ್ನು ಮಾನ್ಯ ಉಪ ವಿಭಾಗಾಧಿಕಾರಿ ಇಂಡಿ ಇವರ ಮುಖಾಂತರ ಮಾನ್ಯ ಘನತೆವೆತ್ತ ರಾಜ್ಯಪಾಲರಿಗೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ವಿವಿಧ ಸಂಘಟನೆಯ ಸಂಘಟನಾಕಾರರು ಭಾಗಿಯಾಗಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶಿವಾನಂದ.ಬಿ.ಹರಿಜನ.ಇಂಡಿ