4 ವರ್ಷದ ಬಾಲಕ ಗ್ರ್ಯಾಂಡ್ ಮಾಸ್ಟರ್ – ಆರ್ಯವರ್ಧನ ಕೋಟೆ “ಸಂಗಮ ಶ್ರೀ”.
ತಿರ್ಲಾಪುರ ಫೆ.11

ಹೊಳೆ ಆಲೂರಿನ ತಿರ್ಲಾಪುರ ಗ್ರಾಮದ ಆರ್ಯವರ್ಧನ ಕೋಟಿ ಈತನಿಗೆ “ಸಂಗಮಶ್ರೀ” ಪ್ರಶಸ್ತಿಯನ್ನು ಎಜುಕೇಷನಲ್ ಟ್ರಸ್ಟ್,ದಾವಣಗೆರೆ ಇವರು ನಡೆಸಿದ “ಅರಿವಿನ ಉತ್ಸವ” ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಕೊಟ್ಟು ಗೌರವಿಸಿದರು ಈ ಕಾರ್ಯಕ್ರಮವು ಪಂಚಲಿಂಗ ಎಜುಕೇಷನಲ್ ಟ್ರಸ್ಟ್ (ರಿ) ದಾವಣಗೆರೆ ಇವರು ನಡೆಸಿದ “ಅರಿವಿನ ಉತ್ಸವ” ಕಾರ್ಯಕ್ರಮದ ದಿವ್ಯ ಅಧ್ಯಕ್ಷತೆ ವಹಿಸಿ ಕೊಂಡಂತಹ ಜಗದ್ಗುರು ಶ್ರೀ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮಿಗಳು ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠ ಕೂಡಲ ಸಂಗಮ.

ಹಾಗೂ ಅಧ್ಯಕ್ಷರು ಪಿ.ಎಲ್. ಇ ಟ್ರಸ್ಟ್ ದಾವಣಗೆರೆ ಇವರು ಕಾರ್ಯಕ್ರಮ ಉದ್ದೇಶೀಸಿ ಗ್ರ್ಯಾಂಡ್ ಮಾಸ್ಟರ್ ಖ್ಯಾತಿಯ ಆರ್ಯವರ್ಧನ್ ಕೋಟಿ ಈತನಿಗೆ “ಸಂಗಮಶ್ರೀ” ಪ್ರಶಸ್ತಿಯನ್ನು ನೀಡುವುದು ಒಂದು ದೊಡ್ಡ ಸಂತೋಷದ ವಿಷಯ ಏಕೆಂದರೆ ಈ ಬಾಲಕ ಉತ್ತರ ಕರ್ನಾಟಕದ ಸ್ಮಾಲ್ ಕಂಪ್ಯೂಟರ್ ಮತ್ತು ಸ್ಮಾಲ್ ಗೂಗಲ್ ಎಂದು ವರ್ಣಿಸಿ ಮಾತನಾಡಿದರು.ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಜಿ.ಎಂ ಗಂಗಾಧರ ಸ್ವಾಮಿ ಐ.ಎ.ಎಸ್ ಮಾನ್ಯ ಜಿಲ್ಲಾಧಿಕಾರಿಗಳು, ದಾವಣಗೆರೆ, ಡಾಕ್ಟರ್ ಸುರೇಶ್ ಹಿಟ್ನಾಳ ಐ.ಎ.ಎಸ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು, ಜಿ.ಪಂ ದಾವಣಗೆರೆ, ಎಂ.ಎಸ್ ಸಂತೋಷ್ ಕುಮಾರ್ ಅಧ್ಯಕ್ಷರು, ದಾವಣಗೆರೆ ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಒಕ್ಕೂಟ, ಪಂಚಲಿಂಗ ಎಜುಕೇಶನಲ್ ಟ್ರಸ್ಟ್ (ರಿ) ದಾವಣಗೆರೆ ಇದರ ಕಾರ್ಯದರ್ಶಿಗಳಾದ ಮಂಜುನಾಥ್ ಅಡಿಗ ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್. ವಿ ಸಂಕನಗೌಡ್ರ.ರೋಣ.ಗದಗ