ಕುಡಿಯುವ ನೀರು, ಮಹಿಳೆಯರಿಗೆ ಸೌಲಭ್ಯ ನೀಡದ – ತಹಸೀಲ್ದಾರ್ ರಾಜು ಫಿರಂಗಿ
ಮಾನ್ವಿ ಫೆ.13

ತಾಲೂಕಿನ ನೀರಮಾನ್ವಿ ಯಲ್ಲಮ್ಮ ದೇವಿಯ ಜಾತ್ರೆ ಫೆ,17 ರಂದು ಜರುಗಲಿದ್ದು, ಆದರೆ ಸರಕಾರಕ್ಕೆ ಆದಾಯ ತರಬೇಕಾದ ತಹಸೀಲ್ದಾರ್ ರಾಜು ಫಿರಂಗಿ ಕಡಿಮೆ ಮೊತ್ತದಲ್ಲಿ ಹರಾಜು ಮಾಡಿ ಸರಕಾರಕ್ಕೆ ವಂಚಿಸಿದ್ದಲ್ಲದೆ ಭಕ್ತರಿಗೆ ಯಾವುದೇ ಸೌಲಭ್ಯ ನೀಡದಿರುವುದು ಬೆಳಕಿಗೆ ಬಂದಿದೆ.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ನೀರಮಾನ್ವಿ ಯಲ್ಲಮ್ಮ ದೇವಸ್ಥಾನದಲ್ಲಿ ನಡೆಯುವ ಜಾತ್ರೆಗೆ ಆಂಧ್ರ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ಕರ್ನಾಟಕದ ನಾನ ಜಿಲ್ಲೆಗಳಿಂದ ಭಕ್ತರು ಆಗಮಿಸುತ್ತಾರೆ. ಆದರೆ ಮಹಿಳಾ ಭಕ್ತರು ಬಯಲಲ್ಲೆ ಸ್ನಾನ ಮಾಡಬೇಕಾಗಿದ್ದು, ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಬಯಲು ಜಾಗದಲ್ಲಿಯೇ ಶೌಚಾ ಮಾಡ ಬೇಕಾದ ಭಕ್ತರ ಕರ್ಮವಿದು.
ಸರಕಾರಕ್ಕೆ ಕೋಟ್ಯಾಂತರ ರೂಪಾಯಿ ಆದಾಯ ಬಂದರು ತಹಸೀಲ್ದಾರ್ ರಾಜು ಫಿರಂಗಿ ಕಂದಾಯ ನಿರೀಕ್ಷಕ ಚರಣ್ ಸಿಂಗ್ ಅವರು ಪೂರ್ವಭಾವಿ ಸಭೆ ನಡೆಸದೆ. ಸರ್ವಾಧಿಕಾರಿಯ ಆಡಳಿತ ನಡೆಸಿ ಸರಕಾರಕ್ಕೆ ಲಕ್ಷಾಂತರ ರೂಪಾಯಿ ಆದಾಯ ತರದೆ ಮೋಸ ಮಾಡಿದ್ದಾರೆಂದು ಬಿಜೆಪಿ ಮಂಡಲ ಅಧ್ಯಕ್ಷ ಸುಧಾಕರ್ ಕಿಡಿಕಾರಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ

