ಮನಃ ಶಾಂತಿ ಬೇಕಿದ್ದರೆ ಪರದೋಷ ನೋಡಬೇಡಿ – ಶ್ರೀಮತಿ ಹೆಚ್.ಲಕ್ಷ್ಮೀದೇವಮ್ಮ.
ಚಳ್ಳಕೆರೆ ಏ.27

ಶ್ರೀಮಾತೆ ಶಾರದಾದೇವಿ ಅವರು ಹೇಳಿದಂತೆ ನಮಗೆ ಮನಃ ಶಾಂತಿ ಬೇಕಿದ್ದರೆ ಪರದೋಷ ನೋಡಬೇಡಿ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಹೆಚ್ ಲಕ್ಷ್ಮೀದೇವಮ್ಮ ಹೇಳಿದರು. ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಎಂ.ಗೀತಾ ನಾಗರಾಜ್ ಅವರ ಶಾಂತಿ ನಗರದ ಸಮೃದ್ಧಿ ನಿವಾಸದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಶಾರದಾ ಮಾತೆಯವರ ಜೀವನ ಮತ್ತು ಸಂದೇಶಗಳ ಬಗ್ಗೆ ಉಪನ್ಯಾಸ ನೀಡಿದರು.

ಶುದ್ಧವಾದ ಮನಸ್ಸೇ ಮನುಷ್ಯನಿಗೆ ದಾರಿ ತೋರಿಸುತ್ತದೆ. ಕ್ಷಮೆಯೇ ದೊಡ್ಡ ತಪಸ್ಸು, ತಾಳ್ಮೆಯೇ ಅತ್ಯಂತ ಶ್ರೇಷ್ಠ ಗುಣವಾಗಿದ್ದು ಮನುಷ್ಯ ತನ್ನ ಪಾಲಿಗೆ ಬಂದ ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ ಭಗವಂತನ ಪೂಜೆ ಎಂಬ ಭಾವನೆಯಿಂದ ಮಾಡಬೇಕು ಎಂದು ತಿಳಿಸಿದರು.

ಶ್ರೀಮಾತೆ ಶಾರದಾದೇವಿ ಅವರ ಜೀವನದ ಒಂದೊಂದು ಘಟನೆಯೂ ನಮ್ಮ ನಿತ್ಯ ಬದುಕಿಗೆ ದಾರಿ ದೀಪವಾಗಿದ್ದು. ಅವರ ಜೀವನ ಮತ್ತು ಸಂದೇಶಗಳ ಬೆಳಕಿನಲ್ಲಿ ನಾವು ಸಾರ್ಥಕ ಬದುಕನ್ನು ಕಟ್ಟಿ ಕೊಳ್ಳಬೇಕಿದೆ ಎಂದರು. ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ ಪಠಣ, ವಿಶೇಷ ಭಜನೆ ಮತ್ತು “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ ಕಾರ್ಯಕ್ರಮವನ್ನು ಯತೀಶ್.ಎಂ ಸಿದ್ದಾಪುರ ನಡೆಸಿ ಕೊಟ್ಟರು.

ಈ ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಎಂ.ಗೀತಾ ನಾಗರಾಜ್, ನಿರ್ಮಲ ಸಂಗಮೇಶ್, ಮಲ್ಲಿಕಾ ಶಿವಕುಮಾರ್, ಸುನಂದ ಶಿವಣ್ಣ, ಅನಿರುದ್ಧ, ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ಗೀತಾ ವೆಂಕಟೇಶ್ ರೆಡ್ಡಿ, ಪಂಕಜ ಚೆನ್ನಪ್ಪ, ಗೀತಾ ಸುಂದರೇಶ್, ಶುಭ ಸೋಮಶೇಖರ್, ಮೋಹಿನಿ, ಮಲ್ಲಿಕಾ ರುದ್ರೇಶ್, ಪದ್ಮ ರಾಮಚಂದ್ರಪ್ಪ, ದೀಕ್ಷಾ, ವಿನುತ ವಿನಯ್, ಚಂದನ, ವಿದ್ಯಾ ವಿನಯ್, ಈಶಾನ್, ದಿಶಾನ್, ರಾಜೇಶ್ವರಿ ಜಗದೀಶ್, ಬಿ.ಟಿ ಗಂಗಾಂಬಿಕೆ, ಕವಿತ ವೆಂಕಟೇಶ್, ಗಾಯನ, ಗಾಯತ್ರಿ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.
ವರದಿ:ಯತೀಶ್.ಎಂ ಸಿದ್ದಾಪುರ, ಚಳ್ಳಕೆರೆ.