“ವಿಶ್ವ ಪುರುಷ ದಿನ ಜಗದಲಿ ಹರುಷ ತರಲಿ”…..

ಪುರುಷ ಜಗಕೆ ಹರುಷ
ವಂಶವೃಕ್ಷ ಹೆಸರು ಹಸಿರು
ದೇಶ ಹಿತ ರಕ್ಷಕನಾಗಿ ಭೂಮಿಗೆ ರೈತನಾಗಿ
ಸರ್ವರ ಜೀವಕಣ ಉಳಿವಿಗೆ ಬೆಳಕಾಗಿ
ತಂದೆ ತಾಯಿಗೆ ತಕ್ಕ ಮಗನಾಗಿ
ಕುಟುಂಬದ ಸರ್ವಾಂಗಿಣ ಅಭಿವೃದ್ಧಿ
ಯಜಮಾನನಾಗಿ
ಹೆಂಡತಿಯ ಆಸೆಗೆ ತಕ್ಕ ಗಂಡನಾಗಿ ಮಕ್ಕಳ
ಶ್ರಯೋಭಿವೃದ್ಧಿಗೆ ತಂದೆಯ
ಶ್ರಮ ಸಾರ್ಥಕತೆ
ದೊಡ್ಡಪ್ಪ ಚಿಕ್ಕಪ್ಪ ಮೊಮ್ಮಕ್ಕಳಿಗೆ ಆನಂದ
ಅಮೃತ ಸವಿ
ತಾತ ಹಿರಿತನದ ಅನುಭವ ಮಾರ್ಗ ದರ್ಶನ
ಅಣ್ಣ ಅಕ್ಕನಿಗೆ ಸಕ್ಕರೆಯ ಅಕ್ಕರೆ ತಮ್ಮನ್ನಾಗಿ
ತಂಗಿ ತಮ್ಮನಿಗೆ ಕಕುಲತೆ ಕರುಣೆ ಕಣ್ಮಣಿ
ಅಣ್ಣನಾಗಿ
ಹಿತವರಿಗೆ ಸಹಾಯ ಹಸ್ತ ಸ್ನೇಹಿತನಾಗಿ ಜಗದಿ
ಮರೆಯದ ಮಾಣಿಕ್ಯ ಪುರುಷೋತ್ತಮನಾಗಿ
ಪುರುಷ ಜಗದ ಜಟ್ಟಿಯಾಗಿ
ಪುರುಷರ ಮೇಲಿನ ದೌರ್ಜನ್ಯತಡೆ
ಜವಾಬ್ದಾರಿತ ಸಮಾಜ ಸದಸ್ಯರ ಕರ್ತವ್ಯ
ವಯೋವೃದ್ಧ ಪುರುಷರ ಪ್ರೀತಿ ಆರೖಕೆ ಸರ್ವ
ಪುರುಪರಿಗೆ ದೊರೆಯಲಿ ಬದುಕಿನ
ಯಾತ್ರೆಯಲಿ ನೆಮ್ಮದಿ ಜೀವನ ಸಾಗಲಿ “ವಿಶ್ವ
ಪುರುಷ ದಿನ ಜಗದಲಿ ಹರುಷ ತರಲಿ “
ಹೆಮ್ಮೆ ಪುರುಷ ವಿಶ್ವದಿನ ಶುಭ ತರಲಿ ಸರ್ವ
ಪುರುಷರ ಬಾಳ ಪಯಣದಲಿ
-ಶ್ರೀದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
ಬಾಗಲಕೋಟ.