ಚೆನ್ನಬಸಪ್ಪ ಮಿಂಚನಾಳ ಅವರಿಗೆ ರಾಜ್ಯ ಮಟ್ಟದ – ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ.
ಅರ್ಜುಣಗಿ ಕೆ.ಡಿ ಫೆ .18

ಇಂಡಿ ತಾಲೂಕಿನ ಅರ್ಜುಣಗಿ ಕೆ.ಡಿ ಶಾಲೆಯ ಸಹ ಶಿಕ್ಷಕ ಚನ್ನಬಸಪ್ಪ ಮಿಂಚನಾಳ ರವರಿಗೆ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ. ಭಾನುವಾರ ಮೈಸೂರಿನ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಚೇತನಾ ಪೌಂಡೇಷನ್ ಮತ್ತು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮೈಸೂರ ನುಡಿ ಸಡಗರ ಸಮಾರಂಭದಲ್ಲಿ ಚನ್ನಬಸಪ್ಪು ನಾ. ನಿಂಬಾಳ ಇವರಿಗೆ ನಾಡಿನ ಖ್ಯಾತ ಸಾಹಿತಿಗಳಾದ ಶ್ರೀ ಸಿ.ಪಿ ಕೃಷ್ಣಕುಮಾರ, ಮೈಸೂರ ಕಸಾಪ ಅಧ್ಯಕ್ಷ ಮುಡ್ಡಿಕೇರಿ ಗೋಪಾಲ ಡಾ, ಜೀ.ಶಿವಣ್ಣ ಡಾ, ಮೈಸೂರು ಉಮೇಶ ಡಾ, ಅಮ್ಮಸಂದ್ರ ಸುರೇಶ ಸೇರಿದಂತೆ ನಾಡಿನ ಹಲವಾರು ಸಾಹಿತಿಗಳ ಸಮ್ಮುಖದಲ್ಲಿ ರಾಜ್ಯ ಪ್ರಶಸ್ತಿ ನೀಡಲಾಯಿತು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಶಿವಾನಂದ. ಬಿ.ಹರಿಜನ.ಇಂಡಿ.ವಿಜಯಪುರ