ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ದಿಸೆಯಲ್ಲಿ ಸಾಹಿತ್ಯ ಕಲೆ ನಾಡು ನುಡಿ, ಜಲ, ನೆಲ, ಭಾಷೆಯ ಅಭಿಮಾನ ವಿರಬೇಕು – ಬಾಪೂಜಿ ಸಮೂಹ ಸಂಸ್ಥೆ ಕಾರ್ಯದರ್ಶಿ ಡಾ, ಕೆ.ಎಂ ವೀರೇಶ್.
ಕೆ.ಹೊಸಹಳ್ಳಿ ಫೆ. 18

ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ದಿಸೆಯಲ್ಲಿ ಸಾಹಿತ್ಯ ಕಲೆ ನಾಡು ನುಡಿ, ಜಲ, ನೆಲ, ಭಾಷೆಯ ಅಭಿಮಾನ ವಿರಬೇಕು. ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸ ಮಾಡಬೇಕು. ಉನ್ನತ ಹುದ್ದೆಗಳಿಗೆ ತಲುಪಬೇಕು. ಮತ್ತು ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಂತಹ ಕೆಲಸ ನಾವು ನೀವೆಲ್ಲರೂ ಮಾಡಬೇಕಾಗಿದೆ. ಎಂದು ರಾಜ್ಯ ಉಪಾಧ್ಯಕ್ಷರು ಶರಣ ಸಾಹಿತ್ಯ ಪರಿಷತ್ತು ಬಾಪೂಜಿ ಸಮೂಹ ಸಂಸ್ಥೆ ಕಾರ್ಯದರ್ಶಿ ಡಾ, ಕೆ.ಎಂ ವೀರೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಲ್ಲಿನ ಕಾನಾ ಹೊಸಹಳ್ಳಿ ಸೋಫಿಯಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶರಣ ಸಾಹಿತ್ಯ ಪರಿಷತ್ ಕೂಡ್ಲಿಗಿ ಇವರ ವತಿಯಿಂದ ವಿದ್ವಾನ್ ಶ್ರೀ ಬಿ.ಎಂ ಗುರು ಸಿದ್ದಯ್ಯನವರ ಸ್ಮರಣೆ ಹಾಗೂ ದತ್ತಿ ಉಪನ್ಯಾಸ ಮತ್ತು ಸೋ.ಮ ಚಂದ್ರಶೇಖರಯ್ಯ ಲೋಲಾಕ್ಷಮ್ಮ ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆಯಿತು. ವಿದ್ವಾನ್ ಬಿ.ಎಂ ಗುರುಸಿದ್ದಯ್ಯನವರ ಜೀವನ ಸಂದೇಶ ಕುರಿತು ಮಾತನಾಡಿ ಇವರು ವೃತ್ತಿಯಲ್ಲಿ ಶಿಕ್ಷಕರಾದರು ಸಹ ಪ್ರವೃತ್ತಿಯಲ್ಲಿ ಜ್ಯೋತಿಷ್ಯ, ಆಯುರ್ವೇದ ಪಂಡಿತರು, ಜೊತೆಗೆ ಸಾಹಿತಿ ಹಾಗೂ ಕನ್ನಡ ಪಂಡಿತರೆಂದೆ ಈ ಭಾಗದಲ್ಲಿ ಖ್ಯಾತಿ ಪಡೆದಿದ್ದರು. ಕನ್ನಡ ಸಂಸ್ಕೃತ ವೈದಿಕ ಅಧ್ಯಾತ್ಮ ಗುರುಸಿದ್ದಯ್ಯನವರು ಎಂಥ ಕಠಿಣ ವಿಷಯದ ಬಗ್ಗೆ ನಿರರ್ಗಳವಾಗಿ ಮಾತನಾಡ ಬಲ್ಲವರಾಗಿದ್ದರು ಎಂದು ಹೇಳಿದರು. ಸಮಾಜದಲ್ಲಿ ಶಿಕ್ಷಕರ ಪಾತ್ರ ಕುರಿತು ವಿದ್ಯಾರ್ಥಿಗಳಿಗೆ ಸವಿವರವಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಎನ್.ಎಂ ರವಿಕುಮಾರ್ ಪ್ರಸ್ತಾವಿಕವಾಗಿ ಮತ್ತು ದತ್ತಿ ಉಪನ್ಯಾಸ ಮಾತನಾಡಿ ಕೂಡ್ಲಿಗಿ ತಾಲೂಕಿನಲ್ಲಿ ವಿದ್ವಾಂಸರೆಂದರೆ ಬಿ.ಎಮ್ ಗುರು ಸಿದ್ದಯ್ಯನವರು, ಕೋ ಚನ್ನಬಸಪ್ಪ, ಹಿಮ ನಾಗಯ್ಯ, ವೃಷಭೇಂದ್ರ ಸ್ವಾಮಿ, ಸೋ.ಮ ಚಂದ್ರಶೇಖರಯ್ಯ ಸೇರಿದಂತೆ ಅನೇಕ ವಿದ್ವಾಂಸರು ಈ ನಾಡಿಗೆ ತನ್ನದೇ ಆದ ಕೊಡುಗೆಯನ್ನು ಕೊಟ್ಟಿದ್ದಾರೆ ಎಂದರು. ಮತ್ತು ಶರಣ ಸಾಹಿತ್ಯ ಪರಿಷತ್ತು ನಡೆದು ಬಂದ ದಾರಿಯ ಕುರಿತು ಮಾತನಾಡಿದರು .ಈ ಸಂದರ್ಭದಲ್ಲಿ ಬಿ.ಎಂ ಪ್ರಭುದೇವ್ ಮಾತನಾಡಿ ನಮ್ಮ ತಂದೆಯವರು ಹಳೆಗನ್ನಡ ಕಾವ್ಯಗಳನ್ನು ಸುಶಾವ್ಯವಾಗಿ ಗಮಕಿಗಳಂತೆ ಪ್ರೀತಿ ವಿದ್ಯಾರ್ಥಿಗಳ ಹೃದಯಕ್ಕೆ ಆಳಕ್ಕೆ ಇಳಿಯುವಂತೆ ಬೋಧನೆ ನಡೆಸುತ್ತಿದ್ದರು. ಹಾಗೆಯೇ ಜ್ಯೋತಿಷ್ಯ ಶಾಸ್ತ್ರವನ್ನು ಆಳವಾಗಿ ಅಧ್ಯಯನ ಮಾಡಿದ್ದು. ಶರಣರ ವಚನಗಳನ್ನು. ಪ್ರಭುಲಿಂಗ ಲೀಲೆ, ಶೂನ್ಯ ಸಂಪಾದನೆಂತಹ ಗ್ರಂಥಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ 1996.ರಲ್ಲಿ ಕೂಡ್ಲಿಗಿಯಲ್ಲಿ ಬಳ್ಳಾರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಸಮ್ಮೇಳನ ನಡೆಸಿತು ಆ ಸಮ್ಮೇಳನದ ಅಧ್ಯಕ್ಷತೆಯನ್ನು ಗುರುಸಿದ್ದಯ್ಯನವರಿಗೆ ನೀಡಿ ಗೌರವಿಸಲಾಗಿದೆ ಎಂದರು. ಇದೇ ಸಂದರ್ಭದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕದಳಿ ವೇದಿಕೆ ಅಧ್ಯಕ್ಷ ಇಂದುಮತಿ ತಿಪ್ಪೇಸ್ವಾಮಿ, ಶರಣ ಸಾಹಿತ್ಯ ಪರಿಷತ್ತಿನ ಖಜಾಂಚಿ ಕೆ.ಜಿ ಕುಮಾರ ಗೌಡ, ಹೊಂಬಾಳೆ ರೇವಣ್ಣ, ಬಿ.ಎಮ್ ರಾಜಶೇಖರ್, ಶರಣಗೌಡ್ರು ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿದ್ದರು ಸಾ. ಮ.ಸಂಗಮೇಶ್ವರಯ್ಯ, ಹಿರಿಯ ಕವಿಗಳಾದ ಯು ಜಗನ್ನಾಥ್ ,ಉಮೇಶ್ ಹೆಚ್ ಎಂ , ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಕೆ..ಎಸ್.ವೀರೇಶ್, ಹೆಚ್. ಬಿ ಕಣ್ಣಿ , ಶಿವಪ್ರಕಾಶ್ ಕೆಂಚಮ್ಮನಹಳ್ಳಿ, ಪ್ರಭು ಶಂಕರ,ವಸಂತ್ ಸಜ್ಜನ್ , ಶರಣಗೌಡ, ಮಂಜುನಾಥ್, ಕೂಡ್ಲಿಗಿ ನೂತನ ಕದಳಿ ವೇದಿಕೆ ಅಧ್ಯಕ್ಷ ತಿಪ್ಪಿರಮ್ಮ, ಕೆಎಂ ಸುಮತಿ, ಸೇರಿದಂತೆ ಇದೇ ಸಂದರ್ಭದಲ್ಲಿ ಶರಣ ಸಾಹಿತ್ಯ ಪರಿಷತ್ತಿನ 5 ದತ್ತಿ ಸ್ವೀಕರಿಸಿದರು,ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರು ಸಿಬ್ಬಂದಿ ವರ್ಗ ಹಾಗೂ ಸೋಪಿಯಾ ಹಿ. ಪ್ರಾ ಶಾಲೆ. ಸೇರಿದಂತೆ ವಿದ್ಯಾರ್ಥಿ ವಿದ್ಯಾರ್ಥಿನಿಯರು ಇತರರು ಸಾರ್ವಜನಿಕರು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್.ಕೆ.ಹೊಸಹಳ್ಳಿ